ಕಪ್ಪಾಗಿರುವ ಮೊಣಕೈ ಮತ್ತು ಮೊಣಕಾಲು ಬೆಳ್ಳಗಾಗಿಸಲು ನೈಸರ್ಗಿಕ ವಿಧಾನಗಳು

Published on:  2016-12-14
Posted by:  Admin

ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ತೊಂದರೆ ಎಂದರೆ ಮೊಣಕಾಲು ಮೊಣಕೈಗಳ ಮೇಲೆ ಮೂಡುವ ಕಪ್ಪನೆಯ ಬಣ್ಣ, ಎಷ್ಟೇ ತೊಳೆದರು ಅದು ಹೋಗದೆ ನಾವು ಮುಜುಗರಕ್ಕೆ ಒಳಪಡುವ ಹಾಗೆ ಮಾಡುತ್ತದೆ. ಇಂದು ನಾವು ಹೇಳುತ್ತಿರುವುದು ಈ ತೊಂದರೆಯ ಬಗ್ಗೆ, ಇದು ಹೆಚ್ಚಾಗಿ ಹುಡುಗಿಯರಲ್ಲಿ ಪರಿಣಾಮವನ್ನು ಬೀರುತ್ತದೆ, ಅವರ ಆತ್ಮ ವಿಶ್ವಾಸವನ್ನು ಕುಂದಿಸುತ್ತದೆ, ಯಾವುದೇ ಸಮಾರಂಭಗಳಿಗೆ ಹೋಗದೆ ಮನೆಯಲ್ಲಿಯೇ ಅವಿತು ಕುಳಿತುಕೊಳ್ಳುವಂತೆ ಮಾಡುತ್ತದೆ. ನಾವು ಅದನ್ನು ಕೆಲವು ಗಿಡಮೂಲಿಕೆಗಳ ಸಹಾಯದಿಂದ ಕಡಿಮೆ ಮಾಡಬಹುದು.  ಅವುಗಳನ್ನು ವಿಧಾನಗಳ ರೂಪದಲ್ಲಿ ವಿವರಿಸಲಾಗಿದೆ.


ವಿಧಾನ 1:
ಒಂದು ಚಮಚ ಅಡುಗೆ ಸೋಡವನ್ನು ಬಟ್ಟಲಿನಲ್ಲಿ ತೆಗೆದು ಕೊಳ್ಳಿ, ಅಡುಗೆ ಸೋಡವು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದ್ದು ಅದು ಸೋಂಕನ್ನು ಹರಡುವ ಬ್ಯಾಕ್ಟೇರಿಯಾಗಳನ್ನು ತಡೆಯುತ್ತದೆ.


ವಿಧಾನ 2:
ಒಂದು ಚಮಚ ಅಡುಗೆ ಸೊಡಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ, ಚಮಚದಿಂದ ಚೆನ್ನಾಗಿ ಕಲಕಿ ವಿಶ್ರಣವನ್ನಾಗಿ ಮಾಡಿಟ್ಟುಕೊಳ್ಳಬೇಕು. ಜೇನುತುಪ್ಪದಲ್ಲಿ ಅಮೈನೊ ಆಸಿಡ್ ಇದ್ದು ತ್ವಚೆಯನ್ನು ತೇವಾಂಶದಿಂದ ಇರುವಂತೆ ನೋಡಿಕೊಳ್ಳುತ್ತದೆ.


ವಿಧಾನ 3:
ವಿಧಾನ 2 ರಲ್ಲಿ ತಿಳಿಸಿದ ಮಿಶ್ರಣಕ್ಕೆ ಐದರಿಂದ ಹತ್ತು ಚಮಚ ಆಲಿವ್ ಎಣ್ಣೆಯನ್ನು ಹಾಕಬೇಕು. ಆಲಿವ್ ಎಣ್ಣೆಯಲ್ಲಿ ಹೆಚ್ಚಾಗಿ ಆಂಟಿಆಕ್ಸಿಡಂಟ್ (antioxidant ) ಇರುವುದರಿಂದ ಇದು ಚರ್ಮದ ಪದರಗಳಲ್ಲಿ ಇಳಿದು ಕಪ್ಪುಕಲೆಗಳನ್ನು ಬೇರಿನಿಂದಲೇ ನಿರ್ಮೂಲವಾಗುವತೆ ಮಾಡುವಲ್ಲಿ ಸಹಾಯಕವಾಗಿದೆ.


