ಇಡಗುಂಜಿ ಶ್ರೀ ವಿನಾಯಕ ದೇವಸ್ಥಾನ

Published on:  2016-09-09
Posted by:  Admin

ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ದ (ಗೋಕರ್ಣ, ಇಡಗುಂಜಿ, ಹಟ್ಟಿ ಅಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ, )ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.

ಕರ್ನಾಟಕದ ಕರಾವಳಿ ಪ್ರದೇಶಗಳು ತಮ್ಮದೇ ಆದ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಎಲ್ಲಿ ನೋಡಿದರೂ ನದಿ, ಸರೋವರ, ಝರಿ, ಜಲಪಾತಗಳಲ್ಲದೇ ಇಲ್ಲಿರುವ ಪ್ರಾಚೀನ ಪುರಾತನ ದೇವಾಲಯಗಳು ಕೂಡ ತಮ್ಮದೇ ಆದ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂಥ ಅದ್ಭುತ ಪ್ರಕೃತಿ ಸೊಬಗನ್ನೂ ಮತ್ತು ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದ ಶ್ರೀ ಕ್ಷೇತ್ರವೇ ಇಡಗುಂಜಿ.



ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಿಂದ ಕೇವಲ 64 ಕಿ.ಮೀ ಮತ್ತು ಹೊನ್ನಾವರ ತಾಲೂಕಿನಿಂದ ಕೇವಲ 14 ಕಿ.ಮೀ ಅಂತರದಲ್ಲಿದೆ ಇಡಗುಂಜಿ. ಶರಾವತಿ ನದಿಯ ತಟದಲ್ಲಿರುವ ಈ ಕ್ಷೇತ್ರಕ್ಕೆ ಮುಂಚೆ ಇಡಾಕುಂಜ ಎಂದು ಕರೆಯಲಾಗುತ್ತಿತ್ತು. ಇಡಾ ಎಂದರೆ ಆನೆ, ಕುಂಜ ಎಂದರೆ ಸಸ್ಯರಾಶಿ. ದಟ್ಟವಾದ ಗೋಂಡಾರಣ್ಯದ ಮಧ್ಯದಲ್ಲಿರುವ ಈ ಪ್ರದೇಶ ನಂತರ ಇಡಗುಂಜಿಯಾಗಿ ರೂಢಿಯಲ್ಲಿದೆ. ಎಲ್ಲಾ ದೇವರುಗಳಲ್ಲಿ ಗಣೇಶನೇ ಪ್ರಥಮ ಪೂಜ್ಯನು.

ವಕ್ರತುಂಡ, ಏಕದಂತ, ಕೃಷ್ಣ ಪಿಂಗಾಕ್ಷ, ಗಜವಕ್ರ, ಲಂಬೋದರ, ವಿಕಟನಾವ, ವಿಘ್ನರಾಜೇಂದ್ರ, ಧುಮ್ರವರ್ಣ, ಬಾಲಚಂದ್ರ, ವಿನಾಯಕ, ಗಣಪತಿ, ಗಜಾನನ ಹೀಗೆ 12 ಹೆಸರುಗಳನ್ನು ಹೊಂದಿದ ವಿಘ್ನನಿವಾರಕ, ವಿN°àಶ್ವರನಾಗಿ ಭಕ್ತರ ಸಂಕಷ್ಟ ನಿವಾರಕನಾಗಿದ್ದಾನೆ. ಎಲ್ಲಾ ಸಮುದಾಯದವರಿಗೂ ಈ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದ್ದು ನಂಬಿ ಬಂದ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲು ಗಣೇಶ ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ. ಈ ಬಾಲಗಣಪತಿಯ ಸನ್ನಿದಿಗೆ ಭಕ್ತರು ಪದೇ ಪದೇ ಆಗಮಿಸಿ ತಮ್ಮ ಹರಕೆ ಸಲ್ಲಿಸುವುದು ಈ ಕ್ಷೇತ್ರದ ಮಹಿಮೆಗೆ ನಿದರ್ಶನವಾಗಿದೆ. ಸಂಕಷ್ಟಿ, ವಿನಾಯಕ ಚೌತಿ, ರಥಸಪ್ತಮಿ ಇನ್ನಿತರ ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ.



ವಿನಾಯಕ ಮೂರ್ತಿ
ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ "ಮಹೋತಭಾರ ಶ್ರೀ ವಿನಾಯಕ" ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ "ದ್ವಿ ಭುಜ" ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ.

ದೇವಸ್ಥಾನದ ಸಮಯ
1. ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ
2. ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ
3. ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆ.



