ಕೂದಲು ಉದ್ದವಾಗಿ ಬೆಳೆಯುವ ರಹಸ್ಯ ಇದೋ ಇಲ್ಲಿದೆ?

Published on:  2016-11-06
Posted by:  Admin

ನಿಮಗೆ ನಿಮ್ಮ ಕೂದಲು ಮೊಣಕಾಲಿನ ವರೆಗೂ ಬೆಳೆಯಬೇಕೆಂದು ಇಷ್ಟವಿದೆಯೇ? ಹಾಗಾದರೆ ಈ ಮನೆಯ ಮದ್ದುಗಳನ್ನು ಪ್ರಯತ್ನಿಸಿ. ಈರುಳ್ಳಿ ಮನೆಯಲ್ಲಿ ಸಾಧಾರಣವಾಗಿ ಇರುವಂತದ್ದು, ಇದು ಎಷ್ಟು ಉಪಯೋಗಕರವೆಂದರೆ ಇದನ್ನು ಜಜ್ಜಿ ರಸವನ್ನು ನೆತ್ತಿಗೆ ಹಚ್ಚಿಕೊಂಡರೆ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ ಹಾಗು ನೆತ್ತಿಯಲ್ಲಿ ಆಗುವ ಸೋಂಕು ಮತ್ತಿತರ ಹುಣ್ಣುಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ.

ವಿಟಮಿನ್ ಸಿ ಹಣ್ಣುಗಳು ಅಂದರೆ ನಿಂಬೆಹಣ್ಣು ಸ್ಟ್ರಾಬೆರಿ ಕಿತ್ತಳೆ ಹಣ್ಣುಗಳು ಕೂದಲಿನ ಬೇರನ್ನು ಸದೃಢವಾಗಿಸುತ್ತವೆ ಹಾಗು ಕೂದಲು ಉದುರುವುದನ್ನು ತಡೆಗಟ್ಟುತ್ತದೆ. 

ಪ್ರೋಟೀನ್ ಯುಕ್ತ ಆಹಾರಗಳಾದ ಪಾಲಕ್, ಸೌತೆಕಾಯಿ, ಪೇರಲ ಅಥವಾ ಸೀಬೆಹಣ್ಣು ಹಾಗು ಕ್ಯಾರಟ್ ಇವು ನಮ್ಮ ಕೂದಲನ್ನು ಉದ್ದವಾಗಿಸಿ ಕಾಂತಿಯುಕ್ತವಾದ ಹೊಳಪನ್ನು ನೀಡುತ್ತವೆ. ೧೦ ಹಣ್ಣುಗಳ ಜ್ಯೂಸು ಅನ್ನು ಕೂದಲಿನ ರಕ್ಷಣೆಗೆ ಹೇಗೆ ಬಳಸುವುದೆಂದು ತಿಳಿಯೋಣ ಬನ್ನಿ.

ಅಲೆಯೋವೇರಾ ಜ್ಯೂಸು:
ಅಲೆಯೋವೇರದಲ್ಲಿ ಬಹಳಷ್ಟು ಆರೋಗ್ಯಕರವಾದ ಅಂಶಗಳು ಇರುವುದರಿಂದ ಎಲ್ಲರಿಗೂ ಇದು ಚಿರಪರಿಚಯವಾದುದು, ಈ ಜ್ಯೂಸು ಅಲ್ಲಿ ಇರುವ ಕಿಣ್ವಗಳು(enzymes) ಕೂದಲಿನ ಬೇರಿನಲ್ಲಿರುವ ಜೀವಕೋಶಗಳನ್ನು ಪ್ರೋತ್ಸಾಹಿಸಿ ಅವುಗಳನ್ನು ಗಟ್ಟಿಯಾಗಿಸಿ ಕೂದಲು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. 


ಕಿವಿ ಹಣ್ಣು(Kiwi Fruit) : 
ಕಿವಿ ಹಣ್ಣಿನಲ್ಲಿ ವಿಟಮಿನ್ ಈ ಮತ್ತು ವಿಟಮಿನ್ ಸಿ ಇರುವುದರಿಂದ ಇದು ಕೂದಲಿಗೆ ತುಂಬಾ ಉಪಯುಕ್ತವಾದುದು, ಈ ಹಣ್ಣಿನ ಜ್ಯೂಸು ಅನ್ನು ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚುತ್ತದೆ.


