ನೆನೆಸಿಟ್ಟ ಮೆಂತ್ಯದ ನೀರನ್ನು ಕುಡಿದು ನೋಡಿ! ಆಶ್ಚರ್ಯ ಪಡುವಿರಿ

Published on:  2016-12-13
Posted by:  Admin

ಒಂದು ತಿಂಗಳು ಮೇಥಿ (ಮೆಂತ್ಯ) ನೀರು ಕುಡಿದು ಏನಾಗುತ್ತದೆ ನೋಡಿ!
ಮೆಂತ್ಯ ಬೀಜ ತಿನ್ನಲು  ಸ್ವಲ್ಪ ಕಹಿ ಆದರೆ ಈ ಸಣ್ಣ ಹಳದಿ ಬಣ್ಣದ ಬೀಜಗಳಲ್ಲಿ ನೈಸರ್ಗಿಕ ಔಷಧಿಯ ಗುಣಗಳು ಹೇರಳವಾಗಿ ಸಿಗುವುದರಿಂದ ಅನೇಕ  ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಹಾಗಿದ್ರೆ ಬನ್ನಿ ತಿಳಿಯೋಣ ಇದರ ಉಪಯೋಗಗಳೇನು ಎಂಬುದನ್ನು ಓದಿ ಮತ್ತೆ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ..

1. ನಿಮ್ಮ ತೂಕ ಇಳಿಸಲು (ಕರಗಿಸಲು ) ನೆರವಾಗುತ್ತದೆ.
ನೀರಿನಲ್ಲಿ ನೆನೆಸಿಟ್ಟಿರುವ ಮೆಂತ್ಯ ಕಾಳನ್ನು ನೀವು ದಿನಾಲೂ ಕುಡಿಯುವುದರಿಂದ ನಿಮ್ಮ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುವುದಲ್ಲದೆ , ನೀವು ಪ್ರತಿನಿತ್ಯ ಕನಿಷ್ಠ ಪಕ್ಷ ಒಂದು ತಿಂಗಳ ವರೆಗೂ ಸತತವಾಗಿ ಕುಡಿಯುವುದರಿಂದ ನಿಮ್ಮ ದೇಹದ ಬೊಜ್ಜನ್ನು ಸುಲಭ ರೀತಿಯಲ್ಲಿ ಕರಗಿಸಬಹುದು.

2. ಜೀರ್ಣಕ್ರಿಯೆ:
ಮೆಂತ್ಯ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಹೆಚ್ಚಿಸುತ್ತದೆ , ಹಾಗು ಅದರ ಉರಿಯೂತದ ಲಕ್ಷಣಗಳಿಂದ ಹೊಟ್ಟೆ ಉರಿಯೂತ ಕಡಿಮೆ ಮಾಡುತ್ತದೆ.

3. ರಕ್ತದೊತ್ತಡ ನಿಯಂತ್ರಿಸುತ್ತದೆ:
ಮೆಂತ್ಯ ದಲ್ಲಿ ಗ್ಯಾಲಕ್ಟೋಮನ್ನನ್(galactomannan) ಮತ್ತು ಪೊಟ್ಯಾಸಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.

4. ದೇಹದಲ್ಲಿ ಕೊಬ್ಬಿನ(ಕೊಲೆಸ್ಟ್ರಾಲ್) ಮಟ್ಟ ಕಡಿಮೆ ಮಾಡುತ್ತದೆ.
ಹಲವಾರು ಸಂಶೋಧನೆಯ ಪ್ರಕಾರ ಮೆಂತ್ಯಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುವ ಶಕ್ತಿ ಹೊಂದಿದೆ ಹಾಗು ಒಳ್ಳೆ ಕೊಲೆಸ್ಟ್ರಾಲ್ ಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

5. ಸಂಧಿವಾತ:
ಅದರ ಆಂಟಿಆಕ್ಸಿಡೆಂಟ್(antioxidant)  ಮತ್ತು ಅಂಟಿ ಇಂಪ್ಲಾಮ್ಮಟಾರಿ(anti inflammatory) ಗುಣ ಇರುವುದರಿಂದ  ಸಂಧಿವಾತ ನೋವು ನಿವಾರಿಸಲು ಸಹಕಾರಿಯಾಗಿದೆ.

6. ಕ್ಯಾನ್ಸರ್ ತಡೆಯುತ್ತದೆ:
ಇದರಲ್ಲಿರುವ ಫೈಬರ್ ಅಂಶದಿಂದ ದೇಹದಲ್ಲಿರುವ ತಾಜ್ಯ ವಸ್ತುವನ್ನು ಹೊರಹಾಕುತ್ತದೆ ಮತ್ತು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

loading...