ಚಳಿಗಾಲದಲ್ಲಿ ತುಟಿಯ ಆರೈಕೆ ಹೀಗೆ ಮಾಡಿ

Published on:  2017-01-12
Posted by:  Raksha

ಚಳಿಗಾಲದಲ್ಲಿ ನಿಮ್ಮ ತುಟಿಯ ಸೌಂದರ್ಯ ಕಾಪಾಡಲು ಸುಲಭವಾದ ಉಪಾಯಗಳು:
ಎಲ್ಲರಿಗು ತಮ್ಮ ತುಟಿ ಕೆಂಪಗೆ , ಸಾಫ್ಟ್ ಆಗಿ ಹೊಳೆಯುತ್ತಿರಬೇಕು ಅನ್ನೋ ಅಸೆ ಇದ್ದೆ ಇರುತ್ತೆ ಅಲ್ವ. ಆದ್ರೆ ಚಳಿಗಾಲ ಬಂತು ಅಂದ್ರೆ ಸಾಕು ನಮ್ಮ ತುಟಿಗಳು ಒಣಗಿ ಹಾಗು ಸೀಳಿ ಹೋಗುತ್ತವೆ .

ನಿಮ್ಮ ತುಟಿಗಳ ಚರ್ಮ ಅತ್ಯಂತ ತೆಳುವಾಗಿದ್ದು  ಮತ್ತು  ಇದನ್ನು ಸೀಳುವಿಕೆಯಿಂದ  ತಡೆಗಟ್ಟಲು ಯಾವುದೇ ತೈಲ ಗ್ರಂಥಿಗಳು ಹೊಂದಿಲ್ಲವಾದ್ದರಿಂದ, ನಿಮ್ಮ ತುಟಿಗಳಿಗೆ ಹೆಚ್ಚುವರಿ ಆರೈಕೆಯನ್ನು ಮಾಡಬೇಕಾಗುತ್ತದೆ.

ಹಾಗಿದ್ರೆ ಬನ್ನಿ ಹೇಗೆ ನಾವು ಸುಲಭ ರೀತಿಯಲ್ಲಿ ನಮ್ಮ ತುಟಿಗಳ ಆರೈಕೆಯನ್ನು ಮಾಡಬಹುದು ಅಂತ ತಿಳಿಯೋಣ.


1) ಜೇನು ತುಪ್ಪದ ಉಪಯೋಗಮಾಡುವುದು:
ನಿಮ್ಮ ತುಟಿಯ ತೇವಾಂಶವನ್ನು ಕಾಪಾಡಲು ಜೇನುತುಪ್ಪ ಒಂದು ಒಳ್ಳೆ ಮದ್ದಾಗಿದೆ. ನೀವು ಜೇನುತುಪ್ಪವನ್ನು ಮಲಗುವ ಮುಂಚೆ ನಿಮ್ಮ ತುಟಿಗೆ ಹಚ್ಚಿ ಮಲಗುವವರಿಂದ ನಿಮ್ಮ ತುಟಿಗಳು ಒಣಗುವುದು ತಡೆಯುತ್ತದೆ ಅದಲ್ಲದೆ ನಿಮ್ಮ ತುಟಿಯ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ.


2) ಸೌತೆಕಾಯಿ ಉಪಯೋಗಿಸುವುದು:
ಸೌತೆಕಾಯಿ ಒಂದು ಅತ್ಯಂತ ಒಳ್ಳೆಯ ಗುಣ ಹೊಂದಿರುವ ತರಕಾರಿ ಆಗಿದೆ. ನೀವು ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಅದರ ಮೇಲಿನ ಸಿಪ್ಪೆಯನ್ನು ತೆಗೆದುಕೊಳ್ಳಿ ಹಾಗು ಅದನ್ನ ಚೆನ್ನಾಗಿ ಕಿವುಚಿಕೊಳ್ಳಿ. ಚೆನ್ನಾಗಿ ಕಿವುಚಿದ ನಂತರ ಸೌತೆಕಾಯಿ ರಸವನ್ನು ತೆಗೆದಿಟ್ಟಿಕೊಳ್ಳಿ. ತೆಗೆದುಕೊಂಡಿರುವ ರಸವನ್ನು ನೀವು ನಿಮ್ಮ ತುಟಿಗಳಿಗೆ ಚೆನ್ನಾಗಿ ಸವರಿ ಕನಿಷ್ಠ ಪಕ್ಷ ೨೦ ನಿಮಿಷ ಬಿಟ್ಟಿರಬೇಕು. ಇವಾಗ ೨೦ ನಿಮಿಷ ಆದ ಬಳಿಕ ನೀರಿನಿಂದ ನಿಮ್ಮ ತುಟಿಗಳನ್ನು ಸ್ವಚ್ಛಗೊಳಿಸಿ. ಈ ವಿಧಾನವನ್ನು ನೀವು ಪ್ರತಿದಿನ ಮಾಡುತ್ತ ಬರುವುದರಿಂದ ಹೇರಳವಾದ ಬದಲಾವಣೆಯನ್ನು ನೀವು ಗಮನಿಸಬಹುದು.