ಈರುಳ್ಳಿ ಜ್ಯೂಸು:
ಕೂದಲಿನ  ಬೆಳವಣಿಗೆಗೆ ಈರುಳ್ಳಿ ಜ್ಯೂಸು ತುಂಬಾ ಪರಿಣಾಮಕಾರಿಯಾಗಿದೆ. ಕೂದಲು ಉಡಾವಗಳು ಹಾಗು ತಲೆಹೊಟ್ಟಿನ ನಿವಾರಣೆಗೆ ಈರುಳ್ಳಿ ಜ್ಯೂಸು ಅನ್ನು ವಾರದಲ್ಲಿ ವೊಮ್ಮೆ ಹಚ್ಚುತ್ತಾ ಬಂದರೆ ನಿಮಗೆ ಒಂದು ತಿಂಗಳಿನಲ್ಲೇ ಉತ್ತಮ ಫಲಿತಾಂಶ ನೋಡುವಿರಿ.


ಪಾಲಕ್ ಜ್ಯೂಸು :
ಪಾಲಕ್ ಸೊಪ್ಪಿನಲ್ಲಿ ಬಹಳಷ್ಟು ವಿಟಮಿನ್ಸ್, ಮಿನರಲ್ಸ್(ಖನಿಜಾಂಶ) ಹಾಗು ಕಬ್ಬಿಣದ ಅಂಶ ಇರುವುದರಿಂದ ನಾವು ಪ್ರತಿನಿತ್ಯ ಆಹಾರದಲ್ಲಿ ಉಪಯೋಗಿಸುವುದಲ್ಲದೆ ನಮ್ಮ ದೇಹದ ಮೇಲಿನ ತೊಂದರೆಗೂ ಪರಿಣಾಮಕಾರಿಯಾಗಿದೆ, ಇದರ ಜ್ಯೂಸು ಅನ್ನು ತಲೆಗೆ ಹಚ್ಚುವುದರಿಂದ ಕೂದಲು ಹೊಳಪನ್ನು ಪಡೆದು ಸದೃಢವಾಗಿ ಬೆಳೆಯುತ್ತದೆ.


ಬೆಳ್ಳುಳ್ಳಿ ಜ್ಯೂಸು:
೩ ಅಥವಾ ೪ ಎಸಳು ಬೆಳ್ಳುಳ್ಳಿಯನ್ನು ಬಿಡಿಸಿಕೊಂಡು ಅದನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಬಿಸಿ ಮಾಡಬೇಕು. ೧೦ ನಿಮಿಷ ಕುದಿಸಿದ ನಂತರ ಅದನ್ನು ಸೋಸಿಕೊಂಡು ಉಗುರು ಬೆಚ್ಚನೆಯ ಹಾಗೆ ಇರುವಾಗ ೪-೫ ಹನಿ ತೆಂಗಿನ ಕಾಯಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಬೇಕು. ಇದನ್ನು ತಲೆಗೆ ಹಚ್ಚಿ ನೆನೆಯಲು ಬಿಡಬೇಕು, ೧೦ ನಿಮಿಷದ ನಂತರ ತಲೆಯನ್ನು ತೊಳೆದುಕೊಳ್ಳಬೇಕು, ಹೀಗೆ ಮಾಡುವುದರಿಂದ ತಲೆ ಕೂದಲು ಬೆಳೆಯುತ್ತದೆ.


