ಹೊಸ ವರ್ಷದ ಮೊದಲ ವಾರದಲ್ಲೆ ಪುಷ್ಪಕ ವಿಮಾನ ನಿಮ್ಮ ಮುಂದೆ

Published on:  2016-12-15
Posted by:  Basavaraj PM

ಪುಷ್ಪಕ ವಿಮಾನ - ರಮೇಶ್ ಅರವಿಂದ್ ರವರ ೧೦೦ ನೇ ಚಿತ್ರ. ಬಹುತಾರಾಗಣವಿರುವ ಈ ಚಿತ್ರ ತಂದೆ ಮತ್ತು ಮಗಳ ಭಾಂದವ್ಯದ ಕುರಿತು. ತಂದೆ ಮಗಳ ಭಾಂದವ್ಯ, ಪ್ರೀತಿ, ಸ್ನೇಹ ಎಲ್ಲ ಅಂಶಗಳನ್ನು ಇಟ್ಟುಕೊಂಡು ಈ ಚಿತ್ರ ತಯಾರಾಗಿದೆ. ತಂದೆಯ ಪಾತ್ರದಲ್ಲಿ ರಮೇಶ್ ರವರು ಎಲ್ಲರಿಗೂ ಮೆಚ್ಚುಗೆಯಾಗುತ್ತಾರೆ ಎನ್ನುವು ನಂಬಿಕೆ. ಇನ್ನು ಬೇಬಿ ಯುವಿನ ಈ ಹಿಂದಿನ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಈ ಚಿತ್ರದಲ್ಲಿ ಇವರಿಬ್ಬರ ಕಾಂಬಿನೇಶನ್, ಮತ್ತು ತಂದೆ ಮಗಳ ನಡುವೆ ಇರುವ ಪ್ರೀತಿ ಎಂಥದ್ದು ಎಂದು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.


ರಮೇಶ್ ಅರವಿಂದ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಅತ್ಯುತ್ತಮ ನಟ ಮತ್ತು ಎಲ್ಲರ ನೆಚ್ಚಿನ ನಾಯಕ. ಅವರ ಅಭಿನಯದ ಚಿತ್ರಗಳು ತುಂಬ ದಿನಗಳವರೆಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಮೃತವರ್ಷಿಣಿ, ಸ್ನೇಹಲೋಕ, ಅಮೇರಿಕಾ ಅಮೇರಿಕಾ, ಓ ಮಲ್ಲಿಗೆ, ಆಪ್ತಮಿತ್ರ. ರಾಮ ಶಾಮ ಭಾಮ, ನಮ್ಮೂರ ಮಂದಾರ ಹೂವೆ ಹೀಗೆ ಸುಮಾರು ಚಿತ್ರಗಳು ಅವರಿಗೆ ಯಶಸ್ಸು ತಂದುಕೊಟ್ಟಿದ್ದಲ್ಲದೆ, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಈಗಲೂ ಅವರ ಆಗಿನ ಚಿತ್ರಗಳೆಂದರೆ ಬಲು ಇಷ್ಟ.


ಪುಷ್ಪಕ ವಿಮಾನ S. ರವೀಂದ್ರನಾಥ್ ರವರ ಚೊಚ್ಚಲ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರ, ರಮೇಶ್ ಅರವಿಂದ್ ಜೊತೆ ಬೇಬಿ ಯುವಿನ ಪಾರ್ಥವಿ, ರಚಿತಾ ರಾಮ್, ಜೂಹಿ ಚಾವ್ಲಾ ಇನ್ನು ಮುಂತಾದವರು ನಟಿಸಿದ್ದಾರೆ. ಜೂಹಿ ಚಾವ್ಲಾ ರವರು ಶಾಂತಿ ಕ್ರಾಂತಿ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

ಚರಣ್ ರಾಜ್ ರವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಂತರ ಮತ್ತೆ ಈ ಚಿತ್ರದಲ್ಲಿ ಅವರ ಹಾಡುಗಳಿಂದ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ. ಪುಷ್ಪಕ ವಿಮಾನ ಚಿತ್ರದಲ್ಲಿ ೬ ಹಾಡುಗಳಿದ್ದು, ಈಗಾಗಲೇ ಹಾಡುಗಳು ಎಲ್ಲರ ಬಾಯಲ್ಲಿ ಗುನುಗುತ್ತಿವೆ. ಚಿತ್ರದ ಥೀಮ್ ಸಾಂಗ್ ಅಂತೂ ತುಂಬ ಚೆನ್ನಾಗಿದ್ದು ಚಿತ್ರಕ್ಕೆ ಅದೇ ಮೆರಗು.


ಪುಷ್ಪಕ ವಿಮಾನ ಚಿತ್ರದ ಟೀಸರ್, ಆಡಿಯೋ/ವಿಡಿಯೋ ಹಾಡುಗಳು ಬಿಡುಗಡೆಯಾಗಿದ್ದು, ಎಲ್ಲರ ಮನಸ್ಸನ್ನು ಗೆದ್ದಿವೆ. ಇನ್ನು ಚಿತ್ರ ತೆರೆಗೆ ಬರುವುದೊಂದೇ ಬಾಕಿ. ಭಾರತೀಯ ಚಿತ್ರರಂಗದಲ್ಲಿ ಈ ಚಿತ್ರ ರಮೇಶ್ ಅರವಿಂದ್ ರವರಿಗೂ ಮತ್ತು ಕನ್ನಡ ಚಿತ್ರರಂಗಕ್ಕೂ ಬಹು ದಿನಗಳವರೆಗೆ ಕನ್ನಡಿಗರ ಮನಸ್ಸಿನಲ್ಲಿ ಉಳಿಯುವಂತಹ ಚಿತ್ರವಾಗಿ ಹೊರಹೊಮ್ಮಲಿದೆ. ೨೦೧೭ ರ ಹೊಸ ವರ್ಷದ ಮೊದಲನೇ ವಾರ ಅಂದರೆ ಜನವರಿ ೬ ರಂದು ಚಿತ್ರ ತೆರೆ ಕಾಣಲಿದೆ. ಈ ಒಂದು ಉತ್ತಮ ಚಿತ್ರದಿಂದ ಹೊಸ ವರ್ಷ ಪ್ರಾರಂಭವಾಗಲಿದೆ. ಪುಷ್ಪಕ ವಿಮಾನ ಚಿತ್ರ ಅದ್ದೂರಿ ಯಶಸ್ಸು ಕಾಣಲಿ ಎಂಬುವುದು ನಮ್ಮೆಲ್ಲರ ಆಶಯ.

loading...