ಆಪ್ರಿಕಾಟ್ ಹಣ್ಣಿನ ಉಪಯೋಗಗಳು

Published on:  2017-01-06
Posted by:  Smita

ಒಣಗಿರುವ ಆಪ್ರಿಕಾಟ್ , ಆಪ್ರಿಕಾಟ್(Apricot) ಅನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ದೊರೆಯುತ್ತದೆ. ಈ ಒಣಗಿರುವ ಆಪ್ರಿಕಾಟ್ ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ , ಫಾಸ್ಫರಸ್, ವಿಟಮಿನ್ ಎ, ಐರನ್ , ವಿಟಮಿನ್ ಸಿ ಹೇರಳವಾಗಿ ದೊರೆಯುತ್ತದೆ.ಆಪ್ರಿಕಾಟ್ ಅನ್ನು ಕನ್ನಡದಲ್ಲಿ ಜಲ್ದರು ಹಣ್ಣು, ಜರದಾರು, ಹಾಗು ಸಕ್ಕರೆ ಬಾದಾಮಿ ಇನ್ನಿತರೇ ಹೆಸರುಗಳಿಂದ ಕರೆಯುತ್ತಾರೆ.  ಹಾಗಾದ್ರೆ ಬನ್ನಿ ಈ ಒಣಗಿರುವ ಆಪ್ರಿಕಾಟ್ ನಿಂದ ಆಗುವ ಉಪಯೋಗಗಳನ್ನು ತಿಳಿಯೋಣ .

ಒಣಗಿರುವ ಆಪ್ರಿಕಾಟ್ ನಿಂದ ಆಗುವ ಉಪಯೋಗಗಳು:


1. ರಕ್ತ ಹೀನತೆ (ಅನೀಮಿಯಾ):
ಒಣಗಿದ ಆಪ್ರಿಕಾಟ್ ನಲ್ಲಿ ಕಬ್ಬಿಣದ ಅಂಶ ಹೇರಳವಾಗಿ ದೊರೆಯುವುದರಿಂದ ಇದು  ರಕ್ತ ಹೀನತೆ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ. ಒಣಗಿದ ಏಪ್ರಿಕಾಟ್ ಅನ್ನು ಪ್ರತಿ ದಿನ ಸೇವಿಸುವುದರಿಂದ ಹಿಮೋಗ್ಲೋಬಿನ್ ಅಂಶ ಜಾಸ್ತಿ ಮಾಡುತ್ತದೆ ಇದರಿಂದ ಹೆಣ್ಣು ಮಕ್ಕಳಿಗೆ ಋತುಸ್ರಾವದಲ್ಲಿ ಆಗುವ ಹೆಚ್ಚಿನ ರಕ್ತದ ಸ್ರವಿಕೆ ಅನ್ನು ತಡೆಯಲು ಸಹಾಯ ಮಾಡುತ್ತದೆ.


2. ಮಲಬದ್ಧತೆ:
ಒಣಗಿದ ಏಪ್ರಿಕಾಟ್ ನಲ್ಲಿ  ಪೆಕ್ಟಿನ್  ಹಾಗು ಸೆಲ್ಯುಲೋಸ್ ಅಂಶ ಇರುವುದರಿಂದ ಅದು ಮಲಬದ್ಧತೆ ಕಡಿಮೆ ಗೊಳಿಸುತ್ತದೆ .ಮಲಬದ್ಧತೆ ಸಮಯದಲ್ಲಿ ಸೆಲ್ಯುಲೋಸ್ ಇದು ನೀರಿನಲ್ಲಿ ಕರಗದ ಫೈಬರ್ ಆಗಿ ವರ್ತಿಸುತ್ತದೆ ಮತ್ತು ಪೆಕ್ಟಿನ್ ದೇಹದಲ್ಲಿರುವ ನೀರಿನ ಮಟ್ಟ ನಿರ್ವಹಿಸುತ್ತದೆ


3. ಜೀರ್ಣಕ್ರಿಯೆ:
ಒಣಗಿದ ಆಪ್ರಿಕಾಟ್ ಊಟಕ್ಕಿನ ಮುಂಚೆ ಸೇವಿಸುವುದರಿಂದ ನಿಮ್ಮ ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ . ಇದರಲ್ಲಿ ಆಲ್ಕಾಲಿ ಗುಣ ಇರುವುದರಿಂದ ಇದು ದೇಹದಲ್ಲಿರುವ ಆಮ್ಲಗಳು ನಿಷ್ಪರಿಣಾಮಗೊಳಿಸುತ್ತದೆ.


4. ಚರ್ಮದ ತೊಂದರೆಗೆ: 
ಒಣಗಿದ ಆಪ್ರಿಕಾಟ್ ಜ್ಯೂಸು ಅನ್ನು ತಯಾರಿಸಿ ಅದನ್ನು ಸನ್ ಬರ್ನ್ ಇಂದ ಉರಿಯುತ್ತಿರುವ ಜಗದಲ್ಲಿ ಹಚ್ಚುವುದರಿಂದ ಉರಿ ಕಡಿಮೆ ಆಗುತ್ತದೆ ಹಾಗು ಮೊಡವೆ ಅನ್ನು ಕೂಡ ನಿವಾರಣೆ ಮಾಡಲು ಸಹಾಯ ಮಾಡುತ್ತದೆ . ಇದು ಅನೇಕ ಚರ್ಮ ರೋಗ ನಿವಾರಣೆಗೆ ಸಹಾಯ ಮಾಡುತ್ತದೆ . ಆಪ್ರಿಕಾಟ್ ಸ್ಕ್ರಬ್ ಆಗಿ ಕೂಡ ಉಪಯೋಗ ಮಾಡುತ್ತಾರೆ.


5. ಗರ್ಭಿಣಿಯರಿಗೆ:
ಒಣಗಿದ ಆಪ್ರಿಕಾಟ್ ಅನ್ನು ಗರ್ಭಿಣಿಯರಿಗೆ ಒಂದು ಮೂಲಿಕೆ ಔಷದಿ ಆಗಿ ಉಪಯೋಗಿಸಲಾಗುತ್ತದೆ. ಈ ಹಣ್ಣು ಬಂಜೆತನ, ರಕ್ತಸ್ರಾವ ಮತ್ತು ಮೂಳೆಗಳ ಸೆಳೆತವನ್ನು ಕಡಿಮೆ ಮಾಡುತ್ತದೆ. ಈ ಒಣಗಿದ ಹಣ್ಣಿನ ಪೇಸ್ಟ್ ಯೋನಿಯ ಸೋಂಕು ಕೂಡ ಗುಣಪಡಿಸಬಹುದು. ಇದು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಖಂಡಿತ ಸೇವಿಸಲೇಬೇಕಾದ ಒಂದು ಹಣ್ಣು.

loading...