ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ನಲ್ಲಿ ಕೆಲಸ ಖಾಲಿ ಇದೆ

Published on:  2016-10-31
Posted by:  Admin

ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) 2016-17ನೇ ಸಾಲಿನ ವಿವಿಧ ಇಲಾಖೆ, ಕಚೇರಿ ಹಾಗೂ ಸಚಿವಾಲಯಗಳಲ್ಲಿ ಅಗತ್ಯವಿರುವ ಸಹಾಯಕರು, ಕ್ಲರ್ಕ್ ಸೇರಿದಂತೆ ಹಲವಾರು ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸರಿ ಸುಮಾರು 5134ಕ್ಕೂ ಅಧಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಪರೀಕ್ಷಾ ಪ್ರಕ್ರಿಯೆ ಮೂಲಕ SSC ಆಯ್ಕೆ ಮಾಡಲಿದೆ. ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು. 10+2 ಓದಿದ್ದರೆ ಸಾಕು, ಅರ್ಜಿ ಸಲ್ಲಿಸಲು ನವೆಂಬರ್ 11 ಕೊನೆ ದಿನಾಂಕ. 

ಹುದ್ದೆಗಳ ವಿವರ:

ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್(ಕೇಂದ್ರ ಸರ್ಕಾರಿ ಹುದ್ದೆ)


ಒಟ್ಟು ಹುದ್ದೆಗಳು: 5134 (ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್- 3281, ಡಾಟಾ ಎಂಟ್ರಿ ಆಪರೇಟರ್- 506, ಲೋಯರ್ ಡಿವಿಷನ್ ಕ್ಲರ್ಕ್- 1321, ಕೋರ್ಟ್ ಕ್ಲರ್ಕ್- 26)ವೇತನ ಶ್ರೇಣಿ: 5,200 ರಿಂದ 20,200 ರು +ಗ್ರೇಡ್ ಪೇ 2400/1900


ವಿದ್ಯಾರ್ಹತೆ: 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರೈಸಿರಬೇಕು.


ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 27(1/01/2017 ರಂತೆ)

ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ಸಡಿಲಿಕೆಯಿದೆ.


ಅರ್ಜಿ ಶುಲ್ಕ: 100 ರು. ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್/ಚಲನ್/ ಡೆಬಿಟ್


ಮುಖ್ಯ ದಿನಾಂಕಗಳು: ಆನ್ ಲೈನ್ ಅರ್ಜಿ ಕೊನೆ ದಿನಾಂಕ : 11/11/2016 ಸಂಜೆ 5.


ನೇರವಾಗಿ ಅರ್ಜಿ ನೀಡಲು ಕೊನೆ ದಿನಾಂಕ : 9/11/2016 ಸಂಜೆ 5.

ಪರೀಕ್ಷೆಯ ದಿನಾಂಕ ಕಂಪ್ಯೂಟರ್ ಮೂಲಕ(Computer Based Written Exam): 07/01/2017 ,05/02/2017


ಪರೀಕ್ಷೆಯ ದಿನಾಂಕ ವಿವರಣಾತ್ಮಕ(Descriptive Paper): 09/04/2017


ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 


Online ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

loading...