ಬರ್ಬರಿಕ: ಈತನು ಒಂದೇ ನಿಮಿಷದಲ್ಲಿ ಮಹಾಭಾರತ ಯುದ್ಧವನ್ನು ಮುಗಿಸಬಲ್ಲವನಾಗಿದ್ದನು

Published on:  2016-11-08
Posted by:  Admin

ಮಹಾಭಾರತವು ಪ್ರಪಂಚದಲ್ಲೇ ಒಂದು ದೊಡ್ಡ ಅಥವಾ ವಿಸ್ತಾರವಾದ ಮಹಾ ಕಾವ್ಯ(ಪುರಾಣ) ವಾಗಿದೆ. ಮಹಾಭಾರತವು ಬಹಳಷ್ಟು ಪಾತ್ರಗಳನ್ನು ಒಳಗೊಂಡಿದೆ. ಒಂದಕ್ಕಿಂತ ಒಂದು ಪ್ರಸಿದ್ದವಾದ ಹಾಗು ಕುತೂಹಲಕರವಾದ ಪಾತ್ರಗಳು ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸುತ್ತವೆ. ನಮಗೆ ಗೊತಿಲ್ಲದ ಪಾತ್ರಗಳು ಇಲ್ಲಿ ಪ್ರಮುಖ ಮಹತ್ವವನ್ನು ಪಡೆದಿವೆ. ಅಂತಹ ಪಾತ್ರಗಳಲ್ಲಿ ಪ್ರಮುಖವಾದುದು ಇಡೀ ಮಹಾಭಾರತ ಯುದ್ಧವನ್ನು ಒಂದೇ ನಿಮಿಷದಲ್ಲಿ ಮುಗಿಸಬಲ್ಲ ಕ್ಷತ್ರಿಯ ಇದ್ದನೆಂಬುದು. ಆ ಕ್ಷತ್ರಿಯನೇ ಬರ್ಬರಿಕ ಅಥವಾ ಕಾಟು ಶ್ಯಾಮ್ ಜಿ ಎಂತಲೂ ಕರೆಯುತಿದ್ದರು. ಬರ್ಬರಿಕನು ಭೀಮನ ಮೊಮ್ಮಗ ಅಂದರೆ ಘಟೋತ್ಕಚ್ ಹಾಗು ಮೌರವಿಯ ಮಗನಾಗಿದ್ದನು, ಘಟೋತ್ಕಚ್ ಭೀಮನ ಮಗ, ಬರ್ಬರಿಕನು ಬಾಲ್ಯದಿಂದಲೂ ಮಹಾ ಪರಾಕ್ರಮಿಯಾಗಿದ್ದನು. 

ಮಹಾಭಾರತ ಯುದ್ಧದ ಮುಂಚೆ ಶ್ರೀ ಕೃಷ್ಣನು ಎಲ್ಲ ಕ್ಷತ್ರಿಯರನ್ನು ಉದ್ದೇಶಿಸಿ ಒಂದು ಪ್ರಶ್ನೆಯನ್ನು ಕೇಳುತ್ತಾನೆ ಅದುವೇನೆಂದರೆ ಈ ಮಹಾಭಾರತ ಯುದ್ಧವನ್ನು ನೀವು ಎಷ್ಟು ದಿವಸದಲ್ಲಿ ಮುಗಿಸಬಲ್ಲಿರಿ ಎಂದು, ಅದಕ್ಕೆ ಅಲ್ಲಿದವರಿಂದ ಬಂದ ಉತ್ತರ ೧೫ ರಿಂದ ೨೦ ದಿವಸಗಳು ಎಂದು, ಆದರೆ ಬರ್ಬರಿಕ ಮಾತ್ರ ಒಂದೇ ನಿಮಿಷ ಸಾಕು ನನಗೆ ಈ ಯುದ್ಧವನ್ನು ಮುಗಿಸಲು ಎಂದು ಹೇಳುತ್ತಾನೆ. ಆಶ್ಚರ್ಯದಿಂದ ಶ್ರೀ ಕೃಷ್ಣನು ಬಾರ್ಬರಿಕನನ್ನು ಕೇಳುತ್ತಾನೆ ಇದು ಹೇಗೆ ಸಾಧ್ಯವೆಂದು, ಆಗ ಬರ್ಬರಿಕನು ತನ್ನ ಬಳಿ ಇದ್ದ ಶಿವನು ಕೊಟ್ಟ 3 ಬಾಣಗಳ ಸಹಾಯದಿಂದ ಈ ಯುದ್ದವನು ಒಂದೇ ನಿಮಿಷದಲ್ಲಿ ಮುಗಿಸಬಲ್ಲೆ ಎಂದು ಹೇಳುತ್ತಾನೆ. 