ಚೇಪೆಹಣ್ಣಿನ ಅಥವಾ ಸೀಬೆಹಣ್ಣಿನ ಅಥವಾ ಪೇರಲ ಹಣ್ಣಿನ  ಜ್ಯೂಸು:
ಚೇಪೆಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿ ಇದೆ, ಈ ಹಣ್ಣಿನ ಎಲೆಗಳ ಜೊತೆ ತಿರುಳನ್ನು ಒಂದು ಲೋಟ ನೀರಿನಲ್ಲಿ ಕುದಿಸಬೇಕು, ಮಿಶ್ರಣವು ಸ್ವಲ್ಪ ಗಟ್ಟಿಯಾಗುವ ವರೆಗೂ ಕುದಿಸಿ ನಂತರ ಉಗುರು ಬೆಚ್ಚನೆ ಪ್ರಮಾಣಕ್ಕೆ ಬಂದಮೇಲೆ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲಿನ ಬೇರುಗಳಿಗೆ ಶಕ್ತಿ ಒದಗಿ ಬೆಳೆಯಲು ಸಹಕಾರಿಯಾಗಿದೆ.


ಕೊತ್ತಂಬರಿ ಸೊಪ್ಪಿನ ಜ್ಯೂಸು:
ಕೊತ್ತಬರಿ ಸೊಪ್ಪು ಹಾಗು  ಸ್ವಲ್ಪ ನೀರು ಹಾಗಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು, ನಂತರ ಉಗುರು ಬೆಚ್ಚನೆಯ ನೀರಿನಿಂದ ತಲೆಯನ್ನು ನೆನೆಸಿಕೊಂಡು ನಂತರ  ಈ ಮಿಶ್ರಣವನ್ನು ತಲೆಗೆ ಹಾಗು ಕೂದಲಿನ ಬೇರಿಗೆ ಮುಟ್ಟುವಂತೆ ಹಚ್ಚಬೇಕು, ೨೦ ನಿಮಿಷದ ನಂತರ ತಲೆ ತೊಳೆದುಕೊಳ್ಳುವುದರಿಂದ ಕೂದಲಿನ ಬೆಳವಣಿಗೆ ಉತ್ತಮವಾಗಿ ಹಾಗು ಕೂದಲಿನ ಉದುರುವಿಕೆ ತಡೆಗಟ್ಟುತ್ತದೆ.


ಸೌತೆಕಾಯಿ ಜ್ಯೂಸು:
ಸೌತೆಕಾಯಿ ಜ್ಯೂಸು ಅನ್ನು ತಲೆಗೆ ಹಾಗು ಕೂದಲಿನ ಬೇರಿನ ವರೆಗೂ ಹಚ್ಚಿ ಕನಿಷ್ಠ ೧೦ ನಿಮಿಷದ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು, ಇದರಿಂದ ತಲೆಯು ತಂಪಾಗಿ ಕೂದಲಿಗೆ ಹೊಳಪಿನ ಬಣ್ಣದ ಜೊತೆ ಬೆಳವಣಿಗೆಯು ಆಗುತ್ತದೆ.


ಕ್ಯಾರಟ್ ಜ್ಯೂಸು:
ಕ್ಯಾರಟ್ ಜ್ಯೂಸು ಅಲ್ಲಿ ವಿಟಮಿನ್ ಸಿ ನೊಂದಿಗೆ ಬೀಟಾ ಕೆರೋಟಿನ್ ಅಂಶವು ಹೆಚ್ಚಾಗಿದೆ. ಇದು ಕಣ್ಣಿನ ಜೊತೆ ಕೂದಲಿನ ಬೆಳವಣಿಗೆಗೂ ಸಹಕಾರಿಯಾಗಿದೆ. ಇದನ್ನು ಜ್ಯೂಸು ಆಗಿ ತಲೆಗೆ ಕನಿಷ್ಠ ವಾರಕೊಮ್ಮೆ ಹಚ್ಚಿಕೊಂಡರೆ ತಲೆ ಕೂದಲು ಸದೃಢವಾಗಿ ಬೆಳೆಯುತ್ತದೆ.


ಸ್ಟ್ರಾಬೆರಿ ಜ್ಯೂಸು:
ಸ್ಟ್ರಾಬೆರಿ ಹಣ್ಣು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ, ತಲೆ ಹೊಟ್ಟು ಹಾಗು ತಲೆ ಕೆರೆತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ಸ್ ಹಾಗು ಪ್ರೋಟೀನ್ ತಲೆಗೂದಲು ಬೆಳೆಯುವಲ್ಲಿ ಸಹಕಾರಿಯಾಗಿದೆ. 

loading...