ವಾರಾಂತ್ಯಕ್ಕೆ ಅವಲಬೆಟ್ಟದ ಕಡೆ ಒಂದು ದಿನದ ಪಯಣ

Published on:  2017-01-10
Posted by:  Raksha

ಬೆಂಗಳೂರಿನಿಂದ ಸುಮಾರು ೯೨ KM ದೂರವಿರುವ ಅವಲಬೆಟ್ಟ ಇತ್ತೀಚಿನ ಇನ್ನೊಂದು ಪ್ರಮುಖ ಆಕರ್ಷಣೀಯ ಗಿರಿಧಾಮವಾಗಿದೆ. ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಈಗಾಗಲೇ ನಿಮಗೆಲ್ಲ ಸ್ಥಳದ ಚಿತ್ರಗಳನ್ನ ನೋಡಿರುತ್ತೀರಿ, ಸ್ಥಳದ  ಬಗ್ಗೆ ಕೇಳಿರುತ್ತೀರಿ. ಒಂದು ಬೆಂಗಳೂರಿನ ಟ್ರಾಫಿಕ್, ಕೆಲಸ ಎಲ್ಲ ಜಂಜಾಟಗಳ ನಡುವೆ ಒಂದು ದಿನದ ಅವಲಬೆಟ್ಟ ಪ್ರಶಸ್ತವಾದ ಜಾಗ ಮತ್ತು ವಾರಾಂತ್ಯದಲ್ಲಿ ಆರಾಮವಾಗಿ ಒಂದು ದಿನದಲ್ಲಿ ಹೋಗಿ ಬರುವಂತಹ ಸ್ಥಳ.

ಅವಲಬೆಟ್ಟಕ್ಕೆ ಎಲ್ಲರು ಹೋಗಬಹುದಾದಂತಹ ಸ್ಥಳ, ಆದರೂ ಜೋಡಿಗಳು ಅಲ್ಲಿಗೆ ಹೋಗುವುದು ಬಹಳ. ಇದು ಚಿಕ್ಕಬಳ್ಳಾಪುರಕ್ಕೆ ಬಹಳ ಹತ್ತಿರವಾಗುವಂತಹ ಸ್ಥಳ. ದಟ್ಟವಾದ  ಕಾಡು, ಹಕ್ಕಿಗಳು, ಇದರ ಮದ್ಯ ತಮ್ಮ ಸಂಗಾತಿಯ ಜೊತೆ ಬೆಟ್ಟವನ್ನು ಏರುವುದು ಮನಸಿಗೆ ಬಹಳ ಉಲ್ಲಾಸ ತರುತ್ತದೆ.

ಅವಲಬೆಟ್ಟಕ್ಕೆ ಹೋಗುವ ದಾರಿ : 

ಬೆಂಗಳೂರಿನಿಂದ ಮುಂಜಾನೆ ಬೇಗನೆ ಬಿಡುವುದು ಸೂಕ್ತ, ರಾಷ್ಟ್ರೀಯ ಹೆದ್ದಾರಿ    ಮುಖಾಂತರ ಇಂಟರ್ನ್ಯಾಷನಲ್  ಏರ್ಪೋರ್ಟ್ ಟಾಲ್ಗೇಟ್ ದಾಟಿದ ನಂತರ ಚಿಕ್ಕಬಳ್ಳಾಪುರದ ಕಡೆಗೆ ನಿಮ್ಮ ಪಯಣ ಸಾಗಲಿ. ಚಿಕ್ಕಬಳ್ಳಾಪುರ ದಾಟಿದ ನಂತರ ಸುಮಾರು ೨೦ KM, ಹೆದ್ದಾರಿಯ ಮುಖಾಂತರ ಪೆರೆಸಂದ್ರ ಊರು ಸಿಗುತ್ತದೆ. ಅದನ್ನು ದಾಟಿದ ನಂತರ ಎಡಗಡೆಯ ಸರ್ವಿಸ್ ರೋಡ್  ಮುಖಾಂತರ ಹೊರಟರೆ, ಸುಮಾರು . KM ಹೋದ ನಂತರ  ನಿಮಗೆ  ಒಂದು ಹಳ್ಳಿಯ  ದಾರಿ  ಸಿಗುತ್ತದೆ. ಅದೇ  ದಾರಿಯ  ಮುಖಾತರ ನೀವು ಅವಲಬೆಟ್ಟ ಸೇರಬಹುದು. ನೀವು ಜಿಪಿಎಸ್ನ್ನು ಸಹ ಅನುಸರಿಸಿ ಸ್ಥಳವನ್ನು ಸೇರಬಹುದು.

ಅವಲಬೆಟ್ಟದಲ್ಲಿ, ನಂದಿಬೆಟ್ಟದ ತರಹ ಹೆಚ್ಚಿನ ಜನಜಂಗುಳಿ ಇರುವುದು ಕಡಿಮೆ, ನೀವು ಒಮ್ಮೆ ನಿಮ್ಮ ವಾಹನವನ್ನು ನಿಲ್ದಾಣದಲ್ಲಿ ನಿಲ್ಲಿಸಿ ಬೆಟ್ಟವನ್ನು ಏರಲು ಹೊರಟರೆ ನಿಮಗೆ ಸುಮಾರು ೫೦ ಕಲ್ಲು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ. ಒಮ್ಮೆ ಬೆಟ್ಟದ ತುದಿಯನ್ನು ಮುಟ್ಟಿದ ಕೂಡಲೇ ನಿಮಗೆ ಆಂಜನೇಯನ ದೇವಸ್ಥಾನ ಸಿಗುತ್ತದೆ. ಅಲ್ಲಿ ನೀವು ದರ್ಶನ ಪಡೆದ ನಂತರ ನೀವು ಸುತ್ತ ಮುತ್ತ ಇರುವ ಹಸಿರು ತುಂಬಿರುವ ಕಣಿವೆ ನೋಡಬಹುದು, ತಂಪಾದ ಗಾಳಿಯನ್ನು ಸವೆಯಬಹುದು, ಚಿತ್ರಗಳನ್ನು ತೆಗೆದುಕೊಳ್ಳಬಹುದು

ಬೆಂಗಳೂರಿನಿಂದ ಹೋಗಿ ಬರಲು ಸುಮಾರು ೨೦೦ KM ಆಗಬಹುದು, ಅವಲಬೆಟ್ಟವನ್ನು ತಲುಪಲು ಸುಮಾರು ಗಂಟೆಗಳು ತೆಗೆದುಕೊಳ್ಳಬಹುದು. ಒಂದು ದಿನದಲ್ಲಿ ನಿಮ್ಮ ಆತ್ಮೀಯರ ಜೊತೆ ಪ್ರವಾಸ ಮಾಡಿ ಬಂದರೆ ನಿಮ್ಮ ಮನಸ್ಸಿಗೂ ಸಂತೋಷವಾಗಬಹುದು. ಹಾಗಾದರೆ ಇನ್ನೇಕೆ ತಡಮಾಡುವುದು, ವಾರಾಂತ್ಯಕ್ಕೆ ನಿಮ್ಮ ಪಯಣ ಅವಲಬೆಟ್ಟದ ಕಡೆ ಸಾಗಲಿ.

ಕೆಳಗಿನ ಫೋಟೋಗಳಲ್ಲಿ ಅವಲಬೆಟ್ಟವನ್ನೊಮ್ಮೆ ನೋಡಿ
loading...