ಗುಲ್ಬರ್ಗ ಜಿಲ್ಲೆಯ ತಾಲ್ಲೂಕುಗಳು

Published on:  2016-09-25
Posted by:  Admin

ಗುಲ್ಬರ್ಗ ಜಿಲ್ಲೆಯಲ್ಲಿ 7 ತಾಲ್ಲೂಕುಗಳು ಇವೆ, ಕಿರು ಪರಿಚಯದೊಂದಿಗೆ ಅವುಗಳನ್ನು ತಿಳಿಯೋಣ ಬನ್ನಿ 

1) ಆಳಂದ್
2) ಅಫಜಲ್ಪುರ
3) ಕಲಬುರಗಿ
4) ಚಿಂಚೋಳಿ
5) ಸೇಡಮ್
6) ಚಿತ್ತಾಪುರ
7) ಜೇವರ್ಗಿ
ಯಾದಗಿರಿ ಕೂಡ ಕಲಬುರಗಿ ಜಿಲ್ಲೆಯ ಒಂದು ತಾಲೂಕು ಇತ್ತು,ಆದರೆ ೧೦ April ೨೦೧೦ ಕ್ಕೆ ಯಾದಗಿರಿ ಜಿಲ್ಲೆಯಾಗಿ ಘೋಷಿತವಾಯಿತು. ಯಾದಗಿರಿ ಜಿಲ್ಲೆಯಲ್ಲಿ ಸುರಪುರ ಹಾಗು ಶಹಾಪುರ ತಾಲೂಕುಗಳನ್ನು ಕೂಡಿಸಲಾಯಿತು.ಆಳ್೦ದ ತಾಲುಕಿನ ಕುದಮುಡ್ ಗ್ರಾಮದಲ್ಲಿ ಪ್ರಸಿದ್ದ ವಾದ ಮಾಹಾದೇವ ದೇವಸ್ಥಾನವಿದೆ. 

1.ಆಳಂದ್
ಆಳಂದ್ ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಒಂದು ಪಂಚಾಯತಿ ಪಟ್ಟಣ ಮತ್ತು ತಾಲೂಕು ಕೇಂದ್ರ.

ಭೌಗೋಲಿಕ ವಿವರಗಳು
ಅಕ್ಷಾಂಶ / ರೇಖಾಂಶ : ೧೭.೫೭ ಡಿಗ್ರಿ ಉತ್ತರ ಮತ್ತು ೭೬.೫೭ ಡಿಗ್ರಿ ಉತ್ತರ.
ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೮೦ ಮೀಟರುಗಳು.
ಕ್ಷೇತ್ರಫಲ : ೮ ಚದರ ಕಿ.ಮೀ
ಅಕ್ಕಪಕ್ಕದ ತಾಲೂಕುಗಳು : ಗುಲ್ಬರ್ಗ ಪೂರ್ವಕ್ಕೆ, ಅಫಜಲ್ಪುರ ತಾಲೂಕು ದಕ್ಷಿಣಕ್ಕೆ ,
ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ಉತ್ತರ-ಪಶ್ಷಿಮಕ್ಕೆ, ಮಹಾರಾಷ್ಟ್ರದ ಅಕ್ಕಲಕೋಟೆ ಪಶ್ಚಿಮಕ್ಕೆ ಮತ್ತು ಮಹಾರಾಷ್ಟ್ರದ ಉಮರ್ಗಾ ಉತ್ತರಕ್ಕೆ. ಅಮರ್ಗಾ ನದಿ ಈ ತಾಲೂಕಿನಲ್ಲಿ ಹರಿಯುತ್ತದೆ.

ಜನಸಂಖ್ಯಾ ಅಂಕಿ ಅಂಶ
೨೦೦೧ರ ಜನಗಣತಿ ಯ ಪ್ರಕಾರ ಆಳಂದಿನ ಜನಸಂಖ್ಯೆ ೩೫,೩೦೮. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೫೩% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೬%ರಷ್ಟಿದ್ದಾರೆ.ಕ್ರಷಿ ಇಲ್ಲಿನ ಪ್ರಮುಖ ಬೆಳೆಯಾಗಿದೆ. ತೊಗರಿ, ಜೊಳ, ಊದ್ದು, ಕಬ್ಬು, ಶೆಂಗಾ ಇತ್ಯಾದಿ ಇಲ್ಲಿನ ಇತರ ಬೆಳೆಯಾಗಿರುತ್ತವೆ.... 

