ಮಳೆಗಾಲದಲ್ಲಿ ಚರ್ಮದ ಆರೈಕೆ

Published on:  2016-09-11
Posted by:  Admin

ಮಳೆಗಾಲ ಬಂತೆಂದರೆ ಮನಸ್ಸಿಗೆ ಎಷ್ಟು ಆಹ್ಲಾದಕರವೊ ದೇಹಕ್ಕೆ ಅಷ್ಟೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.ಕುರುಕಲು ತಿಂಡಿ ಸವಿಯುವ ಆಸೆಯ ಜೊತೆಗೆ ಆರೋಗ್ಯದ ಬಗ್ಗೆನೂ ಗಮನ ಜಾಸ್ತಿ ಹರಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಚರ್ಮದ ಆರೈಕೆ ಬಗ್ಗೆ. ಏಕೆಂದರೆ ಬೇಸಿಗೆ ಕಾಲದಿಂದ ಮಳೆಗಾಲಕ್ಕೆ ಕಾಲಿಡುವಾಗ ಮೊದಲ ಪರಿಣಾಮ ಶುರುವಾಗುವುದು ಚರ್ಮದ ಮೇಲೆ.

ಚರ್ಮದ ಉತ್ತಮ ಆರೈಕೆ ಮಾಡಲು ಉತ್ತಮವಾದ ವಿಧಾನ ಎಂದರೆ ಚರ್ಮವನ್ನು ಸ್ವಚ್ಛ ಮಾಡುವುದು ಮತ್ತು ಚರ್ಮಕ್ಕೆ ಅಗತ್ಯವಾದ ಕ್ರೀಂ ಹಚ್ಚುವುದು. ಚರ್ಮವನ್ನು ಆಗಾಗ ಸ್ವಚ್ಛ ಮಾಡುವುದರಿಂದ ಚರ್ಮದ ಒಳಗೆ ಸೇರಿರುವ ಧೂಳು ಹೊರಗೆ ಬರುತ್ತದೆ. ಜೊತೆಗೆ ಮುಖ ಸ್ವಚ್ಛ ಮಾಡಲು ಒಂದು ಉತ್ತಮವಾದ ಫೇಸ್‍ವಾಶ್ ಉಪಯೋಗಿಸುವುದು ಒಳ್ಳೆಯ ಅಭ್ಯಾಸ.ಚರ್ಮದ ರಕ್ಷಣೆಗೆ ಏನೇನು ಅಗತ್ಯ?
– ಈ ಹವಾಮಾನದಲ್ಲಿ ಎಣ್ಣೆಯುಕ್ತ ಚರ್ಮದಲ್ಲಿ ತುರಿಕೆಯ ಅನುಭವ ಸಾಮಾನ್ಯ. ಇದಕ್ಕೆ ಉತ್ತಮವಾದ ಮೋಯಿಶ್ಚರೈಸರ್ ಬಳಸುವುದರಿಂದ ಇದನ್ನು ತಡೆಗಟ್ಟಬಹುದು.
– ಮಳೆಗಾಲದ ಸಮಯದಲ್ಲಿ ಹೆಚ್ಚಿನ ಮೇಕಪ್ ಮಾಡಿಕೊಳ್ಳುವುದು ಸೂಕ್ತವಲ್ಲ. ವಾಟರ್‍ಪ್ರೂಫ್ ಮೇಕಪ್ ಬಳಸುವುದು ಸೂಕ್ತ.
– ಮಳೆಗಾಲ ಬಂತು ಅಂದರೆ ಸಾಕು ಹೆಚ್ಚಿನವರು ಸನ್‍ಸ್ಕ್ರೀನ್ ಬಳಸುವುದನ್ನು ನಿಲ್ಲಿಸುತ್ತಾರೆ. ಮಳೆಗಾಲದಲ್ಲೂ ಹೆಚ್ಚಿನ ಸಮಯ ಮನೆ, ಕಚೇರಿ ಹೊರಗೆ ಕೆಲಸ ಮಾಡುವವರು ಸನ್‍ಸ್ಕ್ರೀನ್ ಬಳಸಿದರೆ ಉತ್ತಮ. ನಿಮ್ಮ ಚರ್ಮದ ಅಗತ್ಯತೆಗೆ ತಕ್ಕಂತೆ ಇರುವ ಎಸ್‍ಪಿಎಫ್ ಬಳಸಬಹುದು.
– ಮಳೆ ಬಂತು ಅಂದರೆ ಇನ್‍ಫೆಕ್ಷನ್ ಭಯ ಎಲ್ಲರಲ್ಲೂ ಶುರುವಾಗುತ್ತೆ. ಇದಕ್ಕೆ ಉತ್ತಮ ಬ್ರಾಂಡ್‍ನ ಆ್ಯಂಟಿ ಫಂಗಲ್ ಕ್ರೀಮ್ ಅಥವಾ ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್ ಬಳಸಬಹುದು. ಒದ್ದೆ ಬಟ್ಟೆ, ಶೂಗಳನ್ನು ಧರಿಸಬೇಡಿ.
– ಮಳೆ ಬಂದ ಕೂಡಲೆ ಕೊಳಕು ನೀರಿನಲ್ಲಿ ನಡೆಯಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ಕಾಲಲ್ಲಿ ಮತ್ತು ಉಗುರಿನ ಮಧ್ಯೆ ಇನ್‍ಫೆಕ್ಷನ್ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಕಾಲನ್ನು ಆಗಾಗ ಕ್ಲೀನ್ ಮಾಡುತ್ತಿರಿ.

loading...