ಕನ್ನಡ ವ್ಯಾಕರಣ - ಸಂಧಿಗಳು

Published on:  2016-11-07
Posted by:  Admin

ಕನ್ನಡ ವ್ಯಾಕರಣ - ಸಂಧಿಗಳು

 

. ಸಂಧಿಗಳು

 

          ಎರಡು ಅಕ್ಷರ (ಸ್ವರ ಅಥವಾ ವ್ಯಂಜನಗಳ ನಡುವೆ ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಚರಿಸುವುದಕ್ಕೆ ಸಂಧಿ ಎನ್ನುವರು.

     

 ಸಂಧಿಯಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳು.

 

        . ಕನ್ನಡ ಸಂಧಿ

        . ಸಂಸ್ಕೃತ ಸಂಧಿ

 

    . ಕನ್ನಡ ಸಂಧಿ : ಎರಡು ಕನ್ನಡ ಪದಗಳು ( ಪೂರ್ವ ಪದ, ಉತ್ತರ ಪದಕೂಡಿ ಆಗುವ ಸಂಧಿಯನ್ನು ಕನ್ನಡ ಸಂಧಿ ಎನ್ನುವರು.

 

    . ಸಂಸ್ಕೃತ ಸಂಧಿ: ಎರಡು ಸಂಸ್ಕೃತ ಪದಗಳು ಕೂಡಿ ಆಗುವ ಸಂಧಿಯು ಸಂಸ್ಕೃತ ಸಂಧಿ

 

   ( ಒಂದು ಕನ್ನಡಪದ ಮತ್ತು ಇನ್ನೂಂದು ಸಂಸ್ಕೃತಪದ ಕೂಡಿ ಸಂಧಿಯಾದರು ಅದನ್ನು ಕನ್ನಡ ಸಂಧಿ ಎನ್ನುವರು)

 

ಕನ್ನಡ ಮತ್ತು ಸಂಸ್ಕೃತ ಸಂಧಿಗಳೆರಡರಲ್ಲಿಯೂ ಸ್ವರಸಂಧಿ ಮತ್ತು  ವ್ಯಂಜನ ಸಂಧಿ ಎಂಬ ಎರಡು ಪ್ರಕಾರಗಳಿರುತ್ತವೆ.

 

     . ಸ್ವರ ಸಂಧಿ : ಸ್ವರದ ಮುಂದೆ ಸ್ವರವು ಬಂದು ಸಂಧಿ ಆದರೆ ಅದನ್ನು ಸ್ವರ ಸಂಧಿ ಎನ್ನುವರು.

   

ಉದಾ:     ಮಾತು + ಇಲ್ಲ, ಇಲ್ಲಿ ಸ್ವರದ ಮುಂದೆ  ಸ್ವರ ಬಂದು ಸಂಧಿಯಾಗಿದೆ

 

      . ವ್ಯಂಜನ ಸಂಧಿ: ಸ್ವರ ಮತ್ತು ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ಅಥವಾ ಎರಡೂ ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ಅದಕ್ಕೆ ವ್ಯಂಜನ ಸಂಧಿ ಎನ್ನುವರು.

 

ಉದಾಸುಖ + ಪಡುಇಲ್ಲಿ ಸ್ವರದ ಮುಂದೆ ಪ್ ವ್ಯಂಜನ ಬಂದಿದೆ;

              ಕಣ್ + ಪನಿ, ಇಲ್ಲಿ ಣ್ ವ್ಯಂಜನದ ಮುಂದೆ ಪ್ ವ್ಯಂಜನ ಬಂದಿದೆ.

 

   ಕನ್ನಡದ ಸ್ವರಸಂಧಿಗಳು

 

ಸ್ವರಲೋಪ ಸಂಧಿ ಅಥವಾ ಲೋಪ ಸಂಧಿ:

 

         ಸ್ವರದ ಮುಂದೆ ಸ್ವರವು ಬಂದು, ಸಂದಿಯಾಗುವಾಗ ಪೂರ್ವ ಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬರುವದಿಲ್ಲ. ಇದನ್ನು ಲೋಪ ಸಂಧಿ ಎನ್ನುವರು.

 

  ಉದಾ:    ಪೂರ್ವಪದ + ಉತ್ತರ ಪದ = ಸಂಧಿಪದ

                     ನೆನಪು    +     ಇಲ್ಲ        =  ನೆನಪಿಲ್ಲ

                              +                = 

              ಉದಾಹರಣೆಯಲ್ಲಿ ಪೂರ್ವ ಪದದ ಕೊನೆಯಲ್ಲಿ ಮತ್ತು ಉತ್ತರ ಪದದ ಮೊದಲಲ್ಲಿ ಸೇರಿ, ಸಂಧಿಪದದಲ್ಲಿ ಪೂರ್ವಪದದ ಸ್ವರಲೋಪ ವಾಗಿದೆ.

 

 ಇನ್ನಿತರ ಉದಾಹರಣೆಗಳು: ಮನೆಯೊಳಗೆ, ಕತ್ತಲಾಗು, ದೇವರಿಂದ, ಮನದೊಳಗೆನೀರಿಲ್ಲಮುಂತಾದವು.

