ಮಂಡ್ಯ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳ ಮಂಡ್ಯ ನಗರ. ಮಂಡ್ಯ ಎಂಬ ಹೆಸರು ಮಾಂಡವ್ಯ ಋಷಿಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯವು ಮೈಸೂರು ಮತ್ತು ಬೆಂಗಳೂರುಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮(೮೮೭೩೦೭ ಪುರುಷರು, ೮೭೪೪೧೧ ಮಹಿಳೆಯರು). ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಇಲ್ಲಿನ ಜನರು ನೇರ ನುಡಿಗೆ, ಹೃದಯವಂತಿಕೆಗೆ ಹೆಸರಾದವರು. 

ಮಂಡ್ಯ ಜಿಲ್ಲೆಯ ತಾಲ್ಲೂಕುಗಳು:
  1. ಮಂಡ್ಯ
  2. ಮದ್ದೂರು
  3. ಮಳವಳ್ಳಿ
  4. ಪಾಂಡವಪುರ
  5. ನಾಗಮಂಗಲ
  6. ಕೃಷ್ಣರಾಜ ಪೇಟೆ
  7. ಶ್ರೀರಂಗಪಟ್ಟಣ
ಕೃಷಿ:
ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ. ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಭತ್ತ, ಕಬ್ಬು, ರಾಗಿ, ತೆಂಗು, ಅವರೆ, ಅಲಸಂದೆ, ಹುಚ್ಚೆಳ್ಳು ಮುಂತಾದವು. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯ ಸಕ್ಕರೆಯ ಜಿಲ್ಲೆ, "ಮಧುರ ಮಂಡ್ಯ" ಎನಿಸಿಕೊಂಡಿದೆ.

