KPSC ಯಲ್ಲಿ Librarian ಕೆಲಸ ಖಾಲಿ ಇದೆ..

Published on:  2016-11-07
Posted by:  Admin

ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ)ದಲ್ಲಿ  ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಹಾಯಕ ಗ್ರಂಥಪಾಲಕ, ವಾರ್ಡನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 21, ನವೆಂಬರ್ 2016. 

ಹುದ್ದೆ ಹೆಸರು: ಸಹಾಯಕ ಗ್ರಂಥಪಾಲಕ(Librarian), ವಾರ್ಡನ್ 
ವಿದ್ಯಾರ್ಹತೆ: ಪಿಯುಸಿ, ಡಿಪ್ಲೋಮಾ, ಪದವಿ, ಎಸ್ಸೆಸೆಲ್ಸಿ 
ಅರ್ಜಿ ಸಲ್ಲಿಸಲು ಕೊನೆದಿನಾಂಕ: 21, ನವೆಂಬರ್ 2016. 
ಒಟ್ಟು ಹುದ್ದೆಗಳು : 489 

ಸಹಾಯಕ ಲೈಬ್ರೆರಿಯನ್ : 11 ಹುದ್ದೆಗಳು 
ವಯೋಮಿತಿ: 18 ರಿಂದ 45 ವರ್ಷ
ಸಂಬಳ ನಿರೀಕ್ಷೆ: 16.000 ದಿಂದ 29,600/- ರು ಪ್ರತಿ ತಿಂಗಳಿಗೆ ವಿದ್ಯಾರ್ಹತೆ: ಪಿಯುಸಿ ಜತೆಗೆ ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್, ಮಾನ್ಯತೆ ಪಡೆದ ತಾಂತ್ರಿಕ ವಿದ್ಯಾಲಯದಿಂದ ಡಿಪ್ಲೋಮಾ ಪಡೆದಿರಬೇಕು.

ವಾರ್ಡನ್: 443 ಹುದ್ದೆಗಳು 
ವಯೋಮಿತಿ: 18 ರಿಂದ 35 ವರ್ಷ 
ಸಂಬಳ ನಿರೀಕ್ಷೆ: 14,550 ರಿಂದ 26,700 ರು ಪ್ರತಿ ತಿಂಗಳಿಗೆ
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. 

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ನಂತರ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕು.

ಅರ್ಜಿ ಶುಲ್ಕ: 2ಎ, 2ಬಿ, 3ಎ, 3ಬಿ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 300 ರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25ರು, ಅಂಚೆ ಕಚೇರಿಯಲ್ಲಿ ಇ ಪೇಮೆಂಟ್ ಮಾಡಬಹುದು. 

ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ ಸೈಟ್ ಮಾತ್ರ ಬಳಸಿ, ಅರ್ಜಿ ಸಲ್ಲಿಸುವ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ 

ಉದ್ಯೋಗ ಕುರಿತಾದ ಜಾಹೀರಾತು ಪ್ರಕಟಣೆ ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ 

loading...