ಟೊಮೇಟೊ ಹಣ್ಣಿನಿಂದ ಸೌಂದರ್ಯದ ಉಪಯೋಗಗಳು

Published on:  2016-12-09
Posted by:  Admin

ಎಲ್ಲರೂ ಹೆಚ್ಚಾಗಿ ಕಾಳಜಿ ವಹಿಸುವುದು ತ್ವಚೆಯ ಬಗ್ಗೆ, ಅದರಲ್ಲೂ ಎಣ್ಣೆ ತ್ವಚೆ ಇರುವವರು ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ ಹೇಗೆಂದರೆ ಎಣ್ಣೆ ತ್ವಚೆಯ ಮೇಲೆ ಧೂಳು ಮತ್ತಿತರ ಸೂಕ್ಷ್ಮಾಣು ಜೀವಿಗಳು ಸುಲಭವಾಗಿ ತಮ್ಮ ಪ್ರಭಾವವನ್ನು ತೋರಿಸಬಹುದು, ಮೊಡವೆಗಳು ಅಥವಾ ಅಲರ್ಜಿಗಳಾಗಿ ಹೊರಗೆ ಎಲ್ಲೂ ಹೋಗದ ಸ್ಥಿತಿಗೆ ತಲುಪುವರು, ಕಾಸ್ಮೆಟಿಕ್ ವಸ್ತುಗಳನ್ನು ಉಪಯೋಗಿಸಿದರೆ ಅದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು, ಹಾಗಾಗಿ ಇಲ್ಲಿ ನಾವು ಮನೆಯಲ್ಲಿಯೇ ಸಿಗುವ ಟೊಮ್ಯಾಟೊವನ್ನು ಹೇಗೆ ಸೌಂದರ್ಯ ವರ್ದಕವಾಗಿ ಉಪಯೋಗಿಸಬಹುದೆಂದು ತಿಳಿಯೋಣ ಬನ್ನಿ.

ಟೊಮ್ಯಾಟೊನಲ್ಲಿ ಅತಿಹೆಚ್ಚಾಗಿ ಲಿಕೋಪೆನೆ (lycopene) ಅಂಶವಿದೆ. ಇದು ಚರ್ಮವನ್ನು ಹೊಳಪಾಗಿಸುವಲ್ಲಿ ಸಹಾಯಕವಾಗಿದೆ. ದಿನನಿತ್ಯ ಟೊಮ್ಯಾಟೊವನ್ನು ಸೇವಿಸುತ್ತಾ ಬಂದರೆ ಚರ್ಮವು ಹೊಳಪನ್ನು ಪಡೆಯುವುದು, ಚರ್ಮವು ಅತಿಹೆಚ್ಚಾಗಿ ಆಮ್ಲಜನಕವನ್ನು ತೆಗೆದುಕೊಳ್ಳುವಲ್ಲಿ ಟೊಮೇಟೊ ಉತ್ತೇಜಿಸುತ್ತದೆ ಇದರಿಂದ ಚರ್ಮವು ಸುಕ್ಕುಗಟ್ಟುವುದನ್ನು ತಡೆಗಟ್ಟಿ ವಯಸ್ಸು ಹೆಚ್ಚಾಗದಂತೆ ಕಾಣಿಸುವಲ್ಲಿ ಸಹಕಾರಿಯಾಗಿದೆ. ಟೊಮ್ಯಾಟೊವನ್ನು ಮುಖಕ್ಕೆ ಹಚ್ಚಿಕೊಂಡರೆ ಸೂರ್ಯನ ಬಿಸಿಲಿನ ಕಾರಣದಿಂದ ಆಗುವ ಕಪ್ಪು ಕಲೆಯನ್ನು ಹೋಗಲಾಡಿಸಿ ಮುಖವು ಆಕರ್ಷಕವಾಗಿ ಕಾಣಿಸುವುದು.

