ಕೊಡಗು ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಜಿಲ್ಲೆ ಕೊಡಗನ್ನು ಗುರುತಿಸಲು ಇದಕ್ಕಿಂತ ಬೇರೆ ವರ್ಣನೆ ಬೇಕಾಗಿಲ್ಲ.

ಹೆಸರಿನ ನಿಷ್ಪತ್ತಿ:
ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ ಸ್ಕಾಟ್ ಲ್ಯಾಂಡ್ ಎಂಬ ಹೆಸರೂ ಇದಕ್ಕಿದೆ. ಕೊಡಗು - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ.

ಇಲ್ಲಿಯ ಜನ:
ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್, ಅರೆಭಾಷೆ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

ಜನಸಂಖ್ಯೆ:
೨೦೧೧ರ ಜನಗಣತಿಯ ಪ್ರಕಾರ ಕೊಡಗಿನ ಜನಸಂಖ್ಯೆ ೫,೫೪,೭೬೨. ಇವರಲ್ಲಿ ೨,೭೪,೭೨೫ ಪುರುಷರು ಮತ್ತು ೨,೮೦,೦೩೭ ಸ್ತ್ರೀಯರು. ಅಂದರೆ ಪ್ರತಿ ೧೦೦೦ ಪುರುಷರಿಗೆ ೧೦೧೯ ಸ್ತ್ರೀಯರಿದ್ದಾರೆ. ಕೊಡಗಿನ ಒಟ್ಟು ವಿಸ್ತೀರ್ಣವನ್ನು ೪,೧೦೨ ಚದರ ಕಿಲೊಮೀಟರನ್ನು ಪರಿಗಣಿಸಿದಾಗ ಇಲ್ಲಿನ ಜನಸಾಂದ್ರತೆ ಪ್ರತಿ ಚದರ ಕಿಲೊಮೀಟರಿಗೆ ೧೩೫ ಮಂದಿ. ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ೪,೧೪,೩೦೫ ಮಂದಿ ( ಅಂದರೆ ೮೨.೫೨% ) ಅಕ್ಷರಸ್ಥರು. ಇವರಲ್ಲಿ ೨,೧೬,೪೧೩ ಮಂದಿ ಪುರುಷರು (೮೭.೨೪%) ಮತ್ತು ೧,೯೭,೮೯೨ ಸ್ತ್ರೀಯರು (೭೭.೯೧%). ಈ ಕೆಳಗಿನ ಕೋಷ್ಠಕದಲ್ಲಿ ಕೊಡಗಿನ ಕುರಿತ ಅಂಕಿ-ಅಂಶಗಳನ್ನು ೨೦೦೧ರ ಜನಗಣತಿಯೊಡನೆ ಹೋಲಿಸಿ ಕೊಡಲಾಗಿದೆ:

ವಿವರ ೨೦೧೧ ೨೦೦೧
ಒಟ್ಟು ಜನಸಂಖ್ಯೆ ೫,೫೪,೭೬೨ ೫,೪೮,೫೬೧
ಪುರುಷರು         ೨,೭೪,೭೨೫ ೨,೭೪,೮೩೧
ಸ್ತ್ರೀಯರು                 ೨,೮೦,೦೩೭ ೨,೭೩,೭೩೦
ಜನಸಂಖ್ಯೆಯ ಹೆಚ್ಚುವರಿ ೧.೧೩% ೧೨.೩೧%
ಕೊಡಗಿನ ವಿಸ್ತೀರ್ಣ    ೪,೧೦೨ ಚ ಕಿಮೀ ೪,೧೦೨ ಚ ಕಿಮೀ
ಜನಸಾಂದ್ರತೆ ೧೩೫ ಮಂದಿ/ಚ ಕಿಮೀ  ೧೩೪ ಮಂದಿ/ಚ ಕಿಮೀ
ಕರ್ನಾಟಕದ ಜನಸಂಖ್ಯೆಯ ಅನುಪಾತ ೦.೯೧% ೧.೦೪%
೧೦೦೦ ಪುರುಷರಿಗೆ ಸ್ತ್ರೀಯರ ಸಂಖ್ಯೆ ೧೦೧೯ ೯೯೬
ಒಟ್ಟು ಅಕ್ಷರಸ್ಥರು          ೪,೧೪,೩೦೫ ೩,೭೩,೫೪೧
ಅಕ್ಷರಸ್ಥ ಪುರುಷರು ೨,೧೬,೪೧೩ ೨,೦೦,೫೮೮
ಅಕ್ಷರಸ್ಥ ಸ್ತ್ರೀಯರು ೧,೯೭,೮೯೨ ೧,೭೨,೯೫೩
ಸರಾಸರಿ ಒಟ್ಟು ಅಕ್ಷರಸ್ಥರು ೮೨.೫೨%        ೭೭.೯೯%
ಪುರುಷರ ಪ್ರಮಾಣ         ೮೭.೨೪%        ೮೩.೭೦%
ಸ್ತ್ರೀಯರ ಪ್ರಮಾಣ ೭೭.೯೧%        ೭೨.೨೬%

ಭೂಗೋಳ:
ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು.

ತಾಲೂಕುಗಳು:
ಕೊಡಗಿನಲ್ಲಿ ಮೂರು ತಾಲೂಕುಗಳಿವೆ. ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ.

  • ಮಡಿಕೇರಿ
  • ವಿರಾಜಪೇಟೆ
  • ಸೋಮವಾರಪೇಟೆ

ಮಡಿಕೇರಿ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು:

  • ಅಬ್ಬಿ ಜಲಪಾತ
  • ಓಂಕಾರೇಶ್ವರ ದೇವಸ್ಥಾನ
  • ಗದ್ದಿಗೆ
  • ಅರಮನೆ
  • ರಾಜಸೀಟ್
  • ತಲಕಾವೇರಿ ಇತ್ಯಾದಿಗಳಾದರೆ,
ವಿರಾಜಪೇಟೆ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು
ವಿರಾಜಪೇಟೆ ತಾಲುಕಿನಲ್ಲಿ-
  • ನಾಗರಹೊಳೆ
  • ಇರ್ಪು
  • ಕುಂದ
  • ಟೀ ಏಸ್ಟೇಟ್
  • ಸೈಂಟ್ ಏನ್ಸ್ ಚರ್ಚ್
  • ಇಗ್ಗುತ್ತಪ್ಪ ದೇವಸ್ಥಾನ
  • ನಾಲ್ಕುನಾಡು ಅರಮನೆ ಮುಂತಾದವು ಇವೆ.
ಸೋಮವಾರಪೇಟೆ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು
ಸೋಮವಾರಪೇಟೆ ತಾಲುಕಿನಲ್ಲಿ-

  • ಕಾವೇರಿ ನಿಸರ್ಗಧಾಮ
  • ಕೊಪ್ಪದ ಗೊಲ್ಡನ್ ದೇವಸ್ಥಾನ
  • ವೀರಭೂಮಿ
  • ದುಬಾರೆ ಅರಣ್ಯ
  • ಹಾರಂಗಿ ಜಲಾಶಯ
  • ಚಿಕ್ಲಿ ಹೊಳೆ
  • ಹೊನ್ನಮ್ಮನ ಕೆರೆ
  • ಮಲ್ಲಳ್ಳಿ ಜಲಪಾತ ಮೊದಲಾದವಿವೆ.
ಬೆಳೆಗಳು:
ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿ ಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೧/೩ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.

ಇತಿಹಾಸ:
ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

loading...