ಆಕರ್ಷಕವಾದ ಮುಖ ನಿಮ್ಮದಾಗಬೇಕೆ?

Published on:  2016-09-09
Posted by:  Admin

ಒಬ್ಬ ಮನುಷ್ಯ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂದರೆ ಆತನ ಮುಖ ಸುಂದರವಾಗಿ ಹೊಳೆಯುತ್ತಿರಬೇಕು. ಅದಕ್ಕಾಗಿ ಮುಖದಲ್ಲಿ ಯಾವುದೇ ಕಲೆಗಳು ಕಾಣಿಸಿಕೊಳ್ಳಬಾರದು. ಸುಟ್ಟು, ಪಿಂಪಲ್‌ ಆಗಿ, ತುರಿಕೆಯಿಂದ ಅಥವಾ ಚಿಕನ್‌ ಪಾಕ್ಸ್‌ನಿಂದಾಗಿ ಮುಖದ ಮೇಲೆ ಕಲೆಗಳು ಕಾಣಿಸಿಕೊಳ್ಳುತ್ತದೆ. ಅವುಗಳ ನಿವಾರಣೆಗೆ ಹೆಚ್ಚು ಖರ್ಚು ಮಾಡಲು ನಿಮಗೆ ಇಷ್ಟವಿರದೇ ಇದ್ದರೆ, ಈ ಟಿಪ್ಸ್‌ಗಳನ್ನು ಪಾಲಿಸಿ, ಬೇಗನೆ ಕಲೆಗಳಿಗೆ ಮಂಗಳ ಹಾಡಬಹುದು.

 ನಿಂಬೆ ರಸ : ನಿಂಬೆ ರಸ ನಿಸರ್ಗದತ್ತ ಬ್ಲೀಚಿಂಗ್ ಏಜೆಂಟ್‌ನಂತೆ ಕೆಲಸ ಮಾಡುತ್ತದೆ. ಪನ್ನೀರು ಮತ್ತು ಸೌತೆಕಾಯಿ ಪೇಸ್ಟನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಅದರಲ್ಲಿ ಹತ್ತಿಯನ್ನು ಅದ್ದಿ. ಬಳಿಕ ಮುಖ, ಕತ್ತನ್ನು ಈ ಹತ್ತಿಯಿಂದ ಮೃದುವಾಗಿ ಉಜ್ಜಿ. ಒಣಗಿದ ಮೇಲೆ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ಕಡೆಲೆ ಹಿಟ್ಟು : ಎರಡು ಚಮಚ ಕಡಲೆ ಹಿಟ್ಟನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಿಟಿಕೆ ಅರಶಿನ, ಒಂದು ಚಮಚ ಹಾಲು, ಒಂದು ಚಮಚ ಕಿತ್ತಳೆ ರಸ ಮತ್ತು ಸ್ವಲ್ಪ ಪನ್ನೀರನ್ನು ಇದಕ್ಕೆ ಬೆರೆಸಿ. ಈ ಪೇಸ್ಟ್‌ನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ.

 ಅಕ್ಕಿ ಹಿಟ್ಟು : ಕಾಲು ಕಪ್ ಅಕ್ಕಿ ಹಿಟ್ಟಿಗೆ ಮಜ್ಜಿಗೆಯನ್ನು ಮಿಶ್ರಣ ಮಾಡಿ. ಇದನ್ನು ಮುಖ, ಕತ್ತು ಮತ್ತು ಕೈಗಳಿಗೆ ಹಚ್ಚಿ. ಇದು ಕಪ್ಪು ಕಲೆಗಳನ್ನು ನಿವಾರಿಸುವುದರ ಜೊತೆಗೆ ಮುಖಕ್ಕೆ ಸಾಕಷ್ಟು ತೇವಾಂಶ ಸಿಗುವಂತೆ ಮಾಡುತ್ತದೆ.

 ಐಸ್‌ ಕ್ಯೂಬ್‌ : ಇದು ಸಿಂಪಲ್‌ ರೆಮೆಡಿಯಾಗಿದೆ. ಐಸ್‌ಕ್ಯೂಬ್‌ ತೆಗೆದುಕೊಂಡು ಮುಖದ ಮೇಲೆ ಚೆನ್ನಾಗಿ ಮಸಾಜ್‌ ಮಾಡಿ.

ಅಲೋವೆರಾ : ಒಂದು ಅಲೋವೆರಾ ಎಲೆ ತೆಗೆದುಕೊಂಡು ಅದನ್ನು ಮಧ್ಯಭಾಗದಿಂದ ಕತ್ತರಿಸಿ ಅದರ ಜೆಲ್‌ ತೆಗೆದುಕೊಂಡು ಮುಖದ ಮೇಲೆ ಹಚ್ಚಿ ಮಸಾಜ್‌ ಮಾಡಿ.

ಟೀ ಟ್ರೀ ಆಯಿಲ್‌ : ಇದು ಅತ್ಯಂತ ಪರಿಣಾಮಕಾರಿ ನ್ಯಾಚುರಲ್‌ ರೆಮೆಡಿ. ಇದು ಬೇಗನೇ ಮುಖದ ಮೇಲಿನ ಕಲೆಗಳನ್ನು ತೆಗೆದು ಮುಖ ಹೊಳೆಯುವಂತೆ ಮಾಡುತ್ತದೆ.

ಜೇನು : ಮುಖದ ಮೇಲಿನ ಕಲೆಗಳಿಗೆ ಜೇನನ್ನು ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ.

ಶ್ರೀಗಂಧದ ಪುಡಿ : ಶ್ರೀಗಂಧದ ಪುಡಿಯನ್ನು ರೋಸ್‌ವಾಟರ್‌ ಮತ್ತು ಹಾಲಿನೊಂದಿಗೆ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಬೇಕು. ನಂತರ ಒಂದು ಗಂಟೆ ಬಿಟ್ಟು ಮುಖ ತೊಳೆಯಿರಿ.

ಬಾದಾಮಿ : 2-3 ಬಾದಾಮಿ ತೆಗೆದುಕೊಂಡು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ. ಮರುದಿನ ಅದನ್ನು ಪೇಸ್ಟ್‌ ಮಾಡಿ ರೋಸ್‌ ವಾಟರ್‌ ಜೊತೆಗೆ ಮುಖಕ್ಕೆ ಹಚ್ಚಿ.

ಆಲೂಗಡ್ಡೆ : ಹಸಿ ಆಲೂಗಡ್ಡೆ ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಕತ್ತರಿಸಿ ಮುಖದ ಮೇಲೆ ಮಸಾಜ್‌ ಮಾಡಿ. ಇದರಿಂದ ಕಲೆಗಳು ಮಾಯವಾಗುತ್ತವೆ.

ತೆಂಗಿನ ಎಣ್ಣೆ : ಮುಖದ ಮೇಲೆ ಕಲೆಗಳು ಮೂಡಿದಾಗ ತೆಂಗಿನ ಎಣ್ಣೆಯನ್ನು ಮುಖದ ಮೇಲೆ ಹಚ್ಚಿ.

">

loading...