ಯಾದಗಿರಿ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಕರ್ನಾಟಕ ರಾಜ್ಯದ ೩೦ನೇ ಜಿಲ್ಲೆಯಾಗಿ ಯಾದಗಿರಿ ಏಪ್ರಿಲ್ ೧೦, ೨೦೧೦ ರಂದು ಅಸ್ತಿತ್ವಕ್ಕೆ ಬಂತು. ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆಯಾಗಿದೆ. ಸಂಪುಟ ಸಭೆಯಲ್ಲಿ ಆಗಸ್ಟ ೨೭, ೨೦೦೮ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಡಿಸೆಂಬರ ೨೩ ೨೦೦೯ ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದರು.

ಯಾದಗಿರಿ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿತ್ತು. ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ.

ಪ್ರಮುಖ ಕಾರ್ಯಗಳು:
  1. ಹೊಸ ಜಿಲ್ಲೆ ರಚನೆಗೆ ಪೂರ್ವಸಿದ್ಧತೆ ನಡೆಸಲು ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ
  2. ಕಂದಾಯ ಗ್ರಾಮ,
  3. ತಾಲ್ಲೂಕು ರಚನೆ
  4. ಉಪವಿಭಾಗ ಹಾಗೂ ಜಿಲ್ಲೆಯ ಗಡಿಗಳ ರಚನೆ
  5. ವಿವಿಧ ಕಚೇರಿಗಳ ಸಂಕೀರ್ಣ ನಿರ್ಮಾಣ ಸಂಬಂಧ ನಿವೇಶನ ಗುರುತಿಸಲು ಸ್ಥಳ ಪರಿಶೀಲನೆ ಕಾರ್ಯ ಮುಗಿದಿದೆ.

ಯಾದಗಿರಿ ಜಿಲ್ಲೆಯ ತಾಲ್ಲೂಕುಗಳು:
  1. ಯಾದಗಿರಿ ಜಿಲ್ಲೆ
  2. ಶಹಾಪುರ
  3. ಸುರಪುರ
ಯಾದಗಿರಿ:
ಯಾದಗಿರಿ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಒಂದು ಜಿಲ್ಲಾ ಕೇಂದ್ರ. ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ.

ರೈಲು ಸಾರಿಗೆ:
ಯಾದಗಿರಿಯ ರೈಲ್ವೆ ವ್ಯವಸ್ಥೆಯು ಭಾರತೀಯ ರೈಲ್ವೆಯ ದಕ್ಷಿಣ ಮಧ್ಯ ರೈಲ್ವೆ ವಲಯದ ಅಡಿಯಲ್ಲಿ ಬರುತ್ತದೆ. ಯಾದಗರಿ ಸಿಟಿ ರೈಲು ನಿಲ್ದಾಣವು ಭಾರತೀಯ ರೈಲ್ವೆಯ ಮೂಲಕ ದೇಶದ ಉಳಿದ ಭಾಗಗಳ ಜೊತೆ ಸಂಪರ್ಕ ಹೊಂದಿದೆ. ಯಾದಗಿರಿಯು ರೇಲ್ವೆಯ ಮೂಲಕ ಭಾರತ ಹಾಗೂ ಕರ್ನಾಟಕದ ಬಹುತೇಕ ಸ್ಥಳಗಳ ಜೊತೆ ಸಂಪರ್ಕ ಹೊಂದಿದೆ. ಯಾದಿಗಿರಿ ಜಿಲ್ಲೆಯಲ್ಲಿ ಒಂದು ಬೆಟ್ಟವಿದೆ. ಅದು ಬಹಳಷ್ಟು ದೊಡ್ಡದಾಗಿದೆ. ಆ ಬೆಟ್ಟದಲ್ಲಿ ದೇವಿಯ ದೇವಸ್ಥಾನವಿದೆ. ಅದರ ವಿಶೇಷತೆಯನ್ನು ಯುಗಾದಿ ಹಬ್ಬದಂದು ನೋಡಬಹುದು.

ಭೂ ಸಾರಿಗೆ:
ಯಾದಗಿರಿ ಜಿಲ್ಲೆಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಲು ಬಸ್ಸುಗಳ ವ್ಯವಸ್ಥೆ ಇದೆ.

loading...