ಸಾಮಾನ್ಯಜ್ಞಾನ ( ಭೂಗೋಳ) - ೮

Published on:  2016-11-03
Posted by:  Admin

ಸಾಮಾನ್ಯಜ್ಞಾನ ( ಭೂಗೋಳ) -

 

1. ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

 1. ಕರ್ಕಾಟಿಕ್ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವಣ ಭೂ ಭಾಗ ಉಷ್ಣವಲಯ

2. ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಆರ್ಕ್ಟಿಕ್ ವೃತ್ತ ಹಾಗೂ ಮಕರ ಸಂಕ್ರಾಂತಿ  ವೃತ್ತ ಮತ್ತು ಅಂಟಾರ್ಟಿಕ್ ವೃತ್ತಗಳ ನಡುವಣ ಭಾಗ ಸಮಶೀತೋಷ್ಣ ವಲಯ

3. ಆರ್ಕ್ಟಿಕ್ ವೃತ್ತ ಮತ್ತು ಉತ್ತರ ಧ್ರುವ ಹಾಗೂ ಅಂಟಾರ್ಟಿಕ್ ವೃತ್ತ ಹಾಗೂ ದಕ್ಷಿಣ ಧ್ರುವಗಳ ನಡುವಣ ಭೂಭಾಗ ಶೀತವಲಯ

4. ಮೇಲಿನ ಎಲ್ಲವು

ಉತ್ತರ : ಮೇಲಿನ ಎಲ್ಲವು

 

2. ವಾಯುಮಂಡಲದ ಅತ್ಯಂತ ಕೆಳಸ್ತರ ಯಾವುದು?

1. ಸಮೋಷ್ಣಮಂಡಲ

2. ಆಯಾನು ಮಂಡಲ

3. ಪರಿವರ್ತನಮಂಡಲ

4. ಬಾಹ್ಯ ಮಂಡಲ

ಉತ್ತರ: ಪರಿವರ್ತನಮಂಡಲ

 

 

3. ಶುಕ್ರ ಗ್ರಹಕ್ಕೆ ಸಂಬಂಧಿಸಿದ ಯಾವ ಹೇಳಿಕೆ ತಪ್ಪಾಗಿದೆ?

1. ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹ ಇದಾಗಿದೆ

 2. ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಪ್ರದಕ್ಷಿಣೆ ಹಾಕುವ ಗ್ರಹ.

3. ಶುಕ್ರಗ್ರಹದ ದೈನಂದಿನ ಚಲನೆಯ ಅವಧಿ 243 ದಿನಗಳು ಮತ್ತು ವಾರ್ಷಿಕ ಚಲನೆಯ ಅವಧಿ 225 ದಿನಗಳು

4. ಒಟ್ಟು ನಾಲ್ಕು ಉಪಗ್ರಹಗಳನ್ನು ಹೊಂದಿದೆ

ಉತ್ತರ: ಒಟ್ಟು ನಾಲ್ಕು ಉಪಗ್ರಹಗಳನ್ನು ಹೊಂದಿದೆ

 

4. ಭಾರತದ ಪ್ರಮುಖ ಆಹಾರ ಬೆಳೆ ಭತ್ತಕ್ಕೆ ಸಂಬಂಧಿಸಿದಂತೆ ಕೆಳಗಿನ  ಯಾವ ಹೇಳಿಕೆ ತಪ್ಪಾಗಿದೆ

 1. ಇದು ಉಷ್ಣವಲಯದ ಬೆಳೆಯಾಗಿದೆ

2. ಇದು ಖಾರೀಫ್ ಬೆಳೆಯಾಗಿದ್ದು ಇದರ ವೈಜ್ಞಾನಿಕ ಹೆಸರು ವರೈಸಾ ಸಟೈವಾ

3. ಭತ್ತಕ್ಕೆ ವಾರ್ಷಿಕ 100ರಿಂದ  200 ಸೆಂ ಮೀ ಮಳೆಯ ಅವಶ್ಯಕತೆ ಇದೆ

4. ಭಾರತವು ಭತ್ತದ ಉತ್ಪಾದನೆಯಲ್ಲಿ ಜಗತ್ತಿನಲ್ಲೆ ಪ್ರಥಮ ಸ್ಥಾನದಲ್ಲಿದೆ

ಉತ್ತರ: ಭಾರತವು ಭತ್ತದ ಉತ್ಪಾದನೆಯಲ್ಲಿ ಜಗತ್ತಿನಲ್ಲೆ ಪ್ರಥಮ ಸ್ಥಾನದಲ್ಲಿದೆ

 

5. ತಮಿಳುನಾಡು ಕರಾವಳಿ ಬೇಸಿಗೆ ಮತ್ತು ಚಳಿಗಾಲ ಎರಡು ಕಾಲದಲ್ಲಿ ಮಳೆ ಪಡೆಯಲು ಕಾರಣವೇನು?

