ಸರ್ವಾಂಗಾಸನ ಯೋಗ ಮಾಡುವ ವಿಧಾನ

Published on:  2016-09-18
Posted by:  Admin

ಮಾಡುವ ವಿಧಿ : 
೧. ಮೊದಲು ನೆಲದ ಮೇಲೆ ಅಂಗಾತ ನೇರವಾಗಿ ಮಲಗಿ , ಪದಗಳು ಸೇರಿರಲಿ ಮತ್ತು ಕೈಗಳು ಎರಡು ಬದಿಯಲ್ಲಿ ಅಂಗೈ ಮೇಲೆ ಬರುವಂತೆ ಇರಿಸಿ 
೨. ಉಸಿರನ್ನು ಒಳಗೆ ಎಳೆದುಕೊಳ್ಳುತ್ತಾ ಕಾಲುಗಳು ನೇರವಾಗಿ ಮೆಲ್ಲ ಮೆಲ್ಲನೆ ಕೈಗಳ ಸಹಾಯದಿಂದ ಮೇಲಕ್ಕೆ ಎತ್ತಿ. ಕೈಗಳು ಸೊಂಟದ ಮೇಲಿರಲಿ , ಮೊಣಕೈಗಳವರೆಗೆ ಕೈಗಳು ಸೊಂಟದ ಮೇಲಿರಲಿ , ಪದಗಳನ್ನು ಸೇರಿಸಿ ನೆರವಾಗಿರಿಸಿ ಮುಂಗಾಲುಗಳನ್ನು ಮೇಲ್ಮುಖವಾಗಿ ಚಾಚಿರಿ ಹಾಗೆಯೆ ಕಣ್ಣಿನ ದೃಷ್ಟಿ ಹೆಬ್ಬರಳಿನ ಮೇಲಿರಿ .ಈ ಆಸನ ಎರಡು ನಿಮಿಷಗಳಿಂದ  ಪ್ರಾರಂಭಿಸಿ ನಿಧಾನವಾಗಿ ಅರ್ಧ ಘಂಟೆಯ ವರೆಗೆ ಇದನ್ನು ಮಾಡಬಹುದು  
೩. ಕಾಲುಗಳು ಕೆಳಗಡೆ ಇಳಿಸುವಾಗ , ಎರಡು ಕೈಗಳನ್ನು ಸೊಂಟದಿಂದ ಸರಿಸಿ ನೆಲದ ಮೇಲಿಡಿ ,ಅಂಗೈಗಳನ್ನೂ ನೆಲೆದ ಮೇಲೆ ಚಾಚಿರಲಿ .ಈವಾಗ ನಿಧಾನವಾಗಿ ಮೊದಲು ಬೆನ್ನು , ನಂತರ ಕಾಲುಗಳನ್ನು ನೆಲದ ಮೇಲೆ ನೇರವಾಗಿಸಿ. 
೪. ಈವಾಗ ವಿಶ್ರಾಮ ತೆಗೆದುಕೊಳ್ಳಲು ಶವಾಸನ ಮಾಡಿ. 

ಈ ಆಸನದಿಂದ ಆಗುವ ಲಾಭಗಳು :
೧. ಥೈರಾಯಿಡ್ ನ್ನು ಸಕ್ರಿಯಗೊಳಿಸಿ ಅದರಿಂದ ಸ್ತೂಲತೆ , ದೌರ್ಬಲ್ಯ , ಸೊಂಟದ ವೃದ್ಧಿಗಳು ಕಡಿಮೆಯಾಗುತ್ತವೆ ಹಾಗು ಆಯಾಸ ಕಡಿಮೆಯಾಗುತ್ತದೆ . ಈ ಆಸನದಿಂದ ಅಡ್ರಿನಲ್ , ಶುಕ್ರಗ್ರಂಥಿ ಹಾಗು ದಿಂಬಗ್ರಂಥಿಗಳು ಸಶಕ್ತ ವಾಗುತ್ತವೆ . 
೨. ಈ ಆಸನವು ಅಸ್ತಮಾದ ೨ -೩ಹಂತಗಳವರೆಗೆ ಉಪಯೋಗಿಯಾಗಿದೆ , ಏಕೆಂದರೆ ಈ ಆಸನದಿಂದ ಭುಜಗಳು ಸ್ಥಿರವಾಗುತ್ತವೆ.
೩. ಉದರದ ಅಂಗಗಳಾದ ಕರುಳು ಇತ್ಯಾದಿಗಳ ಭಾರ ಮದ್ಯಚ್ಛ ದಪೇಶಿಯ ಮೇಲೆ ಬೀಳುವುವದರಿಂದ ಹಾಗು ಉಸಿರಾಟದಲ್ಲಿ ಭಾಗಿಯಾಗಿರುವುದರಿಂದ ಡಯಾಫ್ರಾಮ್ ಯು ಸಬಲವಾಗಿ ಸುಧಾರಿಸುತ್ತದೆ 
೪. ಈ ಆಸನದಿಂದ ಥೈರಾಯ್ಡ್  ಹಾಗು ಪಿಟ್ಯುಟರಿ ಗ್ಲ್ಯಾಂಡ್ಗಳು ಕ್ರಿಯಾಶೀಲವಾಗುವುದರಿಂದ ಎತ್ತರವಾಗಿ ಬೆಳೆಯುವುದರಲ್ಲಿ ವಿಶೇಷ ಲಾಭಕಾರಿಯಾಗಿದೆ.

loading...