ಸುಲಭ ರೀತಿಯಲ್ಲಿ ತಯಾರಿಸಬಹುದಾದ ರಸಗುಲ್ಲ

Published on:  0000-00-00
Posted by:  Basavaraj PM

ಬೇಕಾಗುವ ಸಾಮಗ್ರಿಗಳು:
ಹಾಲು
ಸಕ್ಕರೆ
ನಿಂಬೆ ಹಣ್ಣು 

ಮಾಡುವ ವಿಧಾನ:
* ಮೊದಲು 1 ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಬೇಕು.
* ನಂತರ ಕಾಯಿಸಿದ ಹಾಲಿಗೆ ಲಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕಲಕಬೇಕು.
* ನಂತರ ಹಾಲು ಒಡೆದು ಕೆನೆಯ ಗಟ್ಟಿ ರೂಪದಲ್ಲಿ ಬರುತ್ತದೆ (Milk Curdles).
* ಆ ಕೆನೆಯನ್ನು ಒಂದು ಬಟ್ಟೆಯಲ್ಲಿ ಚೆನ್ನಾಗಿ ನೀರನ್ನು ಹಿಂಡಿ ತೆಗೆದು ಅದೇ ಬಟ್ಟೆಯಲ್ಲಿ ಅರ್ಧ ಗಂಟೆಯವರೆಗೆ ಕಟ್ಟಿಡಬೇಕು.
* ಇನ್ನೊಂದು ಪಾತ್ರೆಯಲ್ಲಿ ಸಕ್ಕರೆಯ ಪಾಕ ಮಾಡಿಟ್ಟುಕೊಳ್ಳಬೇಕು.
* ಬಟ್ಟೆಯಲ್ಲಿ ಕಟ್ಟಿಟ್ಟ Milk Curdles ನು ಚೆನ್ನಾಗಿ ಮೆದುವಾಗುವವರೆಗೂ ಮಿದ್ದಬೇಕು.
* ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಸಕ್ಕರೆ ಪಾಕದ ನೀರಿನಲ್ಲಿ ಹಾಕಿ 15 ನಿಮಿಷ ಪ್ಲೇಟನ್ನು ಮುಚ್ಚಿ ಕುದಿಸಬೇಕು.

OR

* ಬೇಕೆಂದರೆ ನೀವು ಹಾಲಿನ ಜೊತೆಯೂ ಸವಿಯಬಹುದು(ಸಕ್ಕರೆ ಪಾಕವಿಲ್ಲದೆ)
ಹಾಲು, ಏಲ್ಲಕ್ಕಿ, ಸಕ್ಕರೆ, ಸ್ವಲ್ಪ ಕೇಸರಿಯನ್ನು ಹಾಕಿ ಹತ್ತು ನಿಮಿಷ ಬಿಸಿಮಾಡಬೇಕು.
* ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಹಾಲಿನ ಪಾಕದಲ್ಲಿ ಹಾಕಿ 15 ನಿಮಿಷ ಪ್ಲೇಟನ್ನು ಮುಚ್ಚಿ ಕುದಿಸಬೇಕು.
* ಈಗ ನಿಮಗೆ ಬೇಕಾಗಿರುವ ರಸಗುಲ್ಲ ತಿನ್ನಲು ರೆಡಿ.

ಗೋದಿ ಹಿಟ್ಟಿನ ಕಡುಬು ಮಾಡುವ ವಿಧಾನ

loading...