1. ನೈರುತ್ಯ ಮಾರುತಗಳಿಂದ

2. ಈಶಾನ್ಯ ವಾಣಿಜ್ಯ ಮಾರುತಗಳಿಂದ

3. ಬಂಗಾಳಕೊಲ್ಲಿ ಆವರ್ತ ಮಾರುತಗಳಿಂದ

4. ಬೇಸಿಗೆಯಲ್ಲಿ ನೈರುತ್ಯ ಮುಂಗಾರು ಮತ್ತು ಚಳಿಗಾಲದಲ್ಲಿ ಈಶಾನ್ಯ ವಾಣಿಜ್ಯ ಮಾರುತಗಳಿಂದ

ಉತ್ತರ: ಬೇಸಿಗೆಯಲ್ಲಿ ನೈರುತ್ಯ ಮುಂಗಾರು ಮತ್ತು ಚಳಿಗಾಲದಲ್ಲಿ ಈಶಾನ್ಯ ವಾಣಿಜ್ಯ ಮಾರುತಗಳಿಂದ

 

6. ಭೂಮಿಯ ಒಳಪದರು ಹೆಚ್ಚಾಗಿ ನಿಕ್ಕಲ್ ಮತ್ತು ಫೆರಸ್ ( ಕಬ್ಬಿಣ ) ದಿಂದ ರಚಿತವಾಗಿದ್ದರಿಂದ ಸಾಂಕೇತಿಕವಾಗಿ ಹೀಗೆಂದು ಕರೆಯುವರು.

1. ಸಿಯಾಲ್

2. ನೀಫೆ

3. ಮ್ಯಾಂಟಲ್

4. ಸೀಮಾ

ಉತ್ತರ: ನೀಫೆ

 

 

7. ಮಾರ್ಚ್ 21 ರಂದು ಸೂರ್ಯನ ನೇರವಾದ ಕಿರಣಗಳು ಸಮಭಾಜಕ ವೃತ್ತದ ಮೇಲೆ ಬೀಳುತ್ತವೆ, ಹಾಗೂ ಎರಡು ಗೋಳಾರ್ಧಗಳಲ್ಲಿ ಹಗಲು, ರಾತ್ರಿಗಳು ಅವಧಿಗಳು ಸಮವಾಗಿರುತ್ತವೆ. ಸ್ಥಿತಿಯನ್ನು ಏನೆಂದು ಕರೆಯುವರು?

1. ಮಕರ ಸಂಕ್ರಾಂತಿ

2. ತುಲಾ ಸಂಕ್ರಾಂತಿ

3. ಕರ್ಕಾಟಕ ಸಂಕ್ರಾಂತಿ

4. ವಿಷವತ್ಸ ಕ್ರಾಂತಿ

ಉತ್ತರ: ವಿಷವತ್ಸ ಕ್ರಾಂತಿ

 

 

8. ಉಷ್ಣವಲಯದ ಆವರ್ತ ಮಾರುತಗಳನ್ನು ಜಪಾನ್ನಲ್ಲಿ  ಯಾವ ಹೆಸರಿನಿಂದ ಕರೆಯುತ್ತಾರೆ?

1. ಹರೀಕೆನ್

2. ಸೈಕ್ಲೋನ್

3. ವಿಲ್ಲಿ ವಿಲ್ಲಿ

4. ಟೈಫೋನ್

ಉತ್ತರ: ಟೈಫೋನ್

 

9. ಅತ್ಯಂತ ಆಳವಾದ ತಗ್ಗು ಯಾವ ಮಹಾಸಾಗರದಲ್ಲಿ ಇದೆ?

 1. ಪೆಸಿಫಿಕ್ ಮಹಾಸಾಗರ

2. ಆರ್ಕಟಿಕ್ ಮಹಾಸಾಗರ

3. ಹಿಂದು ಮಹಾಸಾಗರ

4. ಅಟ್ಲಾಂಟಿಕ್ ಮಹಾಸಾಗರ

ಉತ್ತರ: ಪೆಸಿಫಿಕ್ ಮಹಾಸಾಗರ

 

10. ಯಾವ ಕಬ್ಬಿಣದ ಅದಿರು ಅತ್ಯಂತ ಹೆಚ್ಚು ಕಬ್ಬಿಣಾಂಶ ಪ್ರಮಾಣ ಹೊಂದಿದೆ?

1. ಸಿಡರೈಟ್

2. ಮ್ಯಾಗ್ನಟೈಟ್

3. ಹೆಮಟೈಟ್

4. ಲಿಮೋನೈಟ್

ಉತ್ತರ : ಮ್ಯಾಗ್ನಟೈಟ್

loading...