ಹಾಸನ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಹಾಸನವು ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಕಾರ್ಯಸ್ಥಾನ. ದಕ್ಷಿಣ ಭಾರತದ ವಿಸ್ತಾರದ ಆಳ್ವಿಕೆಯನ್ನೊಳಗೊಂಡ ಮತ್ತು ಬಲಿಷ್ಠ ಸಾಮ್ರಾಜ್ಯಗಳಲ್ಲಿ ಒಂದಾದ ಹೊಯ್ಸಳರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿ ಹಾಸನ ಜಿಲ್ಲೆಯನ್ನು ತಮ್ಮ ಆಡಳಿತದ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದರು. ಹಾಸನ ಜಿಲ್ಲೆಯ ಬೇಲೂರು ಅವರ ರಾಜಧಾನಿಯಾಗಿತ್ತು. ಮುಂದೆ ಅವರು ೧೦೦೦ - ೧೩೩೪ರ ಕಾಲದಲ್ಲಿ ತಮ್ಮ ರಾಜಧಾನಿಯನ್ನು ಹಳೇಬೀಡಿಗೆ ವರ್ಗಾಯಿಸಿಕೊಂಡರು. ಇಂದು ಹಾಸನ ಜಿಲ್ಲೆಯು ತನ್ನ ಹೊಯ್ಸಳ ವಾಸ್ತುಶಿಲ್ಪಕ್ಕಾಗಿ ಪ್ರಪಂಚದಾದ್ಯಂತ ಪ್ರಖ್ಯಾತವಾಗಿದೆ. ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಶಿಲ್ಪಕಲೆಗಳ ಆಗರಗಳು ಗುರುತಿಸಲ್ಪಟ್ಟಿವೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2015ರ ಫೆ. 31, 1, 2 ಮತ್ತು 3ರಂದು ನಡೆಯುತ್ತಿದೆ.

ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆಯನ್ನು ನಿಯಂತ್ರಿಸುವ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ನ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಇರುವುದು ಕೂಡ ಇದೇ ಜಿಲ್ಲಾ ಕೇಂದ್ರ ಹಾಸನದಲ್ಲಿ.

ಇತಿಹಾಸ:
ಹಾಸನ ಜಿಲ್ಲೆಯ ಇತಿಹಾಸವು ಅವಶ್ಯವಾಗಿ ಕರ್ನಾಟಕವನ್ನು ಆಳಿದ, ತಲಕಾಡಿನ ಪಶ್ಚಿಮ ಗಂಗಾ ಮನೆತನ (೩೫೦ – ೯೯೯ ಸಿ.ಇ.) ಹಾಗೂ ಹೊಯ್ಸಳ ಸಾಮ್ರಾಜ್ಯ (೧೦೦೦ – ೧೩೩೪ ಸಿ.ಇ.) ದ ಇತಿಹಾಸಗಳನ್ನೂ ಒಳಗೊಂಡಿದುದಾಗಿರುತ್ತದೆ. ಹದಿನೈದನೇ ಹಾಗೂ ಹದಿನಾರನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ವಿಜಯನಗರದ ಅರಸರು, ಬೇಲೂರಿನ ಚನ್ನಕೇಶವ ದೇವರನ್ನು ತಮ್ಮ ಕುಲದ ಆರಾಧ್ಯದೇವರನ್ನಾಗಿ ಸ್ವೀಕರಿಸಿ ಪೂಜಿಸುತ್ತಿದ್ದರು. ವಿಜಯನಗರದ ಅವನತಿಯ ನಂತರ, ಹಾಸನ ಜಿಲ್ಲೆ, ಬಿಜಾಪುರದ ಆದಿಲಶಾಹಿ ಹಾಗೂ ಮೊಘಲ್ ಸಾಮ್ರಾಜ್ಯದ ಆಳ್ವಿಕೆಗೂ ಒಳಪಟ್ಟಿತ್ತು. ಮುಂದೆ ಹದಿನೇಳನೇ ಹಾಗೂ ಹದಿನೆಂಟನೇ ಶತಮಾನದಲ್ಲಿ, ಶಿವಮೊಗ್ಗದ ಕೆಳದಿ ನಾಯಕ ಮನೆತನ ಹಾಗೂ ಮೈಸೂರು ದೊರೆಗಳ ನಡುವಣ ಕಲಹಕ್ಕೆ ಈ ಪ್ರದೇಶವು ಕಾರಣೀಭೂತವಾಗಿತ್ತು. ಅಂತ್ಯದಲ್ಲಿ ಅದು ಸ್ವತಂತ್ರ ಮೈಸೂರು ಪ್ರಾಂತ್ಯದೊಂದಿಗೆ ವಿಲೀನಗೊಂಡಿತು.