ಪೌರಾಣಿಕ ಹಿನ್ನೆಲೆ
ಒಂದು ಪುರಾಣದ ಪ್ರಕಾರ ದ್ವಾಪರ ಯುಗದ ಅಂತ್ಯದಲ್ಲಿ ಅಂದರೆ ಕಲಿಯುಗದ ಆರಂಭದಲ್ಲಿ ಭೂಮಿಯ ಮೇಲಿರುವ ರಾಕ್ಷಸರನ್ನು ಸಂಹಾರ ಮಾಡಲೆಂದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಈ ಅರಣ್ಯಕ್ಕೆ ಬಂದರು. ಸಾಧು ಸಂತರಿಗೆ ಅವರ ಯಜ್ಞ ಯಾಗಕ್ಕೆ ಸಹಾಯವಾಗಲೆಂದು ಚಕ್ರತೀರ್ಥ ಮತ್ತು ಬ್ರಹ್ಮತೀರ್ಥ ಎಂಬ ಎರಡು ಹೊಂಡಗಳನ್ನು ಇಲ್ಲಿ ನಿರ್ಮಿಸಿದ್ದರು. ಕೆಲ ಕಾಲದ ನಂತರ ರಾಕ್ಷಸರ ತೊಂದರೆ ಹೆಚ್ಚಾದಾಗ ವಾಲಖೀಲ್ಯ ಮುನಿಗಳು ನಾರದರನ್ನು ಪ್ರಾರ್ಥಿಸಿ ತಮ್ಮ ತಪಸ್ಸಿಗೆ ಆದ ವಿಘ್ನಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಬೇಡಿಕೊಂಡಾಗ ನಾರದರು ಗಣೇಶನ ತಾಯಿ ಪಾರ್ವತಿಯ ಬಳಿ ಹೋಗಿ ಬಾಲ ಗಣೇಶನನ್ನು ಭೂಲೋಕಕ್ಕೆ ಕಳುಹಿಸಿಕೊಡುವಂತೆ ಬೇಡಿಕೊಂಡರು. ಗಣೇಶನನ್ನು ಕರೆತಂದು ಮುನಿಗಳ ಮುಖಾಂತರ ಈ ಕ್ಷೇತ್ರದಲ್ಲಿ ನಂತರ ಗಣೇಶನ ಆಶೀರ್ವಾದದಿಂದ ವಾಲಖೀಲ್ಯ ಮುನಿಗಳು ಇಲ್ಲಿ ತಪ್ಪಸ್ಸಾಚರಿಸಿ ಸಿದ್ಧಿ ಪಡೆದುಕೊಂಡರು. ಇಷ್ಟೇ ಅಲ್ಲದೇ ನಾರದರು ಇಲ್ಲಿ ದೇವತೀರ್ಥವೆಂಬ ಇನ್ನೊಂದು ಹೊಂಡವನ್ನೂ ನಿರ್ಮಿಸಿದರು ಎಂಬ ಪ್ರತೀತಿ ಕೂಡ ಇದೆ.



ಸುಮಾರು 4 ರಿಂದ 5 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೆ‌àವಾಲಯ ವಿಶಾಲವಾಗಿದ್ದು ಗರ್ಭಗುಡಿಯಲ್ಲಿ ಸುಂದರವಾದ ಕಪ್ಪು ಶಿಲೆಯಲ್ಲಿ ನಿರ್ಮಿಸಿದ ವಿN°àಶ್ವರ ಪೀಠದ ಮೇಲೆ ನಿಂತಿದ್ದಾನೆ. ಆಭರಣ ಭೂಷಿತನಾದ ಗಣಪನಿಗೆ ಎರಡು ಕೈ, ಎರಡು ದಂತಗಳಿವೆ. ಬಲಗೈಯಲ್ಲಿ ಪದ್ಮವನ್ನು ಹಿಡಿದಿದ್ದಾನೆ. ಎಡಗೈಯಲ್ಲಿ ಮೋದಕ ತುಂಬಿದ ಪಾತ್ರೆಯಿದೆ. ತನ್ನ ಸೊಂಡಿಲಿನಿಂದ ಮೊದಕವನ್ನು ಸವಿಯುತ್ತಿರುವ ಗಣೇಶನ ಹೊಟ್ಟೆಗೆ ನಾಗರವಿಲ್ಲ. ತಲೆಯ ಕೂದಲು ಹಿಂದೆ ಹರಡಿಕೊಂಡಂತಿದೆ. ಈ ಬಾಲ ಗಣಪತಿ ವಿಗ್ರಹದ ಒಂದು ವಿಶೇಷತೆ ಏನೆಂದರೆ ಈ ವಿಗ್ರಹವು ಎರಡು ಸಾವಿರ ವರ್ಷ ಪುರಾತನವಾದದ್ದು ಮತ್ತು ಇದಕ್ಕೆ ಎರಡೂ ದಂತಗಳಿವೆ. ಸಾಮಾನ್ಯವಾಗಿ ಪ್ರತಿಯೊಂದು ಗಣೇಶನ ವಿಗ್ರಹಕ್ಕೆ ಒಂದೇ ದಂತವಿರುತ್ತದೆ. ಆ ಕಾರಣದಿಂದ ಗಣೇಶನಿಗೆ ಏಕದಂತ ಎನ್ನಲಾಗುತ್ತದೆ. ಆದರೆ ಇಡಗುಂಜಿಯಲ್ಲಿರುವ ಗಣೇಶನಿಗೆ ಎರಡೂ ದಂತಗಳಿವೆ.

