ಚಿಕ್ಕಮಗಳೂರು ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

೨೦೦೧ರಂತೆ, ಚಿಕ್ಕಮಗಳೂರು ಜಿಲ್ಲೆಯು ೧೬೨೦ ಪ್ರಾಥಮಿಕ ಶಾಲೆಗಳನ್ನು(೧೫೧೯೨೩ ವಿದ್ಯಾರ್ಥಿಗಳೊಂದಿಗೆ) ಮತ್ತು ೨೩೫ ಮಾಧ್ಯಮಿಕ ಶಾಲೆಗಳನ್ನು(೩೪೬೦೭ ವಿದ್ಯಾರ್ಥಿಗಳೊಂದಿಗೆ) ಹೊಂದಿದೆ. ಚಿಕ್ಕಮಗಳೂರು ತಾಲ್ಲೂಕು ೪೧೪ ಪ್ರಾಥಮಿಕ ಶಾಲೆಗಳೊಂದಿಗೆ(೪೨೭೭೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೮೦ ಪ್ರಾಥಮಿಕ ಶಾಲೆಗಳೊಂದಿಗೆ (೫೮೨೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ೭೪ ಮಾಧ್ಯಮಿಕ ಶಾಲೆಗಳೊಂದಿಗೆ(೯೯೯೦ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೯ ಮಾಧ್ಯಮಿಕ ಶಾಲೆಗಳೊಂದಿಗೆ(೧೪೯೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ.

ಪ್ರೌಢ ಶಿಕ್ಷಣ
೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೪೬ ಪ್ರೌಢ ಶಾಲೆಗಳು (೪೭೧೧ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಿಣವನ್ನು ನೀಡುತ್ತೀವೆ. ಕಡೂರು ತಾಲ್ಲೂಕು ೧೨ ಪ್ರೌಢ ಶಾಲೆಗಳೊಂದಿಗೆ (೧೩೨೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೨ ಪ್ರೌಢ ಶಾಲೆಗಳೊಂದಿಗೆ(೧೬೦ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ

ಪದವಿ ಶಿಕ್ಷಣ
೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪದವಿ ಕಾಲೇಜುಗಳು (೪೬೧೫ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಿಣವನ್ನು ನೀಡುತ್ತೀವೆ. ಈ ಕಾಲೇಜುಗಳು ಕುವೆಂಪು ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿವೆ. ಚಿಕ್ಕಮಗಳೂರು ತಾಲ್ಲೂಕು ೪ ಪದವಿ ಕಾಲೇಜುಗಳೊಂದಿಗೆ (೧೬೪೮ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ತಾಲ್ಲೂಕು ೨ ಮತ್ತು ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕುಗಳು ತಲ ೧ ಪದವಿ ಕಾಲೇಜುಗಳನ್ನು ಹೊಂದಿವೆ.

ತಾಂತ್ರಿಕ ಶಿಕ್ಷಣ
ಇಂಜಿನಿಯರಿಂಗ್: ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಚಿಕ್ಕಮಗಳೂರು ಪಟ್ಟಣದಲ್ಲಿ ಇದೆ. ಇಲ್ಲಿ ಯಾಂತ್ರಿಕ (ಮೆಕ್ಯಾನಿಕಲ್), ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್ ), ಎಲೆಕ್ಟ್ರಾನಿಕ್ಸ್ ಮತ್ತು ಸಂಪರ್ಕ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್), ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಉತ್ಪಾದನೆಯ, ಪರಿಸರ (ಎನ್ವಿರಾನ್ಮೆಂಟಲ್ ) ಮತ್ತು ಸಿವಿಲ್ ವಿಭಾಗಗಳು ಇವೆ. ಈ ಕಾಲೇಜು ಬೆಳಗಾವಿ ನಲ್ಲಿ ಇರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದೆ.