ಪ್ರಾಚೀನ ಇತಿಹಾಸ:
ಕ್ರಿಸ್ತ ಶಕ ೩೦೦ ರಲ್ಲಿ ಹಾಸನವು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು.. ಜೈನ ಮುನಿ ಭದ್ರಬಾಹುವು ಕ್ರಿಸ್ತ ಶಕ ೩ನೇ ಶತಮಾನದಲ್ಲಿ ಉತ್ತರ ಭಾರತದಿಂದ ಆಗಮಿಸಿದನು. ಕೆಲವು ಇತಿಹಾಸಕಾರರು ಚಕ್ರವರ್ತಿ ಅಶೋಕನ ಅಜ್ಜ ಚಂದ್ರಗುಪ್ತ ಮೌರ್ಯನು ಯತಿ ಭದ್ರಬಾಹು ಮತ್ತು ಆವರ ಶಿಷ್ಯರೊಂದಿಗೆ ಶ್ರವಣಬೆಳಗೊಳಕ್ಕೆ ಬಂದು ಗತಿಸಿದರು ಎಂಬುದಾಗಿ ಹೇಳುತ್ತಾರೆ. ಕೆಲ ಇತಿಹಾಸಕಾರರು ರಾಜ ಅಶೋಕನ ಮೊಮ್ಮಗನು ಆಗಮಿಸಿದ್ದನು ಎಂದೂ ಹೇಳುತ್ತಾರೆ. ಚಂದ್ರಗುಪ್ತ ಬಸದಿ ಎಂಬ ಹೆಸರಿನ ಒಂದು ಬಸದಿ ಅಥವಾ ಸ್ಮಾರಕವು ಇಂದಿಗೂ ಅಸ್ತಿತ್ವದಲ್ಲಿದೆ. ಚಂದ್ರಗುಪ್ತ ಮೌರ್ಯನ ವಂಶಾವಳಿಯ ಬಗ್ಗೆ ಸತ್ಯ ವಿಷಯಗಳು ಏನೇ ಇದ್ದರೂ ಇದು ಶ್ರವಣಬೆಳಗೊಳವು ಹದಿನೇಳು ಶತಮಾನಗಳಿಂದ ಜೈನರ ಶ್ರದ್ಧಾ ಕೇಂದ್ರವಾಗಿದೆ ಎಂಬುದನ್ನು ತಿಳಿಸುತ್ತದೆ.

