ಸಾಮಾನ್ಯ ಜ್ಞಾನ ( ಸಂವಿಧಾನ) - ೬

Published on:  2016-11-02
Posted by:  admin

ಸಾಮಾನ್ಯ ಜ್ಞಾನ ( ಸಂವಿಧಾನ) -

 

1. ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು  ಅಳವಡಿಸಬೇಕೆಂದು ಅದಕ್ಕಾಗಿ ಸಮಿತಿಯನ್ನು ನೇಮಿಸಬೇಕೆಂದು ಶಿಫಾರಸ್ಸು ಮಾಡಿದ ಆಯೋಗ ಯಾವುದು?

 ಉತ್ತರ : 1946 ಕ್ಯಾಬಿನೆಟ್ ಆಯೋಗ

 

2. ಮೂಲ ಸಂವಿಧಾನದಲ್ಲಿ  ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?

 ಉತ್ತರ: 07

 

3. ಆಸ್ತಿಯ ಹಕ್ಕನ್ನು ತೆಗೆದು ಹಾಕಿದ ಸಂವಿಧಾನಾತ್ಮಕ ತಿದ್ದುಪಡಿ ಯಾವುದು?

 ಉತ್ತರ : 1978  44ನೇ ತಿದ್ದುಪಡಿ

 

4. ಅಸ್ಪೃಶ್ಯತಾ ನಿಷೇಧದ ಬಗ್ಗೆ ತಿಳಿಸುವ ಪರಿಚ್ಛೇದ ಯಾವುದು?

 ಉತ್ತರ : 17 ನೇ ಪರಿಚ್ಛೇದ

 

5. ಡಾ. ಬಿ. ಆರ್. ಅಂಬೇಡ್ಕರ್ ರವರು ಭಾರತದ ಸಂವಿಧಾನದ ಯಾವ ವಿಧಿಯನ್ನು ಆತ್ಮ ಮತ್ತು ಹೃದಯ ಎಂದು ಕರೆದಿದ್ದಾರೆ?

 ಉತ್ತರ : 32 ನೇ ವಿಧಿ

 

6. ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

ಉತ್ತರ : ಐರ್ಲೆಂಡ್

 

7. ಭಾರತದ ಏಕ ಪೌರತ್ವ ಪದ್ಧತಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆದಿದೆ?

 ಉತ್ತರ : ಬ್ರಿಟನ್ ಸಂವಿಧಾನ

 

8. ಬಂಧಿತ ವ್ಯಕ್ತಿಯನ್ನು 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ  ಹಾಜರುಪಡಿಸುವ ರಿಟ್ ಯಾವುದು?

 ಉತ್ತರ : ಹೇಬಿಯಸ್ ಕಾರ್ಪಸ್

 

9. ಅರಣ್ಯ ಹಾಗು ವನ್ಯಜೀವಿಗಳ ಸಂರಕ್ಷಣೆಗೆ ಸರಕಾರಕ್ಕೆ ನಿರ್ದೇಶನ ನೀಡುವ ವಿಧಿ ಯಾವುದು?

ಉತ್ತರ : 48 () ವಿಧಿ

 

10. 6 ವರ್ಷ ಮುಗಿಯುವ ವರೆಗೆ  ಮಕ್ಕಳಿಗೆ ಬಾಲ್ಯಾವಸ್ಥೆಯ ಕಾಳಜಿ ಹಾಗೂ ಶಿಕ್ಷಣ ಕೊಡುವುದು ಎಂದು ತಿಳಿಸುವ ಸಂವಿಧಾನದ ವಿಧಿ ಯಾವುದು?

 ಉತ್ತರ : 45ನೇ ವಿಧಿ

">

loading...