 

 

. ಆಗಮ ಸಂದಿ:

          ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದ ಮತ್ತು  ಉತ್ತರ ಪದಗಳೆರಡರಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇರುವದಲ್ಲದೆ ಹೊಸದಾಗಿ ಯ್, ವ್, ಲ್  ವ್ಯಂಜನಗಳು ಆಗಮವಾಗಿ ಸೇರುತ್ತವೆ. ಇದನ್ನು ಆಗಮಸಂಧಿ ಎಂದು ಹೇಳಿರುವ.

 

ಉದಾ: ಪೂರ್ವಪದ + ಉತ್ತರಪದ= ಸಂಧಿಪದ

             ಕೆರೆ         +     ಅನ್ನು      = ಕೆರೆಯನ್ನು             

             ಗುರು      +     ಅನ್ನು      = ಗುರುವನ್ನು

             ಮಾಡುತ್ತ +    ಕೈ            = ಮಾಡುತ್ತಲೂ

 

     ಮೇಲಿನ ಉದಾಹರಣೆಗಳಲ್ಲಿ ಪೂರ್ವಪದ, ಉತ್ತರಪದದಲ್ಲಿಯು ಎಲ್ಲ ಅಕ್ಷರಗಳು ಸಂಧಿಪದದಲ್ಲಿರುವವು, ಮತ್ತು ಸಂಧಿಪದದಲ್ಲಿ ಯ್, ವ್, ಲ್, ವ್ಯಂಜನಗಳು ಹೊಸದಾಗಿ ಆಗಮವಾಗಿ ಸೇರುತ್ತವೆ; ಇದರಿಂದ ಮೊದಲಿನ ಅರ್ಥಕ್ಕೆ ಬಾಧೆಯೂ ಬರುವದಿಲ್ಲ.

 

. ಯಕರಾಗಮ ಸಂಧಿ: , , , , , , ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿಪದದಲ್ಲಿ, ಯ್, ವ್ಯಂಜನ ಹೊಸದಾಗಿ ಆಗಮವಾಗುವುದು.

 

ಉದಾ: ಮುದಿ+ಅಪ್ಪ=ಮುದಿಯಪ್ಪ

                  +  = ಯ್

 

  ಇನ್ನಿತರ ಉದಾಹರಣೆಗಳು: ಮನೆಯನ್ನು, ಗುರಿಯನ್ನು, ಗುರಿಯನ್ನು, ಹುಲಿಯನ್ನು, ಇತ್ಯಾದಿ

 

. ವಕರಾಗಮ ಸಂಧಿ: , , , , , ಕಡೆಗಳಲ್ಲಿ ಮುಂದೆ ಸ್ವರವು ಬಂದರೆ, ವ್, ವ್ಯಂಜನ ಹೊಸದಾಗಿ ಆಗಮವಾಗುವುದು.

 

ಉದಾಗುರು + ಇಗೆ       = ಗುರುವಿಗೆ            

             ಕರು  + ಅನ್ನು    = ಕರುವನ್ನು

             ಮಾತೃ + ಅನ್ನು  = ಮಾತೃವನ್ನು

             ಗೋ + ಅನ್ನು    = ಗೋವನ್ನು

             

. ಲಕರಾಗಮ ಸಂಧಿ : ಪದಾಂತ್ಯ ಸ್ವರಕ್ಕೆ ಸ್ವರಾದಿ ಶಬ್ದವಾಗಲಿ ಅಥವಾ ನಿಪಾತವಾಗಲಿ ಪರವಾದರೆ ಲ್, ವ್ಯಂಜನ ಹೊಸದಾಗಿ ಆಗಮವಾಗುವುದು. ( ನಿಪಾತ ಎಂದರೆ , , ಮುಂತಾದವು)

 

ಉದಾ: ನೋಡುತ್ತ + = ನೋಡುತ್ತಲೂ

           ಅದರಿಂದ +      = ಅದರಿಂದಲೇ       

 

   ಕನ್ನಡ ವ್ಯಂಜನ ಸಂಧಿ

 

. ಆದೇಶಸಂಧಿ:  ಕನ್ನಡ ವ್ಯಂಜನ ಸಂಧಿಗಳಲ್ಲಿ ಉತ್ತರಪದ ಆದಿಯಲ್ಲಿರುವ ವ್ಯಂಜನದ ಸ್ಥಳದಲ್ಲಿ ವ್ಯಂಜನವು ಸಂಧಿಪದದಲ್ಲಿ ಆದೇಶವಾಗಿ ಬರುವುದು. ಅಂದರೆ , , , , , ಗಳ ಬದಲಾಗಿ ಕ್ರಮವಾಗಿ , , , , , ಗಳು ಆದೇಶವಾಗಿ ಬರುವುದೇ ಆದೇಶಸಂಧಿ.

 

 ಉದಾ:  

             ಹುಲಿ + ತೊಗಲು = ಹುಲಿದೊಗಲು

              ಸುಖ + ಪಡು     = ಸುಖಬಡು

               ಸಿರಿ  + ಕನ್ನಡ    = ಸಿರಿಗನ್ನಡ

               ಕಣ್ಣು + ಪನಿ      = ಕಂಬನಿ,     ಮುಂತಾದವುಗಳು

loading...