ಮಧ್ಯಯುಗ:
ನಂತರ ಹಾಸನವು ತಲಕಾಡು ಗಂಗ ರಾಜವಂಶದ ಆಳ್ವಿಕೆಗೆ ಒಳಪಟ್ಟಿತು. ಆರಂಭದಲ್ಲಿ ಗಂಗರು ೩೫೦-೫೫೦ ನೆ ಶತಮಾನದವರೆಗೆ ಆಳಿದರು. ನಂತರ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಸಾಮಂತರು ಈ ಪ್ರದೇಶದ ಆಳ್ವಿಕೆ ಮುಂದುವರೆಸಿದರು. ೧೦ ನೇ ಶತಮಾನದ ಕೊನೆಯ ಭಾಗದಲ್ಲಿ, ಶ್ರವಣಬೆಳಗೊಳದಲ್ಲಿ ಅನೇಕ ಜೈನ ಸ್ಮಾರಕಗಳನ್ನು ನಿರ್ಮಿಸಲಾಯಿತು. ಗೋಮಟೇಶ್ವರ ವಿಗ್ರಹವು ಐವತ್ತೇಳು ಅಡಿ ಎತ್ತರದ ಏಕಶಿಲೆಯ ವಿಗ್ರಹವು ಸೇರಿದಂತೆ ಹಲವು ಸ್ಮಾರಕಗಳನ್ನು ಗಂಗರ ದಂಡ ನಾಯಕ ಚಾಮುಂಡರಾಯನು ನಿರ್ಮಿಸಿದನು.

ಗಂಗರ ಆಳ್ವಿಕೆಯ ಸಮಯದಲ್ಲಿ, ಶ್ರವಣಬೆಳಗೊಳ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಇಂದು ಇದು ದೊಡ್ಡ ಪುರಾತತ್ವ ಪ್ರಾಮುಖ್ಯತೆಯ ಒಂದು ಸ್ಥಳವಾಗಿದೆ. ಪಟ್ಟಣದ ಹೆಸರು ಶ್ರವಣ ಅಥವಾ ಶ್ರಮಣ ಎಂಬ ಪದದಿಂದ ಪಡೆಯಲಾಗಿದೆ. ಶ್ರವಣ ಅಥವಾ ಶ್ರಮಣ ಎಂದರೆ ಜೈನ ಸಂನ್ಯಾಸಿ ಎಂದರ್ಥ ಮತ್ತು ಬೆಳಗೊಳ ಅಥವಾ  ಬಿಳಿಯ ಕೊಳ ಎಂದರೆ ಕನ್ನಡದಲ್ಲಿ ಶುಭ್ರ ಬಿಳಿಯ ಬಣ್ಣದ ಕೊಳ ಎಂದರ್ಥ. ಶ್ರವಣಬೆಳಗೊಳದ ಸುತ್ತುಮುತ್ತಲೂ ಸುಮಾರು ೮೦೦ ಶಾಸನಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ ೮೦ ಶಾಸನಗಳು ಹೊಯ್ಸಳರ ಆಳ್ವಿಕೆಯ ಕಾಲ ೬೦೦ - ೧೮೩೦ ಸಿಇ ಗೆ ಸಂಬಂಧ ಪಟ್ಟಿವೆ. ಈ ಶಾಸನಗಳು ಇತಿಹಾಸವನ್ನು ತಿಳಿಯಲು ಬಹಳ ಸಹಾಯಕವಾಗಿದೆ. ಇದರಿಂದ ಬರಿಯ ಹಾಸನ ಜಿಲ್ಲೆಯ ಇತಿಹಾಸ ಮಾತ್ರವಲ್ಲದೇ ನಮ್ಮ ಕರ್ನಾಟಕವನ್ನು ಆಳಿದ ಎಲ್ಲಾ ಸಾಮ್ರಾಜ್ಯಗಳ ಇತಿಹಾಸವನ್ನೂ ಅರ್ಥಮಾಡಿಕೊಳ್ಳುವಲ್ಲಿ ಸಹಾಯಕವಾಗಿದೆ. ಶಿಲಾಶಾಸನಗಳು ಕನ್ನಡ, ಸಂಸ್ಕೃತ, ತಮಿಳು, ಮರಾಠಿ, ಮಾರ್ವಾಡಿ ಮತ್ತು ಮಹಾಜನಿ ಭಾಷೆಗಳಲ್ಲಿವೆ ಮತ್ತು ಕರ್ನಾಟಕವನ್ನು ಆಳಿದ ಎಲ್ಲ ಪ್ರಮುಖ ಸಾಮ್ರಾಜ್ಯಗಳ ವಿಶೇಷತೆಯನ್ನು ತಿಳಿಸುತ್ತಾ ಜೈನ ಧರ್ಮದ ಆಶ್ರಯವು ಮಧ್ಯಯುಗದ ಇತಿಹಾಸದಲ್ಲಿ ಸಂಪೂರ್ಣ ಸಕ್ರಿಯವಾಗಿತ್ತು ಎಂಬ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ.