ಪಾಲಿಟೆಕ್ನಿಕ್‍ಗಳು: ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೆಳಗಿನ ಪಾಲಿಟೆಕ್ನಿಕ್‌ಗಳು ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಪಾಲಿಟೆಕ್ನಿಕ್, ಚಿಕ್ಕಮಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಮತ್ತು ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್ ), ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
ಡಿ ಎ ಸಿ ಜಿ, ಚಿಕ್ಕಮಗಳೂರು: ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಆಟೋಮೊಬೈಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
ಎಸ್ ಜೆ ಎಮ್ ಎಮ್ ವಿದ್ಯಾಪೀಠ ಪಾಲಿಟೆಕ್ನಿಕ್, ಬೀರೂರು: ಸಿವಿಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.

ಕೈಗಾರಿಕಾ ತರಬೇತಿ ಸಂಸ್ಥೆಗಳು: ಚಿಕ್ಕಮಗಳೂರಿ ಜಿಲ್ಲೆಯಲ್ಲಿ ಒಟ್ಟು ೭ ಔದ್ಯಮಿಕ ತರಬೇತಿ ಸಂಸ್ಥೆಗಳು ಇವೆ.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚಿಕ್ಕಮಗಳೂರು ತಾಲ್ಲೂಕ್.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕಡೂರು ತಾಲ್ಲೂಕ್.
ಎಸ್. ಡಿ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಸಮ್ಸೇ, ಮೂಡಿಗೆರೆ ತಾಲ್ಲೂಕ್.
ಎಸ್. ಜೆ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಬಾಳೆಹೊನ್ನೂರು, ನರಸಿಂಹರಾಜಪುರ ತಾಲ್ಲೂಕ್.
ಎಸ್. ಜೆ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಬೀರೂರು, ಕಡೂರು ತಾಲ್ಲೂಕ್.
ಕರ್ನಾಟಕ ಕೈಗಾರಿಕಾ ತರಬೇತಿ ಸಂಸ್ಥೆ, ಚಿಕ್ಕಮಗಳೂರು ತಾಲ್ಲೂಕ್.
ಲಕ್ಷ್ಮೀಶಾ ಕೈಗಾರಿಕಾ ತರಬೇತಿ ಸಂಸ್ಥೆ, ದೇವನೂರು, ಕಡೂರು ತಾಲೂಕಿನ.
ಮಾರುತಿ ಕೈಗಾರಿಕಾ ತರಬೇತಿ ಸಂಸ್ಥೆ, ಕಡೂರು ತಾಲ್ಲೂಕ್.
ಎಸ್. ಜೆ. ಎಮ್. ಪದವಿ ಕಾಲೇಜು, ತರೀಕೆರೆ ತಾಲ್ಲೂಕ್.

ವೈದ್ಯಕೀಯ ಶಿಕ್ಷಣ
ಹೊಸ ವೈದ್ಯಕೀಯ ಕಾಲೇಜು ಚಿಕ್ಕಮಗಳೂರು ನಗರಕ್ಕೆ ಮಂಜೂರು ಮಾಡಿಲಾಗಿದೆ ಆದರೆ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಯ ವೈದ್ಯಕೀಯ ಶಿಕ್ಷಣದ ಮೂಲ ಕೊಪ್ಪದ ಅರೋರ್ ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜು. ಈ ಕಾಲೇಜು ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ (ಬಿ ಏ ಎಮ್ ಎಸ್) ಪದವಿ ನೀಡುತ್ತದೆ.

ಸಾರಿಗೆ:

