ತುಮಕೂರು ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-06
Posted by:  Admin

ಶಿವಮೊಗ್ಗ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೭೫ ಕಿಮೀ ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ.

ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ. ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ.

ಶಿವಮೊಗ್ಗ ಎಂಬ ಹೆಸರು ಶಿವ-ಮುಖ ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು ಸಿಹಿ-ಮೊಗೆ (ಸಿಹಿಯಾದ ಮೊಗ್ಗು) ಎಂದಿದ್ದು ಅದು ಶಿವಮೊಗ್ಗ ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು.೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.

ಪ್ರವಾಸೀ ತಾಣಗಳು
ಜಲಪಾತಗಳು ಮತ್ತು ಅಣೆಕಟ್ಟುಗಳು
* ಜೋಗದ ಜಲಪಾತ
* ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನ ಮತ್ತು ಕೋಟೆ.
*​​ ೧೨ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ
* ಲಿಂಗನಮಕ್ಕಿ ಅಣೆಕಟ್ಟು
* ವನಕೆ-ಅಬ್ಬೆ ಜಲಪಾತ
* ಭದ್ರಾ ನದಿ ಯೋಜನೆ, ಲಕ್ಕವಳ್ಳಿ
* ತು೦ಗಾ ನದಿ ಯೋಜನೆ,ಗಾಜನೂರು ಅಣೆಕಟ್ಟು,
* ಆಗು೦ಬೆಯ ವಿಶ್ವಪ್ರಸಿದ್ದ ಸೊರ್ಯಾಸ್ತ.
* ಮ೦ಡಗದ್ದೆಯ ಪಕ್ಷಿದಾಮ.
* ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ.
* ಕು೦ದಾದ್ರಿ ಬೆಟ್ಟ.
* ಕುಪ್ಪಳ್ಳಿಯ ಕವಿಶೈಲ.
* ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ.
* ಕೂಡ್ಲಿ - ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಪ್ರದೇಶ.
* ಹಿಡ್ಲುಮನೆ ಜಲಪಾತ (ನಿಟ್ಟೂರು)
* ಸಿರಿಮನೆ ಜಲಪಾತ
* ದಬ್ಬೆ ಜಲಪಾತ
* ಚೀಲನೂರು ಗ್ರಾಮದ ಜೋಗದ ಜಲಪಾತ
* ಕೊಡಚಾದ್ರಿ ಬೆಟ್ಟ
* ಶಿವಪ್ಪನಾಯಕನ ಕೋಟೆ (ಬಿದನೂರು ನಗರ)
* ಸಿಗಂದೂರು
* ತಾವರೆ ಕೊಪ್ಪದ ಸಿಂಹ ಧಾಮ
* ಚೀಲನೂರು ಸೊರಬ ತಾಲ್ಲೊಕು.
* ಸೊರಬ ತಾಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)

ಶಿವಮೊಗ್ಗ ವಿಮಾನ ನಿಲ್ದಾಣವು ಶಿವಮೊಗ್ಗ ನಗರದಿಂದ ೧೧ ಕಿ ಮೀ ಗಳು ಮಾತ್ರ. ಆದರೆ ಇದರ ಕಾರ್ಯ ಮಂದಗತಿಯಲ್ಲಿ ಸಾಗಿದೆ ಹಾಗೂ ಪೂರ್ಣಗೊಳ್ಳುವುದೋ ಇಲ್ಲವೋ ಎಂಬ ಅನುಮಾನ ಜನರನ್ನು ಕಾಡುತ್ತಿತ್ತು. ಆದರೆ ಈಗ ಕಾರ್ಯಪ್ರಗತಿ ಅತ್ಯಂತ ವೇಗವಾಗಿದ್ದು, ಈಗಾಗಲೇ ೨ ಕಿಮಿ ವೇಗದ ರನ್ ವೇ ಕಾರ್ಯ ಸಂಪೂರ್ಣಗೊಂಡಿದ್ದು, ಮೇ - ಜೂನ್ 2017 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಗಿರಿ-ಶಿಖರಗಳು
* ಆಗುಂಬೆ, ಆಗುಂಬೆ ಸೂರ್ಯಾಸ್ತಕ್ಕೆ ಪ್ರಸಿದ್ಧ
* ಕೊಡಚಾದ್ರಿ.
* ಕುಂದಾದ್ರಿ ಬೆಟ್ಟ. ಜೈನ ಕ್ಷೇತ್ರ
* ಬರೆಕಲ್ ಬತೆರಿ
* ನಿಶಾನೆ ಗುಡ್ಡ
* ಹೆದ್ದಾರಿಖಾನ್
* ಮೊಳಕಾಲ್ಮುರಿ ಗುಡ್ಡ
* ಜೊಗಿ ಗುಡ್ಡ
* ಮುಪ್ಪಾನೆ

ನದಿಗಳು
* ತುಂಗಾ
* ಭದ್ರಾ
* ಶರಾವತಿ
* ಕುಮುದ್ವತಿ
* ವೇದಾವತಿ
* ವರದಾ
* ಕುಶಾವತಿ
* ದ೦ಡಾವತಿ ನದಿ

loading...