೧೦೦೦ ಸಿಇ. ಸುತ್ತ, ಚೋಳರ ಕೈಯಲ್ಲಿ ತಮ್ಮ ಸಂಪೂರ್ಣ ಸೋಲು ಅನುಭವಿಸಿದ ಗಂಗಾ ವಂಶಾವಳಿಯ ಗಂಗಾವತಿ (ಕರ್ನಾಟಕ ದಕ್ಷಿಣ ಜಿಲ್ಲೆಗಳು) ಶಾಶ್ವತವಾಗಿ ಕಣ್ಮರೆಯಾದವು. ಅಲ್ಲಿಂದ ಮುಂದೆ ೧೩೩೪ ರವರೆಗೆ ಸಿಇ, ಹೊಯ್ಸಳರು ಈ ಪ್ರದೇಶದಲ್ಲಿ ಆಳ್ವಿಕೆಯನ್ನು ಸ್ಥಾಪಿಸಿದರು ಮತ್ತು ಅವರ ಅವಸಾನದ ನಂತರ, ವಿಜಯನಗರ ಸಾಮ್ರಾಜ್ಯವು ನಿಯಂತ್ರಣವನ್ನು ತೆಗೆದುಕೊಂಡಿತು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ, ಈ ಪ್ರದೇಶವು ಮೈಸೂರು ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತು.

ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಮಲ್ನಾಡು ಪ್ರದೇಶದ ಜಿಕ್ಕಮಗಳೂರು ಜಿಲ್ಲೆಯ ಅಂಗಡಿ ಎಂಬ ಸ್ಥಳದ ಮೂಲದ ಒಂದು ಗುಡ್ಡಗಾಡು ಜನಾಂಗವು ಪ್ರಬಲ ಸಾಮ್ರಾಜ್ಯವನ್ನು ನಿರ್ಮಿಸಿತ್ತು. ಈ ಗುಡ್ಡಗಾಡು ಜನರ ಆಳ್ವಿಕೆಯ ಕಾಲದಲ್ಲಿಯೇ ಹಾಸನ ತನ್ನ ಖ್ಯಾತಿಯ ಉತ್ತುಂಗ ತಲುಪಿತ್ತು. ಈಗಲೂ ಸುಮಾರು ಐವತ್ತು ಅಥವಾ ಹೆಚ್ಚು ಹೊಯ್ಸಳ ದೇವಾಲಯಗಳು ಉದ್ದಗ್ಗಲಕ್ಕೂ ಹರಡಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯಗಳಲ್ಲಿರುವ ಅನೇಕ ಶಾಸನಗಳು ಕಳೆದುಹೋದ ಕಾಲದ ಒಂದು ವೈಭವದ ವಿವರಣೆಯನ್ನು ಸಂಪುಟಗಳಷ್ಟು ತಿಳಿಸುತ್ತವೆ. ಹೊಯ್ಸಳರ ಆಡಳಿತದ ವಿವರಣೆ, ಭೂ ಸುಧಾರಣೆ, ತೆರಿಗೆ, ಸಂಸ್ಕೃತಿ ಎಂದು ಅನೇಕ ವಿಷಯಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತವೆ.

