ಶಹಪುರದಲ್ಲಿರುವ ಮಲಗಿರುವ ಬುದ್ಧನ ನೋಡಿಧಿರ?

Published on:  2016-11-18
Posted by:  Admin

ಪ್ರಕೃತಿಯನ್ನು ಅರಿತವರಿಲ್ಲ, ಪ್ರಕೃತಿಯು ತನ್ನ ಮಡಿಲಲ್ಲಿ ಸಾಕಷ್ಟು ವಿಸ್ಮಯಗಳನ್ನು ಹುದುಗಿಟ್ಟುಕೊಂಡಿದೆ. ಸಾಮಾನ್ಯ ಮಾನವನಿಗೆ ಅದನ್ನು ಅರಿಯಲು ಅಸಾಧ್ಯವಾದ ಸಂಗತಿ, ಇಂತಹ ಸಂಗತಿಗಳಲ್ಲಿ ಒಂದು ಮಲಗಿರುವ ಬುದ್ಧ, ಈ ವಿಸ್ಮಯವನ್ನು ಕಾಣಬೇಕೆಂದರೆ ನಾವು ಶಹಾಪುರ ತಾಲೂಕಿಗೆ ಹೋಗಬೇಕು. ಬೆಟ್ಟಗಳಿಂದ ಮೂಡಿಬಂದಿರುವ ಬುದ್ಧನ ಆಕೃತಿಯು ನೋಡಲು ಬಹಳ ಮನಮೋಹಕವಾಗಿದೆ. ಬನ್ನಿ ಅದರ ಬಗ್ಗೆ ತಿಳಿಯೋಣ.


ಯಾದಗಿರಿ ಜಿಲ್ಲೆಯ ತಾಲೂಕುಗಳಲ್ಲಿ ಒಂದು ಶಹಾಪುರ ತಾಲೂಕು, ಇದು ಬೆಂಗಳೂರಿನಿಂದ ಸುಮಾರು ೪೯೭ ಕಿಲೋಮೀಟರ್ ನಷ್ಟು ದೂರದಲ್ಲಿದೆ. ಈ ಜಿಲ್ಲೆಯು ರಸ್ತೆಯ ಮುಖಾಂತರ ಗುಲ್ಬರ್ಗ ಹೈದ್ರಾಬಾದ್ ಬೆಂಗಳೂರು ಹಾಗು ಬೀದರ್ ಜಿಲ್ಲೆಗಳಿಗೆ ಸಂಪರ್ಕವನ್ನು ಹೊಂದಿದೆ.

 ಜಿಲ್ಲೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಈ ಮಲಗಿರುವ ಬುದ್ಧ. ಈ ಪ್ರತಿಮೆಯು ೪ ಸಣ್ಣ ಪುಟ್ಟ ಬೆಟ್ಟಗಳಿಂದ ಮಾಡಲ್ಪಟ್ಟಿದೆ ಇವುಗಳಿಂದ ಬುದ್ಧನ ಪ್ರತಿಮೆಯು ಉದ್ಭವಿಸಿದೆ. ದಕ್ಷಿಣ ಪಶ್ಚಿಮ ದಿಕ್ಕಿಗೆ ಅಡ್ಡಲಾಗಿ ನೋಡಿದಾಗ ಬುದ್ಧನ ಮಲಗಿರುವ ಪ್ರತಿಮೆಯನ್ನು ಕಾಣಬಹುದು.


Image Courtesy
ಶಹಾಪುರ ಪಟ್ಟಣದಿಂದ  ಭೀಮರಾಯನ ಗುಡಿಗೆ ಹೋಗುವ ದಾರಿಯಲ್ಲಿ ನಾವು ಮಲಗಿರುವ ಬುದ್ಧನ ಪ್ರತಿಮೆಯನ್ನು ಕಾಣಬಹುದು. ಸಣ್ಣ ಪುಟ್ಟ ಬೆಟ್ಟಗಳಿಂದ ಬುದ್ಧನ ಉದ್ದನೆಯ ಮೂಗಿನ ಆಕೃತಿ,  ಗುಂಗುರು ಕೂದಲು ಹಾಗೂ ಎದೆಯಮೇಲೆ ಕೈಯನ್ನು ಮಡಚಿದಹಾಗೆ ಮೂಡಿಬಂದಿದೆ. ಈ ಪ್ರಕೃತಿ ಸೌಂದರ್ಯವನ್ನು ನೋಡಲು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಹೋಗಿ ನೋಡಬಹುದು, ಆದರೆ ಸ್ಥಳೀಯರ ಹೇಳುವ ಪ್ರಕಾರ ಬೆಟ್ಟದ ಹಿಂದೆ ಅಂದರೆ ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ಇನ್ನು ಮನಮೋಹಕವಾಗಿ ಮಲಗಿರುವ ಬುದ್ಧನ ಆಕೃತಿಯನ್ನು ಕಾಣಬಹುದು.

ಈ ಸ್ಥಳದ ಒಂದು ಕಿರು ನಕ್ಷೆಯನ್ನು ಕೆಳಗೆ ಕೊಡಲಾಗಿದೆ. ಭೀಮರಾಯನ ಗುಡಿ ಹಾಗು ಶಹಾಪುರ ಪಟ್ಟಣಕ್ಕೆ ಹಾದುಹೋಗುವ ದಾರಿಯಲ್ಲಿ ಈ ಸೊಬಗನ್ನು ಕಾಣಬಹುದು.


loading...