ಕೃಪೆ youtube

ಬರ್ಬರಿಕನ ತಪಸ್ಸು:
ಬರ್ಬರಿಕನು ಬಾಲ್ಯದಿಂದಲೂ ಮಹಾಪರಾಕ್ರಮಿಯಾ ಜೊತೆ ಶಿವನ ಅನನ್ಯ ಭಕ್ತನಾಗಿದ್ದನು. ಅವನು ಮಹಾ ತಪಸ್ಸನ್ನು ಆಚರಿಸಿ ಶಿವನಿಂದ ವರವಾಗಿ 3 ಚಮತ್ಕಾರಿಯ ಬಾಣಗಳನ್ನು ಪಡೆದಿದ್ದನು, ಅದರಲ್ಲಿ ಮೊದಲ ಬಾಣವು ಬರ್ಬರಿಕನು ಯಾರನ್ನು(ಶತ್ರುಗಳನ್ನು) ಕೊಲ್ಲಬೇಕೆಂದು ಇಚ್ಚಿಸಿ ಬಾಣವನ್ನು ಬಿಟ್ಟರೆ ಅದು ಅವರುಗಳೆಲ್ಲರನ್ನು ಗುರುತು ಹಾಕುತಿತ್ತು ನಂತರ ಮೂರನೆಯ ನೇ ಬಾಣದಿಂದ ಗುರುತಿಸಲ್ಪಟವರೆಲ್ಲರನ್ನು ಕೊಂದು ಪುನಃ ಅವನ ಬಳಿಗೆ ಬರುತಿತ್ತು, ಮೊದಲ ಹಾಗು ಮೂರನೆಯ ಬಾಣದ ಬಗ್ಗೆ ತಿಳಿಯಿತು ಹಾಗೆ ಎರಡನೆಯ ಬಾಣವು ಅವನು ಯಾರನ್ನು ಹಾಗು ಯಾವುದನ್ನೂ ರಕ್ಷಿಸಲು ಇಚ್ಚಿಸುವನೋ ಅವುಗಳೆಲ್ಲವನ್ನೂ ಗುರುತು ಹಾಕುತಿತ್ತು ನಂತರ ಮೂರನೆಯ ಬಾಣದ ಪ್ರಯೋಗದಿಂದ ಗುರುತಿಸಲ್ಪಡದ ವಸ್ತುಗಳನ್ನು ಹಾಗು ಜೀವಜಂತುಗಳೆಲ್ಲವನ್ನು ನಾಶಮಾಡುತಿತ್ತು, ಒಟ್ಟಿನಲ್ಲಿ ಮೂರನೆಯ ಬಾಣವು ನಾಶಮಾಡುವುದೇ ಆಗಿತ್ತು ಆದರೆ ಒಂದು ಮತ್ತು ಎರಡನೆಯ ಬಾಣದ ಮೇಲೆ ಇದರ ಕಾರ್ಯವು ನಿರ್ಧಾರವಾಗಿತ್ತು.