ಕುರುಬ / ಯಾದವ ಜನಾಂಗಕ್ಕೆ ಸೇರಿದವರೆಂದು ಗುರುತಿಸಲ್ಪಡುವ ಹೊಯ್ಸಳರು, ತಮ್ಮ ಪೂರ್ವಜರಾದ ಗಂಗರ ಜೊತೆ ಸೇರಿದರು. ಇವರು ಈ ಮೊದಲು ಸುಮಾರು ೧೦೦೦ - ೧೧೫೦ ಸಿಇ ಕಾಲದಲ್ಲಿ ಕಲ್ಯಾಣಿಯ ಚಾಲುಕ್ಯರ ಅಧೀನರಾಗಿದ್ದರು. ಕಲ್ಯಾಣಿಯ ಚಾಲುಕ್ಯರ ಅವನತಿಯ ನಂತರ ಹಾಗೂ ಹೊಯ್ಸಳರಿಗೆ ಅಧೀನರಾಗಿದ್ದ ಸಾಮಂತರ ಬಿಡುಗಡೆಗಾಗಿ ವಿಷ್ಣುವರ್ಧನನ ನಿರಂತರ ಹೋರಾಟದ ಫಲವಾಗಿ ಹೊಯ್ಸಳರು ಸ್ವತಂತ್ರ ಆಳ್ವಿಕೆಯನ್ನು ೧೨ನೆಯ ಶತಮಾನದಲ್ಲಿ ಪಡೆದರು. ಬಿಟ್ಟಿದೇವನೆಂದು ಕರೆಯಲ್ಪಡುತ್ತಿದ್ದ ವಿಷ್ಣುವರ್ಧನ ಮೂಲತಃ ಜೈನ ಧರ್ಮ ಪಾಲಿಸುತ್ತಿದ್ದವನು. ಆದರೆ ಮುಂದೆ ಹಿಂದೂ ಧರ್ಮದ ಒಂದು ಪಂಥವಾದ ವೈಷ್ಣವ ಸಿದ್ಧಾಂತವನ್ನು ಸ್ವೀಕರಿಸಿದ್ದರಿಂದ ತನ್ನ ಹೆಸರನ್ನು ವಿಷ್ಣುವರ್ಧನ ಎಂದ ಬದಲಾಯಿಸಿಕೊಂಡನು.

ಅನೇಕ ಇತಿಹಾಸಕಾರರು ವಿಷ್ಣುವರ್ಧನ ಹೊಯ್ಸಳ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಭಾವಿಸುತ್ತಾರೆ. ಹೊಯ್ಸಳರು ತಮ್ಮ ಪರಮಾಧಿಕಾರದ ಹೊರಹೊಮ್ಮುವಿಕೆ ಎರಡು ನಿರ್ಣಾಯಕ ವಿಜಯಗಳ ಮೂಲಕ ಸಾಧಿಸಿದರು. ಇದರಲ್ಲಿ ಒಂದು ೧೧೧೪ CE ರಲ್ಲಿ ತಲಕಾಡಿನಲ್ಲಿ ಚೋಳರ ವಿರುದ್ಧ ಗಳಿಸಿದ ಜಯ. ಈ ವಿಜಯದ ನಂತರ ವಿಷ್ಣುವರ್ಧನ ವೀರ ಗಂಗಾ ಮತ್ತು ತಲಕಾಡು ಗೊಂಡಾ ಎಂಬ ಬಿರುದುಗಳನ್ನು ಪಡೆದುಕೊಂಡ. ವಿಜಯದ ಸ್ಮರಣಾರ್ಥವಾಗಿ ನಾಣ್ಯಗಳನ್ನು ಬಿಡುಗಡೆ ಮಾಡಿದ, ತಲಕಾಡಿನಲ್ಲಿ ಕೀರ್ತಿ ನಾರಾಯಣ ದೇವಾಲಯ ಮತ್ತು ಬೇಲೂರಿನಲ್ಲಿ ಪ್ರಸಿದ್ಧ ಚನ್ನಕೇಶವ ದೇವಾಲಯಗಳನ್ನು ನಿರ್ಮಿಸಿದ ಮತ್ತು ಗಂಗಾವತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡನು. ಎರಡನೆಯ ವಿಜಯ ೧೧೧೮ ಸಿಇ ಕನ್ನೇಗಾಲದಲ್ಲಿ ಬಲಿಷ್ಠರಾದ ಚಾಲುಕ್ಯ ರಾಜ ಆರನೇ ವಿಕ್ರಮಾದಿತ್ಯನ ವಿರುದ್ಧ ಪಡೆದ ರೋಚಕ ಗೆಲುವು. ಆದರೆ ವಿಷ್ಣುವರ್ಧನ ಇಂದಿನ ಹಾನಗಲ್ ಕರ್ನಾಟಕ, ಉಚ್ಛಂಗಿ, ಬನವಾಸಿ ಮತ್ತು ಬರ್ಕಾಪುರ ಕೇಂದ್ರ ಪ್ರದೇಶಗಳ ಮೇಲೆ ನಿಯಂತ್ರಣ ಪಡೆಯಲು ಸಾಧ್ಯವಾದದ್ದು ಮಾತ್ರ ಆರನೇ ವಿಕ್ರಮಾದಿತ್ಯನ ನಿಧನದ ನಂತರವೇ.

