ಧನುರಾಸನ ಮಾಡುವ ವಿಧಾನ

Published on:  2016-09-18
Posted by:  Admin

ಈ ಆಸನ ಮಾಡುವ ವಿಧಾನ : 
೧. ಬೋರಲಾಗಿ (ಬೆನ್ನು ಮೇಲಕ್ಕೆ ಮಾಡಿ ) ಮಲಗಿ , ಕಾಲುಗಳನ್ನು ಮೊಳಕಾಲು ಬಳಿ ಮಡಿಚಿ , ಹಿಮ್ಮಡಿ ಗಳು ನಿತಂಬದ ಮೇ ಲೇ ಇರಿಸಿ , ಮಂಡಿಗಳು ಹಾಗು ಪಾದಗಳು ಪರಸ್ಪರ ಸೇರಿರಲಿ . 
೨. ಎರಡು ಕೈಗಳಿಂದ ಕಣಕಾಲುಗಳನ್ನು ಹಿಡಿದುಕೊಳ್ಳಿ . 
೩.ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ , ಮಂಡಿಗಳನ್ನು ಹಾಗು ತೊಡೆಗಳನ್ನು ಕ್ರಮವಾಗಿ ಮೇಲಕ್ಕೆತ್ತುತ್ತಾ ಮೇಲೆ ಎಳೆಯಿರಿ . ಕೈಗಳು ನೇರವಾಗಿರಲಿ , ಹಿಂಭಾಗವು ಮೇಲೆದ್ದ ಮೇಲೆ ಹೊಟ್ಟೆಯ ಮೇಲ್ಭಾಗದ ಎದೆ , ಕುತ್ತಿಗೆ ಹಾಗು ತಲೆಯನ್ನು ಸಹ ಮೇಲಕ್ಕೆತ್ತಿರಿ . ನಾಭಿ ಹಾಗು ಹೊಟ್ಟೆಯ ಆಸುಪಾಸಿನ ಭಾಗ ನೆಲದ ಮೇಲೆ ಒರಗಿರಲಿ , ಶರೀರದ ಆಕೃತಿ ಹೆದೆಯೇರಿದ ಧನಸ್ಸಿನಂತೆ ಆಗಿ ಬಿಡುತ್ತದೆ . ಈ ಸ್ಥಿತಿಯಲ್ಲಿ ೧೦ ರಿಂದ ೩೦ ಸೆಕೆಂಡ್ ಗಳವರೆಗೆ ಇರಿ . 
೪. ಉಸಿರನ್ನು ಬಿಡುತ್ತ ಕ್ರಮವಾಗಿ ಮೊದಲಿನ ಸ್ಥಿತಿಗೆ ಬನ್ನಿ , ಶ್ವಾಸ-ಪ್ರಶ್ವಾಸ ಸಾಮಾನ್ಯವಾದ ಮೇಲೆ ಮತ್ತೊಮ್ಮೆ ಮಾಡಿ . ಈ ರೀತಿ ೩ - ೪ ಬರಿ ಮಾಡಿ . 


ಈ ಆಸನದ ಲಾಭಗಳು:
೧.ಸರ್ವೀಕಲ್ , ಸ್ಪ್ಯಾಂಡೊಲೈಟಿಸ್ , ಸೊಂಟನೋವು ಹಾಗು ಉದರ ರೋಗಗಳಲ್ಲಿ ಲಾಭದಾಯಕ ಆಸನ . 
೨. ನಾಭಿ ಜಾರುವುದು ದೂರವಾಗುತ್ತದೆ . 
೩. ಸ್ತ್ರೀಯರ ಮಾಸಿಕ ಸಂಬಂಧೀ ವಿಕ್ರತ್ತಿಗಳು ದೂರವಾಗುತ್ತವೆ . 
೪.ಮುತ್ರಪಿಂಡಗಳು ಬಲಿಷ್ಠವಾಗಿ , ಮೂತ್ರವಿಕಾರಗಳು ದೂರವಾಗುತ್ತವೆ . ಭಯದಿಂದ ಮೂತ್ರಸ್ರಾವ ಆಗುವಂತಹ ಸ್ಥಿತಿಯಲ್ಲಿ ಲಾಭಕರ.


loading...