ವಿಧಾನ 4:
ವಿಧಾನ 3 ರಲ್ಲಿ ತಿಳಿಸಿದ ಮಿಶ್ರಣಕ್ಕೆ ಐದು ನಿಂಬೆ ಹಣ್ಣಿನ ಹನಿಗಳನ್ನು ಹಾಕಬೇಕು. ಚೆನ್ನಾಕಿ ಕಲಕಿ ಮಿಶ್ರಣವನ್ನು ಸಿದ್ಧವಾಗಿಟ್ಟು ಕೊಳ್ಳಬೇಕು, ನಿಂಬೆ ಹಣ್ಣಿನಲ್ಲಿ ನೈಸರ್ಗಿಕವಾಗಿ ಸಿಟ್ರಿಕ್ ಆಸಿಡ್ ಇರುವುದರಿಂದ ಬಿಳುಪುಕಾರಕವಾಗಿ ಕೆಲಸಮಾಡುತ್ತದೆ ಹಾಗು ಚರ್ಮದಲ್ಲಿರುವ ಕಷ್ಮಲಗಳನ್ನು ಹೊರಹಾಕುತ್ತದೆ.


ವಿಧಾನ 5:
ಮೊದಲು ಮೊಣಕಾಲು ಅಥವಾ ಮೊಣಕೈನ್ನು ಸಾಬೂನಿನಿಂದ ತೊಳೆಯಬೇಕು, ಬಟ್ಟೆಯಿಂದ ತೇವಾಂಶ ಇಲ್ಲದಂತೆ ಒರೆಸಬೇಕು.
 

ವಿಧಾನ 6:
ಈ ಮೇಲಿನ ಎಲ್ಲ ಪದಾರ್ಥಗಳ ಮಿಶ್ರಣವನ್ನು ತೆಳುವಾಗಿ ಕಪ್ಪಾಗಿರುವ ಜಾಗಕ್ಕೆ ಹಚ್ಚಬೇಕು, ಸಾದ್ಯವಾದರೆ ಒಂದು ತೆಳು ಬಟ್ಟೆಯನ್ನು ಕಟ್ಟಬಹುದು. ಮೂವತ್ತು ನಿಮಿಷಗಳವರೆಗೂ ಅದನ್ನು ನೆನೆಯಲು ಬಿಡಬೇಕು. ಮೂವತ್ತು ನಿಮಿಷಗಳ ನಂತರ ತೆಳು ಬಟ್ಟೆಯನ್ನು ತೆಗೆದು ಸ್ವಲ್ಪ ಹನಿ ನೀರನ್ನು ಅದರ ಮೇಲೆ ಹಾಕಿ ವೃತ್ತಾಕಾರವಾಗಿ ಐದು ನಿಮಿಷ ಮಸಾಜ್ ಮಾಡಬೇಕು.


ವಿಧಾನ 7:
ಲೋಳೆಸರದ (Aleovera ) ಎಲೆಯನ್ನು ತೆಗೆದುಕೊಂಡು ಅದರ ನಡುಭಾಗವನ್ನು ಕತ್ತರಿಸಿ ಒಳಗಿರುವ ದ್ರಾವಣವನ್ನು (Gel ) ಒಂದು ಚಮಚದ ಸಹಾಯದಿಂದ ತೆಗೆದು ಶೇಖರಿಸಿಟ್ಟುಕೊಳ್ಳಬೇಕು.


 ನಂತರ ಆ ದ್ರಾವಣವನ್ನು ಮೊಣಕಾಲು ಮೊಣಕೈಗಳ ಕಪ್ಪಗಿರುವ ಜಾಗಗಳಿಗೆ ಮಸಾಜ್ ಮೂಲಕ ಹಚ್ಚಬೇಕು. ಸಾದ್ಯವಾದರೆ ಈ ವಿಧಾನಗಳನ್ನು ರಾತ್ರಿಯಲ್ಲಿ ಮಾಡಿ ಬೆಳಗ್ಗೆ ತೊಳೆದುಕೊಳ್ಳುವುದರಿಂದ ಹೆಚ್ಚು ಫಲಿತಾಂಶ ಬರುತ್ತದೆ.

ಸೂಚನೆ: ಈ ವಿಧಾನಗಳನ್ನು ವಾರದಲ್ಲಿ ಎರಡರಿಂದ ನಾಲ್ಕು ಭಾರಿ ಪ್ರಯತ್ನಿಸಿದರೆ ಒಳ್ಳೆ ಫಲಿತಾಂಶ ಪಡೆಯಬಹುದು. ನಿಮ್ಮಲ್ಲೂ ಇದೇ ರೀತಿಯ ವಿಧಾನಗಳು ಗೊತ್ತಿದರೆ Comment Box ಅಲ್ಲಿ ನೀವು Type ಮಾಡಿ ನಮಗೆ ತಿಳಿಸಬಹುದು.

loading...