ದಾವಣಗೆರೆ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-06
Posted by:  Admin

ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ, ಊರು. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ. ದಾವಣಗೆರೆಯ ಮೊದಲಿನ ಹೆಸರು ದವನಗಿರಿ ಅದು ಕಾಲ ಕ್ರಮೇಣ ದಾವಣಗೆರೆ ಆಯಿತು
ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.

ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.

ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಸುತ್ತುವರೆದ ಈ ಊರು, ಪ್ರಮುಖ ಪ್ರದೇಶ. ಬೆಂಗಳೂರಿನಿಂದ ಮುಂಬೈಗೆ ಹೋಗುವ ಯಾತ್ರಿಕರು ದಾವಣಗೆರೆ ಮೂಲಕವೇ ಹೋಗಬೇಕು. ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ 14° 28’ ರೇಖಾಂಶ ಮತ್ತು 75° 59’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 602.5 ಮೀ ಎತ್ತರದಲ್ಲಿದೆ. ದಾವಣಗೆರೆಯಲ್ಲಿ ಬೆಣ್ಣೆ ದೋಸೆ ತುಂಬ ರುಚಿಯಾಗಿರುತ್ತವೆ ಮತ್ತು ವಿಶಿಷ್ಟ. ಸಿಹಿ ತಿನಿಸಾದ ಗುಳ್ಳಡಿಕಿ ಉಂಡಿ ದಾವಣಗೆರೆಯಲ್ಲಿ ಮಾತ್ರ ಮಾಡಲಾಗುತ್ತದೆ ಮತ್ತು ದೊರೆಯುತ್ತದೆ.

ಇತಿಹಾಸ
1997 ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌, ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಡಿಸಿದರು. ಇದಕ್ಕೂ ಮೊದಲು ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು. ದಾವಣಗೆರೆ ಜಿಲ್ಲೆಯು ಆರು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.

ದಾವಣಗೆರೆ ಜಿಲ್ಲೆಯ ತಾಲೂಕುಗಳು
* ದಾವಣಗೆರೆ
* ಹರಿಹರ
* ಹರಪನಹಳ್ಳಿ
* ಜಗಳೂರು
* ಹೊನ್ನಾಳಿ
* ಚನ್ನಗಿರಿ

ಪ್ರೇಕ್ಷಣೀಯ ಸ್ಥಳಗಳು
ಕುಂದವಾಡ ಕೆರೆಯು ನಗರದ ಜನರಿಗೆ ಅತ್ಯಂತ ಹತ್ತಿರವಿರುವ ಸ್ಠಳವಾಗಿದೆ. ಹರಿಹರದ ತುಂಗಭದ್ರೆ ಮತ್ತು ಹರಿಹರೇಶ್ವರ ದೇವಾಲಯ, ಶಾಂತಿಸಾಗರ, ಕೊಂಡಜ್ಜಿಯ ಅರಣ್ಯಧಾಮ,ಬಾಗಳಿ ಕಲ್ಲೇಶ್ವರ ದೇವಾಲಯ, ನೀಲಗುಂದದ ದೇವಾಲಯಗಳು, ಉಕ್ಕಡಗಾತ್ರಿ ಕರಿಬಸವೇಶ್ವರ, (ಅಜ್ಜಯ್ಯ) ದೇವಾಲಯ,ನಂದಿಗುಡಿ ವೃಷಭಮಠ, ಸಂತೇಬೆನ್ನೂರಿನಪುಷ್ಕರಿಣಿ.ದೊಡ್ಡಬಾತಿ ಪವಿತ್ರವನ.ಆನೆಕೊಂಡ ಬಸವೇಶ್ವರ ದೇವಾಲಯ.
* ಲಕ್ಕಮುತ್ತೇನಹಳ್ಳಿಯ ಶ್ರೀ ರಂಗನಾಥ ಸ್ವಾಮಿ ದೆವಾಲಯ(ಚಿತ್ರದುರ್ಗದ ಪಾಳೇಗಾರರ ಕಾಲದ್ದು)
* ಚನ್ನಗಿರಿ ತಾಲೂಕಿನ ಹೋದಿಗೆರೆಯಲ್ಲಿ ಇರುವ ಷಾಜಿ ರಾಜೆ ಬೋಸ್ಲೆ ರವರ(ಶಿವಾಜಿ ಮಹಾರಾಜರ ತಂದೆ) ಸಮಾಧಿ.
* ಮಾಯಕೊಂಡದಲ್ಲಿನ ಶ್ರೀ ಹಿರೇಮದಕರಿ ನಾಯಕರ ಸಮಾಧಿ.
* ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯ.

loading...