ಹೊಯ್ಸಳರು ಮೊಮ್ಮಗ, ಎರಡನೇ ವೀರ ಬಲ್ಲಾಳನ ಆಳ್ವಿಕೆಯ ಕಾಲ ೧೧೭೩-೧೨೨೦ CE ದಲ್ಲಿ ಚೋಳರಾಜ್ಯ ಪ್ರತಿಷ್ಠಾಚಾರ್ಯ ಅಥವಾ ಚೋಳ ಸಾಮ್ರಾಜ್ಯದ ರಕ್ಷಕ ಎಂಬ ಶೀರ್ಷಿಕೆಯನ್ನು ಗಳಿಸಿದರು ಮತ್ತು ದಕ್ಷಿಣ ಭಾರತದಲ್ಲಿ ಸಮರ್ಥರಾದ ಒಂದು ನಿಜವಾದ ಪಡೆ ಎನಿಸಿಕೊಂಡರು. ಇದೇ ಕಾಲಘಟ್ಟದಲ್ಲಿ, ಹಾಸನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಅಧಿಕೇಂದ್ರ ಆಯಿತು.

ಹೆಸರಿನ ಬಗ್ಗೆ
ಹಾಸನ ಹೆಸರಿನ ಹಿಂದೆ ಎರಡು ಬೇರೆ-ಬೇರೆ ವಾಡಿಕೆಗಳು ಇವೆ:

* ಮೊದಲಿನ ಹೆಸರು ಸಿಂಹಾಸನಪುರಿ ಇಂದ ಬಂದಿದೆ ಎಂದು, 
* ಎರಡನೆಯದು ಹಾಸನ ನಗರದಲ್ಲಿ ನೆಲೆಸಿರುವ ಹಾಸನಾಂಬೆ ದೇವಿಯ ಹೆಸರಿನಿಂದ ಬಂದಿದೆ ಎಂದು

