ಕನ್ನಡ ವ್ಯಾಕರಣ - ದ್ವಿರುಕ್ತಿ ಪದಗಳು

Published on:  2016-11-04
Posted by:  Admin

ಕನ್ನಡ ವ್ಯಾಕರಣ - ದ್ವಿರುಕ್ತಿ ಪದಗಳು

 ದ್ವಿರುಕ್ತಿ ?

 ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವದಕ್ಕಾಗಿ ಒಂದು ಪದವನ್ನೋ ಅಥವಾ ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವದಕ್ಕೆ ದ್ವಿರುಕ್ತಿ ಎನ್ನುವರು.

 

ಉದಾಹರಣೆ:

 ಸುಮ ಬೇಗ ಬೇಗ ಬಂದಳು

ಎತ್ತುಗಳು ಓಡಿ ಓಡಿ ಆಯಾಸವಾದವು

ಬಿಕ್ಷುಕರು ಮನೆ ಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು

 ಮೇಲಿನ ವಾಕ್ಯಗಳಲ್ಲಿ ಮನೆ ಮನೆ, ಬೇಗ ಬೇಗ, ಓಡಿ ಓಡಿ - ಇತ್ಯಾದಿ ಶಬ್ದಗಳನ್ನು ಎರಡೆರಡು ಸಲ ಉಪಯೋಗಿಸಲಾಗಿದೆ.

 ಮನೆ ಮನೆಗಳನ್ನು ತಿರುಗಿ ಎಂಬಲ್ಲಿ ಪ್ರತಿಯೊಂದು ಮನೆಯನ್ನೂ ತಿರುಗಿ ಎಂಬರ್ಥವೂ ಬೇಗ ಬೇಗ ಬಾ ಎಂಬಲ್ಲಿ ಅವಸರವು ವ್ಯಕ್ತವಾಗುವುದು.

 ಹೀಗೆ ನಾವು ಒಂದು ಶಬ್ದವನ್ನು ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವದಕ್ಕೊಸ್ಕರ ಎರಡೆರಡು ಸಲ ಪ್ರಯೋಗಿಸುವುದು ಸಾಮಾನ್ಯ.

ದ್ವಿರುಕ್ತಿ ಎಂದರೆ  ದ್ವಿ- ಎರಡು , ಉಕ್ತಿ- ಮಾತು ಅಥವಾ ಶಬ್ದ ಎಂದರ್ಥ.

 

ದ್ವಿರುಕ್ತಿಯಲ್ಲಿ ಬರುವ ಕೆಲವು ವಿಶೇಷ ರೂಪಗಳು

 

* ಬಯಲು ಬಯಲು - ಬಟ್ಟ ಬಯಲು

* ತುದಿ ತುದಿ - ತುತ್ತ ತುದಿ

* ಕಡೆ ಕಡೆಗೆ - ಕಟ್ಟ ಕಡೆಗೆ

* ಮೊದಲು ಮೊದಲು - ಮೊಟ್ಟ ಮೊದಲು

* ನಡುವೆ  ನಡುವೆ  -  ನಟ್ಟ ನಡುವೆ.    ಇತ್ಯಾದಿ

 

 

ಜೋಡಿ ನುಡಿ

 

* ಅರ್ಥಸಾಮ್ಯವಿರುವ ಎರಡು ಪದಗಳನ್ನು ಒಟ್ಟಿಗೆ ಬಳಸುವದಕ್ಕೆ  ಜೋಡು ನುಡಿ ಎನ್ನುವರು.

 

* ಒಂದೆ ಅರ್ಥ ಕೊಡುವ ದೇಶ್ಯ ಶಬ್ದಗಳು ಜೊತೆ ಸೇರಿರಬಹುದು.

 

 ಉದಾ: ಅಪರಂಜಿ ಚಿನ್ನ, ಅದ್ದು ಮುಳುಗು, ನರುಗಂಪು, ಬಾಳು ಬದುಕು, ಇತ್ಯಾದಿ 

 

* ಅನ್ಯ ದೇಶ ಶಬ್ದಗಳು ಸೇರಬಹುದು

 

  ಉದಾ : ಕಾಫಿ ತಿಂಡಿ, ಕ್ರಿಮಿ ಕೀಟ, ಮನೆಮಠ

 

* ವಿರುದ್ಧ ಪದ ಜೋಡಿ ನುಡಿಗಳಾಗಬಹುದು

 

ಉದಾ: ಹುಟ್ಟು ಸಾವು, ರಾಗ ದ್ವೇಷ, ಮೇಲೆ ಕೆಳಗೆ,    ಇತ್ಯಾದಿ

loading...