ಆಳಂದ ತಾಲ್ಲೂಕಿನ ಪ್ರಮುಖ ಹೊಬಳಿಗಳು
* ಮಾದನ ಹಿಪ್ಪಾರಗಾ
* ಖಜ್ಜುರಗಿ
* ನರೋಣಾ
* ನಿಂಬರಗಾ
* ಮಾದನಹಿಪ್ಪರಗಾದಲ್ಲಿ ಒಂದು ಪದವಿ ಕಾಲೇಜು ಆಳಂದದಿಂದ ಸುಮಾರು ೩೦ ಕೀಮಿದಲ್ಲಿದೆ.
* ಈಲ್ಲಿ ಇರುವ ಆಳಂದ ತಾಲೂಕಿನ ಕೊನೆಯ ಹಳ್ಳಿ ಹಿರೋಳ್ಳಿ ಇದನ್ನು ದಾಟಿದಾಗ ಮಹಾರಾಷ್ವ್ರ ಸರಹದ್ದು ಪ್ರಾರಂಭ ಆಗುವುದು.


2.ಅಫಜಲ್ಪುರ
ಅಫಜಲ್ಪುರ ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಒಂದು ಪಂಚಾಯತಿ ಪಟ್ಟಣ ಮತ್ತು ತಾಲೂಕು ಕೇಂದ್ರ.

ಭೌಗೋಳಿಕ ವಿವರಗಳು
ಅಕ್ಷಾಂಶ / ರೇಖಾಂಶ : ೧೭.೨ ಡಿಗ್ರಿ ಉತ್ತರ ಮತ್ತು ೭೬.೩೫ ಡಿಗ್ರಿ ಉತ್ತರ.
ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೦೮ ಮೀಟರುಗಳು.
ಕ್ಷೇತ್ರಫಲ : ೩ ಚದರ ಕಿ.ಮೀ
ಅಕ್ಕಪಕ್ಕದ ತಾಲೂಕುಗಳು : ಆಳಂದ್ ಉತ್ತರಕ್ಕೆ, ಗುಲ್ಬರ್ಗ ಪೂರ್ವಕ್ಕೆ, ಜೇವರ್ಗಿ ಮತ್ತು ಸಿಂದಗಿ (ಬಿಜಾಪುರ ಜಿಲ್ಲೆ) ದಕ್ಷಿಣಕ್ಕೆ, ಇಂಡಿ (ಬಿಜಾಪುರ ಜಿಲ್ಲೆ) ಪಶ್ಷಿಮಕ್ಕೆ, ಮತ್ತು ಮಹಾರಾಷ್ಟ್ರದ ಅಕ್ಕಲಕೋಟೆ ಉತ್ತರ-ಪಶ್ಷಿಮಕ್ಕೆ
ಭೀಮಾ ಮತ್ತು ಅಮರ್ಜಾ ನದಿಗಳು ಈ ತಾಲೂಕಿನಲ್ಲಿ ಹರಿಯುತ್ತವೆ.

ಪ್ರಮುಖ ಬೆಳೆಗಳು: ಕಬ್ಬು, ತೊಗರಿ, ಜೋಳ, ಸೂರ್ಯಕಾಂತಿ, ಕುಸುಬೆ, ಕಡಲೆ, ಶೇಂಗಾ, ಹೆಸರು.

ಜನಸಂಖ್ಯಾ ಅಂಕಿ ಅಂಶ
೨೦೦೧ರ ಜನಗಣತಿ ಯ ಪ್ರಕಾರ ಅಫಜಲ್ಪುರದ ಜನಸಂಖ್ಯೆ ೧೯,೧೧೪. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೫೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೫%ರಷ್ಟಿದ್ದಾರೆ.