ಇಂಥ ಅಪರೂಪವಾದ ಪುರಾತನ ದೇವಾಲಯದಲ್ಲಿ ರಥ ಸಪ್ತಮಿಯಂದು ವಿಶೇಷ ಜಾತ್ರೆ ನಡೆಯುತ್ತದೆ. ವರ್ಷದಲ್ಲಿ ಒಂದು ದಶಲಕ್ಷ ಭಕ್ತಾದಿಗಳು ಇಲ್ಲಿ ಭೇಟಿ ನೀಡುತ್ತಾರೆ. ಸಾಗರೋಪಾದಿಯಲ್ಲಿ ಬರುವ ಭಕ್ತಾದಿಗಳು ಬಾಲ ಗಣಪತಿಯ ಆಶೀರ್ವಾದ ಪಡೆದು ಪುನೀತರಾಗುತ್ತಾರೆ ಮತ್ತು ಅವರ ಎಲ್ಲಾ ಇಚ್ಛೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಇಲ್ಲಿರುವ ಗಣೇಶನ ವಿಗ್ರಹಕ್ಕೂ ಮತ್ತು ಗೋಕರ್ಣದಲ್ಲಿರುವ ಗಣೇಶನ ವಿಗ್ರಹಕ್ಕೂ ಸರಿಯಾಗಿ ಹೊಂದಿಕೆಯಿದೆ. ಎರಡೂ ವಿಗ್ರಹಗಳು ಒಂದೇ ತೆರನಾಗಿವೆ.

ವಿಶೇಷ ಸೇವೆಗಳು
  • ತುಲಾಭಾರ
  • ಗಣ ಹೋಮ
  • ಮೂಢ ಗಣಪತಿ
  • ರಂಗ ಪೂಜೆ



ಇಲ್ಲಿಗೆ ತಲುಪುವುದು ಹೇಗೆ?
ರಸ್ತೆ ಮಾರ್ಗ: ಭಟ್ಕಳ ಮತ್ತು ಹೊನ್ನಾವರ ದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ.
ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ (ಕೊಂಕಣ ರೈಲ್ವೆ ) ಅಥವಾ ಮುರುಡೇಶ್ವರ (ಕೊಂಕಣ ರೈಲ್ವೆ ).
ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

ಆಹಾರ ಮತ್ತು ವಸತಿ ಸೌಕರ್ಯಗಳು
ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳು ಲಭ್ಯವಿರುತ್ತದೆ.



ಸಂರ್ಪಕ ವಿಳಾಸ
ಶ್ರೀ ವಿನಾಯಕ ದೇವರು, ಇಡಗುಂಜಿ, ಅಂಚೆ: ಮಿಲನ ಇಡಗುಂಜಿ, ಹೊನ್ನಾವರ ತಾ||, ಉತ್ತರ ಕನ್ನಡ ಜಿ||, ಕರ್ನಾಟಕ ರಾ||, ಭಾರತ-೫೮೧ ೪೨೩ ಫೋ: (೦೮೩೮೭) ೨೪೭ ೨೨೭ ಇಮೇಲ್: contact@idagunjidevaru.com

ಇತರೆ ಪ್ರವಾಸಿ ಸ್ಥಳಗಳು
ಇಡಗುಂಜಿಗೆ ಮುರುಡೇಶ್ವರ, ಗೋರ್ಕಣ, ಅಪ್ಸರಕೊಂಡ, ಕಾಸರಗೋಡು ಸಮುದ್ರ ತೀರ, ಶರಾವತಿ ನದಿ, ರಾಮ ಮತ್ತು ಲಕ್ಷ್ಮಣ ತೀರ್ಥಗಳು ಕೆಲವು ಸಮೀಪದ ಪ್ರವಾಸಿ ಸ್ಥಳಗಳಿವೆ.

loading...