ಹೊಯ್ಸಳ ವಾಸ್ತುಶಿಲ್ಪ:
ಹೊಯ್ಸಳರ ಅಮರತ್ವ ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ ಮತ್ತು ವಾಸ್ತುಶಿಲ್ಪದ ತಮ್ಮದೇ ಆದ ಅನನ್ಯ ಶೈಲಿಯನ್ನು ತಮ್ಮ ಕೊಡುಗೆ ಕಾಣಿಸಿಕೊಳ್ಳುವ ಹೇಳಿಕೊಳ್ಳುತ್ತಾರೆ. ಉದಾಹರಣೆಗೆ ಹೆನ್ರಿ Cousens ಮತ್ತು ಜೇಮ್ಸ್ Furgusson ಎಂದು ಇತಿಹಾಸಕಾರರು ವಾಸ್ತುಶಿಲ್ಪದ ಹೊಯ್ಸಳ ಶೈಲಿಯ ಮೂಲಭೂತವಾಗಿ ಕಲ್ಯಾಣಿ ಚಾಲುಕ್ಯರು ಅಧಿಕವಾಗುವುದು ಬಾದಾಮಿ ಚಾಲುಕ್ಯರು ಮತ್ತು ಮತ್ತಷ್ಟು ಆರಂಭಿಸಿತು vesara ಶೈಲಿಯ ವಿಸ್ತರಣೆ ಮತ್ತು ಪರಾಕಾಷ್ಠೆ ಗಮನಿಸಿದ್ದಾರೆ. ವಾಸ್ತವವಾಗಿ, ಕೆತ್ತಿದ ಬಾಗಿಲು, ಲೇಥ್ ಕಂಬಗಳು ತಿರುಗಿ ಹೊಯ್ಸಳರ ಆಗಾಗ್ಗೆ ಬಳಸಲಾಗುತ್ತದೆ ಚುಚ್ಚಿದ ಕಿಟಕಿ ಪರದೆಗಳು ಸಾಮಾನ್ಯವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದ ಹಿಂದಿನ ಕಲ್ಯಾಣಿ ಚಾಲುಕ್ಯರ ದೇವಾಲಯಗಳಲ್ಲಿ ಕಾಣಬಹುದು. ಅನೇಕ ಹೊಯ್ಸಳ ದೇವಾಲಯಗಳು ನಿರ್ಮಿಸಲಾಯಿತು ಮೇಲೆ ಸ್ಟಾರ್ ಆಕಾರದ ವೇದಿಕೆ, Jagati, ಗೋಡೆಗಳ ZIG-ಅಂಕುಡೊಂಕು ಅಕ್ಷರ ಮತ್ತು ಬೂದು ಸೋಪ್ ಸ್ಟೋನ್ (chloritic ಪದರ) ಮೇಲೆ ಶಿಲ್ಪ ಸಾಂದ್ರತೆಯು ಆದರೆ ಹೊಯ್ಸಳ ವಾಸ್ತುಶಿಲ್ಪದ ಒಂದು ಅನನ್ಯ ಲಕ್ಷಣಗಳನ್ನು ಹೊಂದಿದೆ. ಯಳೇಶಪುರದಲ್ಲಿ ೫ ಶಾಸನಗಳು ಇದೆ.

ಕನ್ನಡ ಕೊಡುಗೆ:
ಹಾಸನ ಜಿಲ್ಲೆಯುಹಲ್ಮಿಡಿ ಕನ್ನಡ ಇತಿಹಾಸದಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿದೆ ಬೇಲೂರು ತಾಲ್ಲೂಕಿನ ಒಂದು ಸಣ್ಣ ಗ್ರಾಮ ೪೫೦ CE ರ ಕನ್ನಡ ಲಿಪಿಯಲ್ಲಿ ಹಳೆಯ ಕನ್ನಡ ಭಾಷೆ ಶಾಸನ ನೆಲೆಯಾಗಿದೆ. ಇದರ ದಿನಾಂಕ ಶಾಸನ ಕೆಲವೊಮ್ಮೆ ೪೨೫ ಸಿಇ ಇರಬಹುದೆಂದು ಚರ್ಚೆಯಲ್ಲಿದೆ. ರಾಜ ಕಾಕುತ್ಸ ವರ್ಮನು, ಕದಂಬ ರಾಜಮನೆತನದ ಸಂಸ್ಥಾಪಕ ರಾಜ ಮಯಾರಶರ್ಮನ ಮೊಮ್ಮಗ ಎನ್ನಲಾಗಿದೆ.