ಪ್ರೇಕ್ಷಣೀಯ ಸ್ಥಳಗಳು
ಘತ್ತರ್ಗಾ- ಶ್ರೀ ಭಾಗ್ಯವ೦ತಿ,ದೇವಾಲಯ
ರೇವೂರ..ಶ್ರೀಬಮ್ಮಲಿಂಗೇಶ್ವರ - ಶ್ರೀರೇವಣಸಿದ್ದೇಶ್ವರ ದೇವಾಲಯ,
ಚಿನ್ನಮಳ್ಳಿಯ -ಶ್ರೀ ಮಲ್ಲಿಕಾರ್ಜುನ,ದೇವಾಲಯ,
ಅಫಜಲಪುರ: ಶ್ರೀ ಸಿದ್ಫರಾಮೇಶ್ವರ ಜಾತ್ರೆ ,ಶ್ರೀ ಸೋಂದೇಸಾಹೇಬ್ ದರ್ಗಾ, ಶ್ರೀ ಕಾಳಿಕಾದೇವಿ ಜಾತ್ರೆ, ಶ್ರೀ ಅಂಬಾಭವಾನಿ ಜಾತ್ರೆ, ಶ್ರೀ ಲಕ್ಷ್ಮಿದೇವಾಲಯ,
ಅಫಝಲಖಾನ್ ನ ಮಸೀದಿ 
ಸಂಗಾಪುರದ: ಶ್ರೀ ಸಂಗಮೇಶ್ವರ ದೇವಾಲಯ,
ಮಣ್ಣೂರದ-ಶ್ರೀ ಯಲ್ಲಮ್ಮಾದೇವಾಲಯ,
ಅತನೂರ,ಗೂಬುರ,ಇಲ್ಲಿ ಪ್ರಾಚೀನ ಗೂಡೇಗಳಿವೆ ಅವಶೇಷಗಳಿವೆ.
ಮರ್ಜಿ ಪೀರ್‍ ದರ್ಗಾ (ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿದೆ
ಉಡಚಣ, ಗೌರ(ಬಿ), ಅಳ್ಳಗಿ (ಬಿ),ಗಳ ಪವಾಡ ಪುರು‌ಷ :ಶ್ರೀ ಹುಚ್ಚಲಿಂಗೇಶ್ವರರ ಜಾತ್ರೆ.
ಮಲ್ಲಾಬಾದ: ಶ್ರೀ ಲಕ್ಷ್ಮಿ ದೇವಾಲಯ,
ಬಳೂರ್ಗಿ: ಶ್ರೀ ಬಸವೇಶ್ವರ ದೇವಾಲಯ,
ಬಂದರವಾಡ: ಶ್ರೀ ಲಲಿತಾದೇವಿ ದೇವಾಲಯ
ದೇವಲ ಗಾಣಗಾಪೂರ: ತ್ರಿಮೂರ್ತಿ ಶ್ರೀ ದತ್ತಾತ್ರೇಯ
ಹೈದ್ರಾ: ಶ್ರೀ ಖಾಜಾ ಬಂದೇನವಾಜ ದರ್ಗಾ
ನಂದರ್ಗಾ: ಶ್ರೀ ರೇವಣಸಿದ್ದೇಶ್ವರ.
ಗೌಡಗಾಂವ:ಶ್ರೀ ಮಲ್ಲಿಕಾರ್ಜುನ ದೇವಸ್ಥಾನ.


