KPSC ಯಲ್ಲಿ 823 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ

Published on:  2016-12-09
Posted by:  Admin

ಕರ್ನಾಟಕ ಲೋಕ ಸೇವಾ ಆಯೋಗವು ಪ್ರಥಮ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಹಿರಿಯ ಸಹಾಯಕರ ಹುದ್ದೆಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಕಿರಿಯ ಸಹಾಯಕರ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು 823 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ 6ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕೊನೆ ದಿನ ಜನವರಿ 4, ರಾತ್ರಿ 11.45. ಪರೀಕ್ಷಾ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಪಾವತಿಸುವುದಕ್ಕೆ ಜನವರಿ 5 ಕೊನೆ ದಿನ. ಇ ಪೇಮೆಂಟ್ ಮಾಡುವುದಿದ್ದರೆ ಜನವರಿ 5ರ ರಾತ್ರಿ 11.45ರವರೆಗೆ ಅವಕಾಶ ಇದೆ.

ಅರ್ಜಿಗಳನ್ನು ಆನ್ ಲೈನ್ ಮೂಲಕ ಭರ್ತಿ ಮಾಡಿ, ಪರೀಕ್ಷಾ ಶುಲ್ಕವನ್ನು ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ಪಾವತಿಸಬಹುದು. ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕವೂ ಪಾವತಿ ಮಾಡಬಹುದಾಗಿದೆ.

ವಯೋಮಿತಿ:
ಸಾಮಾನ್ಯ ವರ್ಗ 35 ವರ್ಷ 
2(ಎ), 2(ಬಿ), 3(ಎ), 3(ಬಿ) 38 ವರ್ಷ 
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 40 ವರ್ಷ 

ಶೈಕ್ಷಣಿಕ ವಿದ್ಯಾರ್ಹತೆ:
ಪ್ರಥಮ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಹಿರಿಯ ಸಹಾಯಕರ ಹುದ್ದೆಗಳಿಗೆ ಪದವಿ ತೇರ್ಗಡೆಯಾಗಿರಬೇಕು
ದ್ವಿತೀಯ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಕಿರಿಯ ಸಹಾಯಕರ ಹುದ್ದೆಗಳಿಗೆ 10+2 ತೇರ್ಗಡೆಯಾಗಿರಬೇಕು

ಪರೀಕ್ಷಾ ಶುಲ್ಕ:
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 300 
ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ 150 
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 25 
ಅರ್ಜಿ ಸಲ್ಲಿಸಲು ಆನ್ ಲೈನ್ ವಿಳಾಸ 

ಅರ್ಜಿ ಸಲ್ಲಿಸುವ ವಿಧಾನ:
Apply Online-Halticket Downlaod Button ಅನ್ನು ಕ್ಲಿಕ್ ಮಾಡಿ, ನಂತರ ಅಲ್ಲಿ CLICK HERE TO APPLY ONLINE FOR FDA/SDA SENIOR ASSISTANT(KFCSC)JUNIOR ASSISTANT(KFCSC)-2016 ಲಿಂಕನ್ನು ಕ್ಲಿಕ್ ಮಾಡಿ ಸೂಕ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಭರ್ತಿಮಾಡಿ 
ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ 

* ಪ್ರಥಮ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಹಿರಿಯ ಸಹಾಯಕರ ಹುದ್ದೆಗಳಿಗೆ ಪರೀಕ್ಷಾ ದಿನಾಂಕ 5-2-2017 
* ದ್ವಿತೀಯ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಕಿರಿಯ ಸಹಾಯಕರ ಹುದ್ದೆಗಳಿಗೆ ಪರೀಕ್ಷಾ ದಿನಾಂಕ 12-2-2017