ರಸ್ತೆ
ಚಿಕ್ಕಮಗಳೂರು ಜಿಲ್ಲೆಯ ರಸ್ತೆಗಳು ಸರಿಯಾಗಿ ನಿರ್ವಹಿಸಲ್ಪಡುವ ರಸ್ತೆಗಳ ಪಟ್ಟಿಯಲ್ಲಿ ಬರುವುದಿಲ್ಲ. ದುಸ್ಥಿತಿಯಲ್ಲಿ ಇರುವ ರಸ್ತೆಗಳು ಸ್ವಲ್ಪ ಮಟ್ಟಿಗೆ ಜಿಲ್ಲೆಯ ಅಭಿವೃದ್ಧಿಗ ಅಡ್ಡಿಯಾಗಿವೆ. ಜಿಲ್ಲೆಯು ಉತ್ತಮವಾದ ರೈಲು ಸಂರ್ಪಕ ಜಾಲವನ್ನು ಹೊಂದಿಲ್ಲ. ಜಿಲ್ಲೆಯು ಒಟ್ಟು ೭೨೬೪ ಕೀ. ಮೀ ರಸ್ತೆಯನ್ನು ಹೊಂದಿದೆ. ಜಿಲ್ಲೆಯ ಮೇಲೆ ಕೇವಲ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತದೆ. ರಾಷ್ಟೀಯ ಹೆದ್ದಾರಿ ಎನ್.ಎಚ್.-೧೩(ಶೋಲಾಪೌರದಿಂದ ಮಂಗಳೂರಿಗೆ) ಕೊಪ್ಪ ಮತ್ತು ಶೃಂಗೇರಿ ಮೂಲಕ ಹಾದು ಹೋಗುತ್ತದೆ ಮತ್ತು ರಾಷ್ಟೀಯ ಹೆದ್ದಾರಿ ಎನ್.ಎಚ್.-೨೦೬(ಬೆಂಗಳೂರಿಂದ ಹೋನ್ನವರಗೆ) ಕಡೂರು ಮೂಲಕ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಈಗಿರುವ ರಾಜ್ಯ ಹೆದ್ದಾರಿಗಳಾದ ತರೀಕೆರೆ-ಬೇಲೂರು, ಶೃಂಗೇರಿ-ಹಾಸನ್ ಮತ್ತು ಕಡೂರು-ಮಂಗಳೂರು ಹೆದ್ದಾರಿಗಳನ್ನು ನವೀಕರಿಸುವ ಪ್ರಸ್ತಾಪವಿದೆ.

ರೈಲು
ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲ್ಲುಕುಗಳು ರೈಲ್ವೆ ಮಾರ್ಗಗಳನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಲಕ ಒಟ್ಟು ೧೩೬ ಕೀ.ಮೀ ರೈಲ್ವೆ ಮಾರ್ಗ ಹಾದು ಹೋಗುತ್ತದೆ. ಬೀರೂರು ಜಿಲ್ಲೆಯ ಅತಿದೊಡ್ಡ ಜಂಕ್ಷನ್ ಆಗಿದೆ. ಹೊಸ ರೈಲು ಮಾರ್ಗ ಚಿಕ್ಕಮಗಳೂರನ್ನು ಹುಬ್ಬಳ್ಳಿ-ಬೆಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುತ್ತದೆ, ಚಿಕ್ಕಮಗಳೂರನ್ನು ಬೆಂಗಳೂರು-ಮಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುವ ಹೊಸ ಮಾರ್ಗದ ಕಾರ್ಯ ಆರಂಭವಾಗಿದೆ.

ವಿಮಾನ
ಚಿಕ್ಕಮಗಳೂರಿನಿಂದ ೧೦ ಕೀ.ಮೀ ದೂರದಲ್ಲಿ ಇರುವ ಗೌಡನಹಳ್ಳಿಯಲ್ಲಿ ಸಣ್ಣ ವಿಮಾನ ನಿಲ್ದಾಣ ಇದೆ. ಇದು ಸಣ್ಣ ಗಾತ್ರದ ವಿಮಾನಗಳ ಉಡವಣೆಯ ಸಮಾರ್ಥ್ಯವನ್ನು ಹೊಂದಿದೆ. ಮಂಗಳೂರು , ಹುಬ್ಬಳ್ಳಿ ಮತ್ತು ಬೆಂಗಳೂರು, ಚಿಕ್ಕಮಗಳೂರಿಗೆ ಹತ್ತಿರದ ವಿಮಾನ ನಿಲ್ದಾಣಗಳು.
">

loading...