ಕೃಪೆ youtube

ಶ್ರೀ ಕೃಷ್ಣನ ಆಟ:
ಶ್ರೀ ಕೃಷ್ಣನು ಬರ್ಬರಿಕನನ್ನು ಪರೀಕ್ಷೆ ಮಾಡಲು ಮುಂದಾಗುತ್ತಾನೆ ಅದರಂತೆ ಬರ್ಬರಿಕನನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿರುವ ಒಂದು ಮರದ ಎಲೆಗಳನ್ನು ತನ್ನ ಬಾಣದ ಸಹಾಯದಿಂದ ಗುರುತಿಸುವಂತೆ ಹಾಗು ಅವುಗಳ್ಳನ್ನು ಸುಡಲು ಹೇಳುತ್ತಾನೆ , ಶ್ರೀ ಕೃಷ್ಣನ ಆಜ್ಞೆಯಂತೆ ತನ್ನ ಮೊದಲ ಬಾಣವನ್ನು ತೆಗೆದು ಬಿಲ್ಲಿಗೆ ಏರಿಸಿ ಕಣ್ಣು ಮುಚ್ಚಿ ಮಂತ್ರ ಜಪಿಸುವ ಸಮಯದಲ್ಲಿ ಶ್ರೀ ಕೃಷ್ಣನು ಒಂದು ಎಲೆಯನ್ನು ಕಿತ್ತು ತನ್ನ ಪಾದದ ಕೆಳಗಡೆ ಮುಚ್ಚಿಡುತ್ತಾನೆ, ಬರ್ಬರಿಕನು ತನ್ನ ಬಾಣವನ್ನು ಪ್ರಾಯೋಗಿಸದ ಮೇಲೆ ಅದು ಅಲ್ಲಿರುವ ಎಲ್ಲ ಎಲೆಗಳನ್ನು ಗುರುತು ಹಾಕಿ ನಂತರ ಶ್ರೀ ಕೃಷ್ಣನ ಪಾದದ ಬಳಿಗೆ ಬರುತ್ತದೆ, ಆಗ ಶ್ರೀ ಕೃಷ್ಣ ತನ್ನ ಪಾದವನ್ನು ತೆಗೆದ ನಂತರ ಅಲ್ಲಿರುವ ಎಲೆಯನ್ನು ಗುರುತು ಹಾಕುತ್ತದೆ ಬರ್ಬರಿಕನ ಬಾಣ. ನಂತರ ಮೂರನೆಯ ಬಾಣದಿಂದ ಎಲ್ಲ ಎಲೆಗಳನ್ನು ಸುಟ್ಟುಹಾಕುತ್ತಾನೆ.


ಕೃಪೆ youtube

ಶಿವನು ಕೊಟ್ಟ ಷರತ್ತು:
ನಂತರ ಶ್ರೀ ಕೃಷ್ಣನಿಗೆ ಬರ್ಬರಿಕನು ತನ್ನ ವರ(ಈ ಮೂರು ಬಾಣ)ಗಳಿಗೆ ಇರುವ ಷರತ್ತನ್ನು ಹೇಳುತ್ತಾನೆ,
ಮೊದಲನೆಯದು ಇವುಗಳನ್ನು ತನ್ನ ಸ್ವ ಹಿತ್ತಕ್ಕಾಗಿ ಉಪಯೋಗಿಸುವಂತಿಲ್ಲ 
ಎರಡೆನೆಯದು ಯುದ್ಧ ಭೂಮಿಯಲ್ಲಿ ಯಾರಬಳಿ ಕಡಿಮೆ ಬಲ ಇರುವುದೋ ಅವರ ಪರವಾಗಿ ಅಥವಾ ಅವರೊಟ್ಟುಗೂಡಿ ಯುದ್ಧ ಮಾಡಬೇಕು.


