ತರಕಾರಿಯ ಕುರ್ಮಾ

Published on:  2016-09-10
Posted by:  Admin

ಬೇಕಾಗುವ ಸಾಮಾನು :

 • ೫೦ ಗ್ರಾಂ ಹೂವುಕೋಸು (ಕಾಲಿಫ್ಲವರ್ )
 •  ೪ ಸಣ್ಣ ಈರುಳ್ಳಿ
 • ೫೦ ಗ್ರಾಂ ಬೀನ್ಸ್
 •  ೬೦ಗ್ರಾಂ ಆಲೂಗಡ್ಡೆ (ಬಟಾಟೆ )
 •  ೨ ಹಿಳುಕು ಬೆಳ್ಳುಳ್ಳಿ
 •  ೫೦ ಗ್ರಾಂ ಹಸಿ ಬಟಾಣಿ
 •  ೫೦ ಗ್ರಾಂ ಸವಿ ಮೂಲಂಗಿ (ಟರ್ನಿಫ್ )
 •  ೪ ಹಸಿ ಮೆಣಸಿನ ಕಾಯಿ
 •  ೫೦ ಗ್ರಾಂ ತೆಂಗಿನ ಹಾಲು (ತೆಂಗಿನಕಾಯಿಯನ್ನು ಹೆರೆದು ಬೇಯಿಸಿ ಹಿಂಡಿ ತೆಗೆದ ಹಾಲು )
 •  ೧ ಕಪ್ ಮೊಸರು
 •  ೨ ಸಣ್ಣ ತುಂಡು ದಾಲ್ಚಿನ್ನಿ
 •  ೩ ಲವಂಗ
 •  ೧/೨ ಟೀ ಚ . ಏಲಕ್ಕಿಪುಡಿ
 •  ೧ ೧/೨ ಟೀ ಚ. ಒಣ ಮನಸಿನಪುಡಿ
 •  ೭೫ ಗ್ರಾಂ ತುಪ್ಪ ಅಥವಾ ಎಣ್ಣೆ
 •  ರುಚಿಗೆ ಬೇಕಾಗುವಷ್ಟು ಉಪ್ಪು .
ಮಾಡುವ ವಿಧಾನ :
 1. ಲವಂಗ , ಏಲಕ್ಕಿ , ದಾಲ್ಚಿನ್ನಿ ಇವುಗಳನ್ನು ಕಾದ ತುಪ್ಪಕ್ಕೆ ಹಾಕಿ ಕರಿಯಿರಿ .
 2. ಅದಕ್ಕೆ ಈರುಳ್ಳಿ (ಹೆಚ್ಚಿ ) ಹಾಕಿ ಸ್ವಲ್ಪ ಕಾಲ ಕರಿಯಿರಿ .
 3. ನಂತರ ತರಕಾರಿಗಳನ್ನು ಕತ್ತರಿಸಿ ಹಕ್ ಇನ್ನು ಕರೆಯಿರಿ .
 4. ಈಗ ಅದಕ್ಕೆ ಮೊಸರು , ತೆಂಗಿನ ಹಾಲು , ಉಪ್ಪು , ಒಣಮೆಣಸಿನಪುಡಿ ಇವುಗಳನ್ನು ಸೇರಿಸಿ ಚೆನ್ನಾಗಿ ಕದಕಿ.
 5. ತರಕಾರಿ ಮೃದುವಾಗುವ ತನಕ (೧೫ - ೨೦ ನಿಮಿಷ ಕಾಲ ) ಬೇಯಿಸಿ ಕೆಳಗಿಳಿಸಿ.
 6. ನಂತರ ತರಕಾರಿಯ ಕುರ್ಮಾ ಸವಿಯಲು ಕೊಡಿ.

loading...