ಹಲಾಸನ ಮಾಡುವ ವಿಧಾನ

Published on:  2016-09-18
Posted by:  Admin

ಮಾಡುವ ವಿಧಾನ : 
೧. ಮೊದಲು ನೆಲದ ಮೇಲೆ ಅಂಗಾತ ಮಲಗಿ , ಉಸಿರನ್ನು ಒಳಗೆ ಎಳೆಯುತ್ತ ನಿಧಾನವಾಗಿ ಕಾಲುಗಳನ್ನು ಮೇಲಕ್ಕೆತ್ತಿ ೯೦ ಡಿಗ್ರಿಯವರೆಗೆ ಎತ್ತಿದ ಮೇಲೆ ಕಾಲುಗಳನ್ನು ತಲೆಯ ಹಿಂದಕ್ಕೆ ಮತ್ತೆ ಬೆನ್ನು ಸಹ ಮೇಲಕ್ಕೆ ಎತ್ತಿ ಉಸಿರುಬಿಡುತ್ತ ಹೋಗಿ . 
೨. ಈವಾಗ ಪಾದಗಳನ್ನು ನೆಲದ ಮೇಲೆ ಇರಿಸಿ , ಉಸಿರಾಟ ಸಾಮಾನ್ಯವಾಗಿರಲಿ ಹಾಗೆ ನಿಮ್ಮ ಕೈಗಳನ್ನು ಬೆನ್ನಿನ ಹಿಂದೆ ಹಿಡಿದುಕೊಳ್ಳಿ .ಈವಾಗ ಪೂರ್ತಿ ಕೈಗಳನ್ನು ನೆಲದಮೇಲೆ ಇರಿಸಿ , ಈ ಸ್ಥಿತಿಯಲ್ಲಿ ೩೦ ಸೆಕೆಂಡ್ ಗಾಲ ಕಾಲ ಇರಿ. 
೩. ಮೊದಲಿನ ಸ್ಥಿತಿಗೆ ಬರಲು , ನೀವು ಮೊದಲು ಯಾವ ಕ್ರಮದಲ್ಲಿ ಮೇಲೆ ಬಂದಿದ್ದಿರೋ ಅದೇ ಕ್ರಮದಿಂದ ಅಂಗೈಗಳನ್ನು ನೆಲದ ಮೇಲಿಡುತ್ತ , ಮೊಣಕಾಲುಗಳನ್ನು ನೆರವಾಗಿಸುತ್ತಾ ನೆಲದ ಮೇಲೆ ಒರಗಿಸಿ . 


ಈ ಆಸನದಿಂದ ಆಗುವ ಲಾಭಗಳು :
೧. ಬೆನ್ನುಮೂಳೆ ಆರೋಗ್ಯಕರವೂ , ಸ್ಥಿತಿ ಸ್ಥಾಪಕವು ಆಗುವಂತೆ ಮಾಡುತ್ತದೆ . 
೨. ಥೈರಾಯ್ಡ್  ಗ್ರಂಥಿಯನ್ನು ಚುರುಕುಗೊಳಿಸಿ , ಸ್ಥೂಲತ್ವ , ಬಂಜೆತನ , ದೌರ್ಬಲ್ಯಗಳನ್ನು ನಿವಾರಿಸುತ್ತದೆ . 
೩. ಅಜೀರ್ಣ , ಹಸಿವಾಗದಿರುವಿಕೆ , ಗ್ಯಾಸ್ , ಮಲಬದ್ಧತೆ , ಯಕೃತ್ - ಪ್ಲಿಹಾದಿಗಳ ವೃದ್ಧಿ ಹಾಗು ಹೃದಯ ರೋಗಗಳಲ್ಲಿ ಲಾಭಕಾರಿ . 
೪. ಜಠರವನ್ನು ಸಕ್ರಿಯಗೊಳಿಸಿ ಮಧುಮೇಹದಿಂದ ವಿಮುಕ್ತಿ ದೊರಕಿಸುತ್ತದೆ. 
೫. ಸ್ತ್ರೀ ರೋಗಗಳಲ್ಲಿ ಈ ಆಸನ ತುಂಬಾ ಉಪಯೋಗಿ . 


ಈ ಆಸನಕ್ಕಾಗಿ ಮಾಡುವ ಮುಂಚೆ ವಹಿಸಬೇಕಾದ ಎಚ್ಚರಿಕೆಗಳು :
೧. ಅಧಿಕವಾಗಿ ವೃದ್ಧಿಹೊಂದಿರುವ ಪ್ಲೀಹ (spleen ) ಹಾಗು ಯಕೃತಿನ ಸ್ಥಿತಿಯಲ್ಲಿ ಇರುವರು ಈ ಆಸನ ಮಾಡಬಾರದು 
೨. ಉಚ್ಚ ರಕ್ತದ ಒತ್ತಡ , ಸರ್ವೀಕಲ್ ಮೇರುದಂಡದ ರೋಗಿಗಳು ಇದನ್ನು ಮಾಡಬಾರದು . 
೩. ಸ್ಲಿಪ್ ಡಿಸ್ಕ್ ಹಾಗು ಮೇರುದಂಡದ ಕ್ಷಯ ಮೊದಲಾದ ವಿಕಾರಗಳಿಗಿರುವಾಗ ಈ ಆಸನ ಮಾಡಬಾರದು . 

loading...