ಮಂಡ್ಯ ಜಿಲ್ಲೆಯ ಹೊಳೆ/ನದಿಗಳು:
ಕಾವೇರಿ
ಹೇಮಾವತಿ
ಲೋಕಪಾವನಿ
ಲಕ್ಷ್ಮಣತೀರ್ಥ
ಶಿಂಷಾ
ವೀರವೈಷ್ಣವಿ

ಪ್ರವಾಸಿ ತಾಣಗಳು:
* ಫ್ಯಾಕ್ಟರಿ ವೃತ್ತ [ಸಕ್ಕರೆ ನಾಡು]
* ಎಳನೀರು ಮಾರುಕಟ್ಟೆ[hkv nagar maddur]
* ನರಸಿಂಹ ಸ್ವಾಮಿ ದೇವಸ್ಥಾನ ಮದ್ದೂರು
* ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನ
* ಮೇಲುಕೋಟೆ ಐತಿಹಾಸಿಕ ಕ್ಷೇತ್ರ, ಚೆಲುವ ನಾರಾಯಣ ಸ್ವಾಮಿ ದೇವಾಲಯ, ಯೋಗಾನರಸಿಂಹ ಸ್ವಾಮಿ ದೇವಾಲಯ
* ಕುಂತಿಬೆಟ್ಟ ಪಾಂಡವಪುರ
* ರಂಗನತಿಟ್ಟು ಪಕ್ಷಿಧಾಮ
* ಕೊಕ್ಕರೆ ಬೆಳ್ಳೂರು ಪಕ್ಷಿಧಾಮ
* ಹರವು ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ ೧೩೬೯ ರಲ್ಲಿ, ವಿಜಯನಗರದ ಮೊದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್​ ನಿರ್ಮಿಸಿದರು.
* ಸೋಮನಳ್ಳಮ್ಮ ದೇವಸ್ಥಾನ
* ಹನುಮಂತನಗರ ಆತ್ಮಲಿಂಗೆಶ್ವರ ದೇವಾಲಯ, ಈ ದೇವಾಲಯವು ಭಾರತಿ ನಗರದಿಂದ(ಕೆ.ಎಮ್.ದೊಡ್ಡಿಯಿಂದ) ೩ ಕಿ.ಮಿ. ದೂರದಲ್ಲಿದೆ.
* ಹೊಸಹೊಳಲು ದೇವಸ್ಥಾನ
* ವೇಣುಗೋಪಾಲ ಸ್ವಾಮಿ ದೇವಾಲಯ ಹೊಸಕನ್ನಂಬಾಡಿ
* ಕರಿಘಟ್ಟ ಈ ಗಿರಿಧಾಮವು ಲೋಕಪಾವನಿ ನದಿಯ ತೀರದಲ್ಲಿದೆ
* ಮುಳ್ಳಕಟ್ಟೆ ದೇವಸ್ಥಾನ
* ಸೋಮನಾಥಪುರ ದೇವಸ್ಥಾನ
* ಶಿವನ ಸಮುದ್ರ ಜಲಪಾತ (ಗಗನ ಚುಕ್ಕಿ ಮತ್ತು ಭರಚುಕ್ಕಿ)
* ಶ್ರೀ ಆದಿಚುಂಚನಗಿರಿ ಶ್ರೀಕ್ಷೇತ್ರ
* ಮುತ್ತತ್ತಿ ಕಾವೇರಿ ನದಿ ದಡದ ಪುಣ್ಯಕ್ಷೆತ್ರ
* ಭೀಮೇಶ್ವರಿ
* ಶಿವಪುರದ ಸತ್ಯಗ್ರಹ ಸೌಧ ಮದ್ದೂರು
* ಕೆರೆ ತೊಣ್ಣೂರು
* ಶ್ರೀರಂಗನಾಥ ಸ್ವಾಮಿ ದೇವಾಲಯ ಶ್ರೀರಂಗಪಟ್ಟಣ
* ಬಸರಾಳು ಮಾಧವರಾಯ ದೇವಸ್ಥಾನ (೧೨೪೮ ಇಸ್ವಿಯ ಪ್ರಾಚೀನ ದೇವಾಲಯ)
* ನಿಮಿಷಾಂಭ ದೇವಸ್ಥಾನ ಗಂಜಾಂ
* ವೈದ್ಯನಾಥಪುರದ ವೈದ್ಯನಾಥೇಶ್ವರ ಪ್ರಸಿದ್ಧ ಯಾತ್ರಾಸ್ಥಳ
* ಸುಜ್ಜಲೂರಿನ ಮಾರಮ್ಮ ದೇವಸ್ಥಾನ|ಸುಜ್ಜಲೂರಿನ ಮಾರಮ್ಮ ದೇವಸ್ಥಾನ, ಸೋಮೇಶ್ವರಲಿಂಗ,ಗಂಗರ ಕಾಲದ ಏರಿಲಿಂಗಸ್ವಾಮಿ ದೇವಸ್ಥಾನ[ಈಗ ನವೀಕರಿಸಲಾಗಿದೆ
* ದೇವರ ಮನೆ ಮೂಡಿಗೆರೆ, ಕಾಲಭೈರವೇಶ್ವರ
* ನಂಬಿನಾಯಕನಹಳ್ಳಿ .ಪಟ್ಟಲದಮ್ಮನ ದೇವಾಲಯ.
* ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇವಸ್ಥಾನ
* ವರಹನಾಥ ಕಲ್ಲಹಳ್ಳಿ ಲಕ್ಶ್ಮೀ ಭೂವರಹನಾಥ ಸ್ವಾಮಿ ದೇವಸ್ಥಾನ
* ಹೇಮಗಿರಿ ಜಲಪಾತ
* ಕೌಡ್ಲೆ: ಕೌಡ್ಲೆ ಪಟ್ಟಲದಮ್ಮ ದೇವಿ ದೇವಾಲಯ, ಚೆನ್ನಕೇಶವಸ್ವಾಮಿ ದೇವಾಲಯ, ತೋರಳಮ್ಮ ದೇವಾಲಯ, ಈಶ್ವರ ದೇವಾಲಯ
* ಮ೦ಡ್ಯ ಕೊಪ್ಪಲು: ಕಾವೇರಿ ಬೋರೇದೇವರ ದೇವಸ್ಥಾನ,ಮ೦ಡ್ಯ ಕೊಪ್ಪಲು
ಕಾಡುಕೋತ್ತನಹಳ್ಳೀ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ, ನೂರರು ವರ್ಷಗಳ ಇತಿಹಾಸ ಇದೆ.ಮದ್ದೂರು ತಾಲ್ಲೊಕ್ , ಕೆ ಎಮ್ ದೊಡ್ಡಿ ಇ೦ದ 8 ಕಿ ಮಿ ದೂರದಲ್ಲಿದೇ.

loading...