3.ಚಿಂಚೋಳಿ
ಇದು ಗುಲ್ಬರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಜಿಲ್ಲಾ ಕೇಂದ್ರದಿಂದ ೮೫ ಕಿ.ಮೀ ದೂರದಲ್ಲಿದೆ. ಇಲ್ಲಿ ಕುಂಚವರಂ ಅರಣ್ಯಪ್ರದೇಶ ಮತ್ತು ಚಂದ್ರಂಪಳ್ಳಿ ಜಲಾಶಯವಿದೆ. ಚಿಂಚೋಳಿ ತಾಲೂಕು ತನ್ನ ತವರು ಜಿಲ್ಲೆಯ ಸೇಡಂ ಚಿತ್ತಾಪುರ ಹಾಗು ಉತ್ತರ ಬೀದರ್ ಜಿಲ್ಲೆಯ ಹುಮನಬಾದ್ ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಜಹೀರಬಾದ್, ರಂಗಾರೆಡ್ಡಿ ಜಿಲ್ಲೆಯ ತಾಂಡೂರು ಗಡಿಯನ್ನು ಹಂಚಿಕೊಂಡಿದೆ. (ಸಾರಿಗೆ ವ್ಯವಸ್ಥೆ)ಚಿಂಚೋಳಿ ಪಟ್ಟಣ ಕರ್ನಾಟಕ ಸಾರಿಗೆ ಬಸ್ ನಿಲ್ದಾಣಕ್ಕೆ ಬೆಂಗಳೂರು ಹುಬ್ಬಳ್ಳಿ ಹೈದ್ರಾಬಾದ್ ಗುಲ್ಬರ್ಗ ದಿಂದ ದಿನವಿಡೀ ಬಸ್ ಸೌಕರ್ಯವಿದೆ ಸಮೀಪದ ರೈಲ್ವೆ ನಿಲ್ದಾಣ ತಾಂಡೂರು-30ಕಿ.ಮೀ (ಪ್ರಮುಖ ವ್ಯಕ್ತಿಗಳು) ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಹಾಗು ವೈಜನಾಥ್ ಪಾಟೀಲ್-ಹೈದ್ರಾಬಾದ್ ಕರ್ನಾಟಕ ಹೋರಾಟಗಾರರು ಹಾಗು ಮಾಜಿ ಶಾಸಕರು

4.ಸೇಡಮ್
ಇದು ಗುಲ್ಬರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇಲ್ಲಿ ರಾಷ್ಟ್ರಕೂಟರ ರಾಜಧಾನಿ ಮಳಖೇಡ. ಸೇಡಂ ತಾಲೂಕಿನಲ್ಲಿ ಕೊತ್ತಲ್ ಬಸವೇಶ್ವರ ದೇವಸ್ಥಾನವು ಪ್ರಸಿಧ್ಧವಾಗಿದೆ. ಮತ್ತು ಪಂಚಲಿಂಗೇಶ್ವರ ಮಂದಿರ ಹಾಗೂ ಬಾಣಂತಿ ಕಂಬವು ಪ್ರಸಿಧ್ಧಿಯನ್ನು ಪಡೆದಿದೆ. ಮೋತಕಪಲ್ಲಿ ಬಲಭೀಮಸೇನ ದೇವಾಲಯ ಮಳಖೇಡ್‍ನ ಟೀಕಾಚಾರ್ಯರ ಮಠ ಮತ್ತು ಕೋಟೆ ಪ್ರವಾಸ ಸ್ಥಳಗಳು.

ಸೇಡಂ ತಾಲೂಕಿನಲ್ಲಿ ಬರುವ ಪ್ರಮುಖ ಹೋಬಳಿಗಳು
* ಮುಧೋಳ.
* ಮಳಖೇಡ್.

5.ಚಿತ್ತಾಪುರ
ಚಿತ್ತಾಪುರವು ಗುಲ್ಬರ್ಗ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರವಾಗಿದೆ

ಕೃಷಿ ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಕೃಷಿಯ ದೃಷ್ಟಿಯಿ೦ದ, ಚಿತ್ತಾಪುರ್ ತಾಲೂಕಾ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳು.ಇದು ತಾಲುಕ ಕೆ೦ದ್ರ,ಇಲ್ಲಿ ಪ್ರಸಿದ್ಧ ನಾಗವಿ ದೇವಾಲಯ ಇದೆ. ತೆ೦ಗಳಿ, ನಾಲವಾರ, ಶಹಬಾದ, ರಾವೂರ, ಕಾಳಗಿ, ಗು೦ಡಗುರ್ತಿ, ವಾಡಿ, ಇ೦ಗಳಗಿ, ದಿಗ್ಗಾಂವ ಪ್ರಮುಖ ಹಳ್ಳಿಗಳು. ಅಲ್ಲದೇ ಇಲ್ಲಿ ಶಹಾಬಾದ್ ಕಲ್ಲುಗಳು ಪ್ರಸಿದ್ಧ.

loading...