 
3) ಸಕ್ಕರೆ ಸ್ಕ್ರಬ್ :
ನೀವು ನಿಮ್ಮ ತುಟಿಗಳನ್ನು ಸ್ಕ್ರಬ್ ಮಾಡುವುದರಿಂದ ತುಟಿಗಳ ಮೇಲಿರುವ ಡೆಡ್ ಚರ್ಮವನ್ನು ತೆಗೆದುಹಾಕಬಹುದು. ನೀವು ಮನೆಯಲ್ಲೇ ಮಾಡಿಕೊಳ್ಳಬೇಕಾದ ಸುಲಭವಾದ ಸ್ಕ್ರಬ್ ಅಂದರೆ ಸಕ್ಕರೆ ಸ್ಕ್ರಬ್ ಇದು ನಿಮ್ಮ ಅಡುಗೆ ಮನೆಯಲ್ಲೇ ಸರಳವಾಗಿ ದೊರೆಯುವುದಾಗಿದೆ. ಅರ್ಧ ಚಮಚ ಸಕ್ಕರೆ ತೆಗೆದುಕೊಂಡು ಅದಕ್ಕೆ ೨ ಹನಿ ಆಲಿವ್ ಎಣ್ಣೆ ಅನ್ನು ಸೇರಿಸಿ ನಿಮ್ಮ ತುಟಿಗಳನ್ನು ೩ ರಿಂದ ೫ ನಿಮಿಷ ಚೆನ್ನಾಗಿ ತಿಕ್ಕಬೇಕು. ಚೆನ್ನಾಗಿ ತಿಕ್ಕಿದ ಮೇಲೆ ನೀರಿನಿಂದ ತೊಳೆದುಕೊಳ್ಳಬೇಕು . ನಂತರ ನೀವು ನಿಮ್ಮ ತುಟಿಗೆ ಲಿಪ್ ಬಾಲ್ಮ್ ಅನ್ನು ಬಳಸಬೇಕು. ಈ ವಿಧಾನವನ್ನು ಮಾಡುವುದರಿಂದ ನಿಮ್ಮ ತುಟಿಗಳು ಮೊದಲಿಗಿಂತ ಮೃದುವಾಗಿ ಹಾಗು ಹೊಳೆಯುತ್ತಿರುತ್ತವೆ.


4) ರೋಜ್ ವಾಟರ್ ಮತ್ತು ಜೇನುತುಪ್ಪ ಸೇರಿಸಿ ಬಳಸುವುದು:
ಈ ವಿಧಾನವನ್ನು ಉಪಯೋಗಿಸುವುದರಿಂದ ನಿಮ್ಮ ತುಟಿಗಳ ಸೀಳುವಿಕೆಯನ್ನು ತಡೆಗಟ್ಟಿ ತುಟಿಗಳ ತೇವಾಂಶವನ್ನು ಹೆಚ್ಚಿಸಬಹುದು. ನೀವು ಒಂದು ಬೌಲ್ ಗೆ ೧ ಚಮಚ ರೋಜ್ ವಾಟರ್ ತೆಗೆದುಕೊಳ್ಳಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ . ಈವಾಗ ಈ ಮಿಶ್ರಣವನ್ನು ನಿಮ್ಮ ತುಟಿಗಳಿಗೆ ಸವರಿ ೧೫ ನಿಮಿಷ ಬಿಡಿ. ೧೫ ನಿಮಿಷದ ನಂತರ ತುಟಿಗಳನ್ನು ನೀರಿನಿಂದ ಸ್ವಚ್ಛ ಮಾಡಿಕೊಳ್ಳಿ ಮತ್ತು ತುಟಿಗಳನ್ನು ಒಣಗಲು ಬಿಡಿ. ಈ ವಿಧಾನವನ್ನು ನೀವು ದಿನಕ್ಕೆ ಒಂದುಸರಿ ಉಪಯೋಗಿಸಿ ನಿಮ್ಮ ತುಟಿಗಳ ಸೌಂದರ್ಯವನ್ನು ಕಾಪಾಡಿಕೊಳ್ಳಿ.


5) ತುಪ್ಪದ ಬಳಕೆ :
ತುಪ್ಪವನ್ನು ಬಳಸುವುದರಿಂದ ನಿಮ್ಮ ತುಟಿಗಳ ಮೃದುತ್ವವನ್ನು ಕಾಪಾಡಲು ಸಹಾಯವಾಗುತ್ತದೆ. ನೀವು ಮಲಗುವ ಮುಂಚೆ ೨ ರಿಂದ  ೩ ಹನಿ ತುಪ್ಪವನ್ನು ತುಟಿಗೆ ಹಚ್ಚ್ಚಿಕೊಳ್ಳಿ .ಬೆಳೆಗ್ಗೆ ಎದ್ದಾಕ್ಷಣ ನಿಮಗೆ ನಿಮ್ಮ ತುಟಿಗಳ ಮೇಲೆ ಆಗಿರುವ ಬದಲಾವಣೆ ಗುರುತಿಸುವಿರಿ.

loading...