ತಾಲ್ಲೂಕುಗಳು:
ಆಡಳಿತಕ್ಕೋಸ್ಕರ,ಹಾಸನ ಜಿಲ್ಲೆಯನ್ನು ಎಂಟು ತಾಲೂಕುಗಳಾಗಿ ವಿಂಗಡಿಸಲಾಗಿದೆ.
  • ಹಾಸನ
  • ಅರಸೀಕೆರೆ
  • ಚನ್ನರಾಯಪಟ್ಟಣ
  • ಹೊಳೇನರಸೀಪುರ
  • ಅರಕಲಗೂಡು
  • ಬೇಲೂರು
  • ಸಕಲೇಶಪುರ
  • ಆಲೂರು
ವಾಯುಸಾರಿಗೆ:
ಹಾಸನದಲ್ಲಿನ ವಿಮಾನ ನಿಲ್ದಾಣವು ೨೦೧೫ ರಿಂದ ಕಾರ್ಯಾಚರಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ವ್ಯವಸ್ಥೆಯಿಂದ ವಾರ್ಷಿಕವಾಗಿ ೩ ದಶಲಕ್ಷ ಪ್ರಯಾಣಿಕರ ಪ್ರಯಾಣ ಸಾಮರ್ಥ್ಯ ಮತ್ತು ೧೦೦,೦೦೦ ಟನ್ ಸರಕು ಸಾಗಣೆ ಸಾಮರ್ಥ್ಯ ಹೊಂದುವ ನಿರೀಕ್ಷೆಯಿದೆ. ಈ ನಿಲ್ದಾಣವು ವಿಮಾನ ನಿರ್ವಹಣೆ ಮತ್ತು ಪರಿವರ್ತನೆ (AMM) ಹಬ್ ಹೊಂದಲಿದೆ.

ರಸ್ತೆ ಸಾರಿಗೆ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಸನವನ್ನು ರಾಜ್ಯದ ಇತರ ಭಾಗಳ ಜೊತೆಗೆ ದೇಶದ ಇತರೆ ಭಾಗಗಳಿಗೂ ಸಂಪರ್ಕಕಲ್ಪಿಸುತ್ತದೆ. ಹಾಸನವು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ನಂ ೪೮ ದೇಶದ ಇತರೆ ಸ್ಥಳಗಳ ಜೊತೆ ಸಂಪರ್ಕ ಹೊಂದಿದೆ. ಹಾಸನದ ಕೆ ಎಸ ಆರ್ ಟಿ ಸಿ ಬಸ್ಸು ನಿಲ್ದಾಣವು ದೇಶದ ಎರಡನೆಯ ಅತಿ ದೊಡ್ಡ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ.

ರೈಲು ಸಾರಿಗೆ:
ಹಾಸನದ ರೈಲ್ವೆ ವ್ಯವಸ್ಥೆಯು ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ವಲಯದ ಅಡಿಯಲ್ಲಿ ಬರುತ್ತದೆ. ಹಾಸನ ಸಿಟಿ ರೈಲು ನಿಲ್ದಾಣವು [[ಭಾರತೀಯ ರೈಲ್ವೆ|ಭಾರತೀಯ ರೈಲ್ವೆಯ]] ಮೂಲಕ ದೇಶದ ಉಳಿದ ಭಾಗಗಳ ಜೊತೆ ಸಂಪರ್ಕ ಹೊಂದಿದೆ. ಹಾಸನವು ರೇಲ್ವೆಯ ಮೂಲಕ ಕರ್ನಾಟಕದ ಬಹುತೇಕ ಸ್ಥಳಗಳು ಹಾಗು ಮೂಲಕ ದೇಶದ ಉಳಿದ ಭಾಗಗಳ ಜೊತೆ ಸಂಪರ್ಕ ಹೊಂದಿದೆ. ಹಾಸನವು ರೇಲ್ವೆಯ ಮೂಲಕ ಕರ್ನಾಟಕದ ಬಹುತೇಕ ಸ್ಥಳಗಳು ಹಾಗು ಮುಂಬಯಿ ನಂಥ ಇತರ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಹೊಂದಿದೆ.

loading...