ಹಾವೇರಿ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಹಾವೇರಿ ಕರ್ನಾಟಕದ ಒಂದು ಜಿಲ್ಲೆ. ೧೯೯೭ ರಲ್ಲಿ ಧಾರವಾಡ ದಕ್ಷಿಣದ ಏಳು ತಾಲ್ಲೂಕುಗಳನ್ನು ಪತ್ಯೇಕಿಸಿ ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು.ಜಿಲ್ಲೆಯ ವಿಸ್ತೀರ್ಣ ೪,೮೨೩ ಚದರ ಕಿ,ಮೀ ಗಳಾಗಿದ್ದು, ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೧೫,೯೭,೬೬೮ ಆಗಿದೆ. ಇದರಲ್ಲಿ ಪುರುಷರು ೮,೧೯,೧೨೮ ಮತ್ತು ಮಹಿಳೆಯರು ೭,೭೮,೫೪೦ ಆಗಿರುತ್ತದೆ. ಚದರ ಕಿ.ಮೀಗೆ ೨೯೮ ಜನರ ಸಾಂದ್ರತೆ ಇದೆ. ಲಿಂಗಾನುಪಾತ ಪ್ರತೀ ೧೦೦೦ ಪುರುಷರಿಗೆ ೯೫೦ ಸ್ತ್ರೀಯರು ಇದ್ದಾರೆ.

ಹಾವೇರಿಯ ವಿಶೇಷತೆ:
ಕೃಷಿ ಪ್ರಧಾನವಾದ ಜಿಲ್ಲೆ. ಇದು ಕರ್ನಾಟಕ ನಕಾಶೆಯಲ್ಲಿ ಮದ್ಯಭಾಗದಲ್ಲಿದೆ. ವರದಾ ನದಿ ಹಾಗೂ ತುಂಗಭದ್ರ ನದಿಯು ಪ್ರಮುಖವಾಗಿ ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಹಾವೇರಿ ಐತಿಹಾಸಿಕವಾಗಿ ತನ್ನದೆಯಾದ ಕೊಡುಗೆಯನ್ನು ನೀಡಿದ ಜಿಲ್ಲೆ. ಬ್ಯಾಡಗಿಯ ಮೆಣಸಿನಕಾಯಿ ಲೋಕಪ್ರಸಿದ್ಧ.

ತಾಲ್ಲೂಕುಗಳು:
1. ಬ್ಯಾಡಗಿ
2. ಹಾನಗಲ್
3. ಹಾವೇರಿ ಇದು ಶಿಶುನಾಳ ಶರೀಪರು ಐಕ್ಯವಾಗಿರುವ ಜಿಲ್ಲೆ
4. ಹಿರೇಕೇರೂರು
5. ರಾಣೇಬೆನ್ನೂರು
6. ಸವಣೂರ
7. ಶಿಗ್ಗಾಂವ

ಪ್ರವಾಸಿ ತಾಣಗಳು:
1. ಸವಣೂರು: ಇದು ನವಾಬರ ಸಂಸ್ಥಾನ, ಸೂಫಿ ಶರಣರ ಭಾವೈಕ್ಯದ ನೆಲೆಬೀಡು, ಸತ್ಯಬೋಧ ಮಹಾಸ್ವಾಮಿಗಳ ಕರ್ಮಭೂಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನಾಯಕ ಕೃಷ್ಣ ಗೋಕಾಕರ ಜನ್ಮ ಸ್ಥಳ.
2. ವನ್ಯಜೀವಿ: ರಾಣಿಬೇನ್ನೂರು, ಕೃಷ್ಣಮೃಗ ಅಭಯಾರಣ್ಯ
3. ಚರಿತ್ರೆ ಮತ್ತು ಧರ್ಮ: ಪುರಸಿದ್ಧೇಶ್ವರ ದೇವಸ್ಥಾನ, ಹಾವೇರಿ (ಪುರಾತನ ಕಲ್ಲಿನ ಶಿಲ್ಪಕಲೆ) ಶ್ರೀ ಹುಕ್ಕೇರಿ ಮಠ, ಹಾವನೂರಿನ ದ್ಯಾಮವ್ವನ ದೇವಸ್ಥಾನ.(ಹಾವೇರಿ ತಾಲೂಕು).
4. ಅಬಲೂರು: ಸರ್ವಜ್ಞನ ಜನ್ಮಸ್ಥಳ
5. ಸಾತೇನಹಳ್ಳಿ ಶಾಂತೇಶ: (ಹನುಮಂತ ದೇವರು) ದೇವಸ್ಥಾನ, ಕದರಮಂಡಲಗಿಯ ಕಾಂತೇಶ(ಹನುಮಂತ ದೇವರು) ದೇವಸ್ಥಾನ. ದೇವರಗುಡ್ಡ (ಮಾಲತೇಶ ಸ್ವಾಮಿ ದೇವಸ್ಥಾನ)
6. ಕಾಗಿನೆಲೆ : ಕನಕದಾಸರ ಜನ್ಮಸ್ಥಳ
7. ಗಂಗೀಭಾವಿ: (ಜಾನ್ಹವಿ ಋಷಿಗಳು ಸ್ಥಾಪಿಸಿದ ರಾಮಲಿಂಗೇಶ್ವರ ದೇವಸ್ಥಾನ ಶಿಗ್ಗಾಂವದ ಹತ್ತಿರ)
8. ಭೈರನ ಪಾದ: (ಭೈರವೇಶ್ವರ ದೇವಸ್ಥಾನ)
9. ಶ್ರೀ ಕ್ಷೇತ್ರ ಗುಡ್ಡದ ಮಲ್ಲಾಪೂರ ಶ್ರೀ ಮುಕಪ್ಪ ಮಹಾಸ್ವಾಮಿಗಳ ಹಾಗೂ ಕತೃ,ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿದ್ಯ.
10. ಶ್ರೀ ಗುಬ್ಬಿನಂಜುಂಡೇಶ್ವರ ಮಠ {ಹೊಂಕಣ} [ಶ್ರೀ ಪರಮ ಪೂಜ್ಯ ಪಾವನ ಗುಬ್ಬಿನಂಜುಂಡೇಶ್ವರ ಮಹಾಸ್ವಾಮಿಗಳ ಗದ್ದುಗೆ]

loading...