ಬೆಂಗಳೂರಿನಲ್ಲಿಯ ಇತರೆ ಹುದ್ದೆಗಳು:
ಸಾರಿಗೆ ಇಲಾಖೆ, ಬೆಂಗಳೂರು 14 
ಕಾನೂನು ಮಾಪನ ಶಾಸ್ತ್ರ 4 
ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆ, ಬೆಂಗಳೂರು 3 
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂಗಳೂರು 43 
ರೇಷ್ಮೆ ಇಲಾಖೆ, ಬೆಂಗಳೂರು 12 
ಕರ್ನಾಟಕ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು 3
ಪೌರಾಡಳಿತ ಇಲಾಖೆ (ಕೇಂದ್ರ ಕಚೇರಿ), ಬೆಂಗಳೂರು 5 
ಪೌರಾಡಳಿತ ಇಲಾಖೆ (ಕೇಂದ್ರ ಕಚೇರಿ), ಬೆಂಗಳೂರು 4
ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ, ಬೆಂಗಳೂರು 18 
ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಬೆಂಗಳೂರು 58 
ಕಾರ್ಮಿಕ ಇಲಾಖೆ, ಬೆಂಗಳೂರು 10 

ಇತರ ಜಿಲ್ಲೆಯಲ್ಲಿಯ ಹುದ್ದೆಗಳು:
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಬಾಗಲಕೋಟೆ) 7 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಬೆಳಗಾವಿ) 13 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಚಿಕ್ಕಬಳ್ಳಾಪುರ) 12 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ದಕ್ಷಿಣ ಕನ್ನಡ) 15 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಗದಗ) 7 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಕಲಬುರ್ಗಿ) 14 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಕೊಪ್ಪಳ) 2 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಕೋಲಾರ) 11 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಕೊಡಗು) 10 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಮಂಡ್ಯ) 18 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಮೈಸೂರು) 19 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಉತ್ತರ ಕನ್ನಡ) 21 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಉಡುಪಿ) 9 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಬಳ್ಳಾರಿ) 10
ಜಿಲ್ಲಾಧಿಕಾರಿಗಳ ಕಾರ್ಯಾಲಯ (ತುಮಕೂರು) 30 
ಪೌರಾಡಳಿತ ನಿರ್ದೇಶನಾಲಯ ಇಲಾಖೆ (ಪುರಸಭೆ ವಿಭಾಗ) 16 
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಹಿರಿಯ ಸಹಾಯಕರು 54

ಕಿರಿಯ ಸಹಾಯಕರ ಹುದ್ದೆ ವಿವರಗಳು:
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಉತ್ತರ ಕನ್ನಡ) 6 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಉಡುಪಿ) 1 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ಕೋಲಾರ) 4 
ಜಿಲ್ಲಾಧಿಕಾರಿಗಳ ಕಾರ್ಯಾಲಯ (ದಕ್ಷಿಣ ಕನ್ನಡ) 24 
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು 4 
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಾಗಲಕೋಟೆ 3 
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿ 8 
ಪೌರಾಡಳಿತ (ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ) ನಿರ್ದೇಶನಾಲಯ, ಬೆಂಗಳೂರು 14 
ಪೌರಾಡಳಿತ (ರಾಜ್ಯದ ಮಹಾನಗರ ಪಾಲಿಕೆಗಳ) ನಿರ್ದೇಶನಾಲಯ, ಬೆಂಗಳೂರು 44 
ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು 5

ಮತ್ತಿತರ ಹುದ್ದೆಗಳ ಮಾಹಿತಿ:
ವಿದ್ಯುತ್ ಪರೀಕ್ಷಣಾಲಯ, ಬೆಂಗಳೂರು 10
ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು 112 
ರೇಷ್ಮೆ ಇಲಾಖೆ, ರೇಷ್ಮೆ ನಿರ್ದೇಶನಾಲಯ, ಬೆಂಗಳೂರು 13 
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂಗಳೂರು 63 
ಸಾರಿಗೆ ಮತ್ತು ಸುರಕ್ಷತೆ, ಬೆಂಗಳೂರು 24 
ಕಾರ್ಮಿಕ ಇಲಾಖೆ, ಬೆಂಗಳೂರು 6 
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಬೆಂಗಳೂರು 40

loading...