ಕೃಪೆ youtube

ಬರ್ಬರಿಕನ ಪ್ರಾಣ ತ್ಯಾಗ:
ಇದನೆಲ್ಲ ಅರಿತ ಶ್ರೀ ಕೃಷ್ಣ ಬರ್ಬರಿಕನಿಗೆ ಕೇಳುತ್ತಾರೆ ನೀನು ಯಾರ ಪಕ್ಷದಲ್ಲಿ ಇದ್ದು ಯುದ್ಧ ಆಡಲು ಬಯಸುತಿಯವೆಂದು? ಅದಕ್ಕೆ ಬಾರ್ಬರಿಕನು ನಿಸಂದೇಹವಾಗಿ ನಾನು ಪಾಂಡವರ ಪಕ್ಷದಲ್ಲಿ ಇದ್ದು ಯುದ್ಧ ಮಾಡಲು ಬಯಸುತ್ತೇನೆ ಯಾಕಂದರೆ ಅವರ ಬಳಿ ಕೌರವರಿಗಿಂತ ಸೈನ್ಯವು ಕಡಿಮೆ ಇದೆ ಎನ್ನುತ್ತಾನೆ, ಅದಕ್ಕೆ ಶ್ರೀ ಕೃಷ್ಣನು ಹೇಳುತ್ತಾನೆ ಒಂದುವೇಳೆ ನೀನು ಪಾಂಡವರೊಂದಿಗೆ ಸೇರಿದರೆ ಪಾಂಡವರು ಬಲಶಾಲಿಗಳಾಗುತ್ತಾರೆ ಅವಾಗ ನೀನು ಕೌರವರೊಂದಿಗೆ ಸೇರಬೇಕಾಗುತ್ತದೆ, ಅಷ್ಟೇ ಅಲ್ಲದೆ ನೀನು ಯಾವುದೇ ಪಕ್ಷವನ್ನು ಸೇರಿದರು ಆ ಪಕ್ಷ ಕಡಿಮೆ ಬಲ ಇದ್ದರು ನೀನು ಸೇರಿದ ಬಳಿಕ ಅದು ಬಲಶಾಲಿಯಾಗುತ್ತದೆ ಹಾಗು ನೀನು ಯುದ್ಧವನ್ನು ಮಾಡಲು ಆಗುವುದಿಲ್ಲವೆಂದು ಶ್ರೀ ಕೃಷ್ಣನು ಹೇಳುತ್ತಾನೆ. ಬರ್ಬರಿಕನು ಉತ್ತರಿಸಲಾಗದೆ ಸಂದಿಗ್ನ ಸ್ಥಿತಿಗೆ ಹೋಗುತ್ತಾನೆ. ಯಾಕೆಂದರೆ ಅವನು ಪ್ರತಿಸಲ ಪಕ್ಷವನ್ನು ಬದಲಾಯಿಸಬೇಕಾಗುತ್ತದೆ ಹಾಗು ಯುದ್ಧಕ್ಕೆ ಕೊನೆಯೇ ಇರುವುದಿಲ್ಲ. ಹಾಗಾಗಿ ಶ್ರೀ ಕೃಷ್ಣನು ಬರ್ಬರಿಕನನ್ನು ಯುದ್ಧದಲ್ಲಿ ಭಾಗವಹಿಸುವುದನ್ನು ತಡೆಯಲು ಅವನ ತಲೆಯನ್ನು ದಾನವಾಗಿ ಕೇಳುತ್ತಾನೆ, ಅದಕ್ಕೆ ಒಪ್ಪಿದ ಬರ್ಬರಿಕನು ತನ್ನ ತಲೆಯನ್ನು ಕತ್ತರಿಸಿ ಕೊಡುತ್ತಾನೆ, ಸಾಯುವ ಮುನ್ನ  ಒಂದು ವರವನ್ನು ಬೇಡುತ್ತಾನೆ ಅದೇನೆಂದರೆ ತಾನು ಸಂಪೂರ್ಣ ಮಹಾಭಾರತ ಯುದ್ಧವನ್ನು ನೋಡಬೇಕೆಂದು, ಭಗವಂತ ಶ್ರೀ ಕೃಷ್ಣನು ಅದಕ್ಕೆ ಒಪ್ಪಿ ಆತನ ತಲೆಯನ್ನು ಭೀಮನು ಯುದ್ಧ ಭೂಮಿಯ ಎತ್ತರದ ಶಿಖರದ ಮೇಲೆ ಇಟ್ಟು ಬರುತ್ತಾನೆ. ಅಲ್ಲಿಂದಲೇ ಬರ್ಬರಿಕನು ಸಂಪೂರ್ಣ ಮಹಾಭಾರತ ಯುದ್ಧವನ್ನು ನೋಡಿದನು ಎನ್ನುತ್ತಾರೆ.


ಕೃಪೆ youtube

ರಾಜಸ್ತಾನದಲ್ಲಿ ಬರ್ಬರಿಕನನ್ನು ಕಟು ಶ್ಯಾಮ್ ಜಿ ಎಂದು ಪೂಜಿಸುತ್ತಾರೆ, ಶ್ಯಾಮ್ ಜಿ ಎಂದರೆ ಶ್ರೀ ಕೃಷ್ಣನೇ, ಅವನು ಪೂಜನೀಯ ಏಕೆಂದರೆ ಅವನ ನಿಸ್ವಾರ್ಥ ತ್ಯಾಗ ದಿಂದ ಹಾಗು ಇಲ್ಲಿನ ಜನರ ನಂಬಿಕೆಯಂತೆ ಯಾರು ನಿರ್ಮಲವಾದ ಮನಸಿನಿಂದ ಬರ್ಬರಿಕನ ಹೆಸರನ್ನು ಹೇಳೋವರೋ ಅವರ ಮನಸಿನ ಇಚ್ಛೆಯು ಈಡೇರುತ್ತದೆ ಎಂದು ಶ್ರೀ ಕೃಷ್ಣ ಹೇಳಿದ್ದಾನೆ.

loading...