ಟೊಮ್ಯಾಟೊವಿನ ಸೌಂದರ್ಯ ಸಲಹೆಗಳುಮೊಡವೆಗಾಗಿ ಟೊಮೇಟೊ:
ಟೊಮ್ಯಾಟೋವಿನಲ್ಲಿ ವಿಟಮಿನ್ A  ಹಾಗು ವಿಟಮಿನ್ C ಇರುವುದರಿಂದ ಮೊಡವೆಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಅರ್ಧ ಭಾಗ ಟೊಮ್ಯಾಟೊವನ್ನು ತೆಗೆಂದು ಕೊಂಡು ಮುಖಕ್ಕೆ ವೃತ್ತಾಕಾರವಾಗಿ ಹಚ್ಚಬೇಕು, 10 ನಿಮಿಷದ ನಂತರ ಮುಖವನ್ನು ತೊಳೆದುಕೊಳ್ಳಿ, ಹೀಗೆ ವಾರದಲ್ಲಿ 3 ಅಥವಾ 4 ಭಾರಿ ಮಾಡಿದರೆ ಮೊಡವೆಗಳು ಕಡಿಮೆಯಾಗುತ್ತವೆ.SCRUB ರೀತಿಯಾಗಿ ಟೊಮೇಟೊ:
ತಾಜಾ ಟೊಮ್ಯಾಟೊವನ್ನು ತೆಗೆದುಕೊಂಡು ಅರ್ಧ ಭಾಗದಲ್ಲಿ ಒಂದು ಭಾಗವನ್ನು ಸಕ್ಕರೆಯ ಮಿಶ್ರಣದಲ್ಲಿ ನೆನೆಯಿಸಿ ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿರ್ಜೀವ ಜೀವಕೋಶಗಳನ್ನು ತೆಗೆದು ಹಾಕುತ್ತದೆ.ತೆರೆದ ರಂಧ್ರಗಳಿಗಾಗಿ ಟೊಮೇಟೊ:
ಎರಡು ಚಮಚ ಟೊಮೇಟೊ ರಸ ಹಾಗು ಎರಡು ಚಮಚ ನಿಂಬೆ ಹಣ್ಣಿನ ರಸವನ್ನು ಒಂದು ಬಟ್ಟಲಿನಲ್ಲಿ ಹಾಕಿಡಿ. ನಂತರ ಹತ್ತಿ (cotton ball) ಅನ್ನು ಆ ಮಿಶ್ರಣದಲ್ಲಿ ಅದ್ದಿ ನಿಧಾನವಾಗಿ ತೆರೆದ ರಂಧ್ರಗಳ ಮೇಲೆ ಹಚ್ಚಿ ಹತ್ತು ನಿಮಿಷದ ನಂತರ ತಣ್ಣೀರಿನಿಂದ ತೊಳೆಯಬೇಕು.ಸುಟ್ಟಗಾಯಕ್ಕೆ ಟೊಮೇಟೊ:
ತಾಜಾ ಟೊಮೇಟೊ ಹಾಗು ಅರ್ಧ ಕಪ್ ಮೊಸರನ್ನು ಒಂದು ಬಟ್ಟಲಲ್ಲಿ ಹಾಕಿ ಇವುಗಳ ಮಿಶ್ರವನ್ನು ಮಾಡಿ ಸುಟ್ಟ ಗಾಯದ ಮೇಲೆ ಹಚ್ಚುತ್ತಾ ಬಂದರೆ ಉರಿ ಕಡಿಮೆ ಆಗಿ ಗಾಯವು ಬೇಗ ವಾಸಿಯಾಗುವುದು ಅಲ್ಲದೆ ಚರ್ಮದ ಮೇಲೆ ಆದ ಗಾಯದ ಗುರುತನ್ನು ತೆಳುವಾಗಿಸಿ ಗುಣಪಡಿಸುವುದು.ಆಕರ್ಷಕವಾದ ಮುಖಕ್ಕಾಗಿ ಟೊಮೇಟೊ:
ಎರಡು ಚಮಚ ಟೊಮೇಟೊ ರಸ ಹಾಗೂ ಎರಡು ಚಮಚ ಜೇನುತುಪ್ಪವನ್ನು ಒಂದು ಬಟ್ಟಲಲ್ಲಿ ಹಾಕಿ ವಿಶ್ರಾಂತ್ ಮಾಡಿಟ್ಟುಕೊಳ್ಳಿ ನಂತರ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.ಎಣ್ಣೆಯುಕ್ತ ತ್ವಚೆಗಾಗಿ ಟೊಮೇಟೊ:
ಆಗಲೇ ಹೇಳಿದಂತೆ ಮುಖದ ಮೇಲಿಂದ ಎಣ್ಣೆ ಅಂಶವನ್ನು ತೆಗೆಯುವಲ್ಲಿ ಟೊಮೇಟೊ ಸಹಕಾರಿ.
ಎರಡು ಚಮಚ ಟೊಮೇಟೊ ರಸ ಹಾಗು ಎರಡು ಚಮಚ ಸೌತೆಕಾಯಿ ರಸವನ್ನು ತೆಗೆದು ಕೊಂಡು ಚೆನ್ನಾಗಿ ಕಲಕಿ ನಂತರ ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿಕೊಂಡು ಹತ್ತು ನಿಮಿಷದ ನಂತರ ಮುಖವನ್ನು ತೊಳೆದು ಕೊಂಡರೆ ಎಣ್ಣೆಯಾಂಶ ಕಡಿಮೆಯಾಗಿ ಮುಖವು ಹೊಳಪನ್ನು ಪಡೆಯುತ್ತದೆ.

loading...