ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-07
Posted by:  Admin

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕದ ೨೯ ಜಿಲ್ಲೆಗಳಲ್ಲೊಂದು. ಇದನ್ನು ೧೯೮೬ರಲ್ಲಿ ಬೆಂಗಳೂರು ಜಿಲ್ಲೆಯನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಎಂದು ವಿಂಗಡಿಸಿ ರಚಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ೪ ತಾಲೂಕು, ೩೫ ಹೋಬಳಿಗಳು, ೧,೭೧೩ ಹಳ್ಳಿಗಳು, ೯ ಪಟ್ಟಣಗಳು ಮತ್ತು ೨೨೯ ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ.

ವಿಶ್ವವಿದ್ಯಾಲಯ
* ರೈ ತಂತ್ರಜ್ಞಾನ ವಿಶ್ವವಿದ್ಯಾಲಯ, ಕಾಡನೂರು ದೊಡ್ಡಬಳ್ಳಾಪುರ ತಾಲ್ಲೂಕು
* ಗೀತಂ ವಿಶ್ವವಿದ್ಯಾಲಯ, ನಾಗದೇನಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು
* ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್(MBA, ME)
* ಕೊಂಗಾಡಿಯಪ್ಪ ಉನ್ನತ ಶಿಕ್ಷಣ ಕೇಂದ್ರ(MBA, M.Com)

ನಗರ ಸ್ಥಳೀಯ ಸಂಸ್ಥೆಗಳು
* ದೊಡ್ಡಬಳ್ಳಾಪುರ ನಗರಸಭೆ
* ನೆಲಮಂಗಲ ಪುರಸಭೆ
* ದೇವನಹಳ್ಳಿ ಪುರಸಭೆ
* ವಿಜಯಪುರ ಪುಸಸಭೆ
* ಹೊಸಕೋಟೆ ನಗರಸಭೆ

ಯೋಜನಾ ಪ್ರಾಧಿಕಾರ
* ಬೆಂಗಳೂರು ಅಂತರಾರ್ಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ
* ನೆಲಮಂಗಲ ಯೋಜನಾ ಪ್ರಾಧಿಕಾರ
* ಹೋಸಕೊಟೆ ಯೋಜನಾ ಪ್ರಾಧಿಕಾರ

ಜಲಾಯನಯ ಪ್ರದೇಶ
* ಅರ್ಕಾವತಿನದಿ
* ಕಣ್ವ ನದಿ
* ದಕ್ಷಿಣ ಪೀನಾಕಿನಿ ನದಿ
* ಬಂಡಿಹಳ್ಳ
* ಮಾಕಳಿಹಳ್ಳ

ಅಣೆಕಟ್ಟು
* ಸರ್.ಎಂ.ವಿಶ‍್ವೇಶ್ವರಯ್ಯ ಅಣೆಕಟ್ಟು(ಎಸ್.ಎಸ್.ಘಾಟಿ)

ಸಾರಿಗೆ ಇಲಾಖೆ
* ಬೆಂಗಳೂರು ಗ್ರಾಮಾಂತರ ಜಂಟಿ ಆಯುಕ್ತರು
* ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವನಹಳ್ಳಿ
* ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನೆಲಮಂಗಲ

ಕೃಷಿ ಇಲಾಖೆ
* ಬೆಂಗಳೂರು ಗ್ರಾಮಾಂತರ ಉಪನಿರ್ದೇಶಕರು
* ದೊಡ್ಡಬಳ್ಳಾಪುರ ತಾಲ್ಲೂಕು ಸಹಾಯಕ ನಿರ್ದೇಶಕರು
* ನೆಲಮಂಗಲ ತಾಲ್ಲೂಕು ಸಹಾಯಕ ನಿರ್ದೇಶಕರು
* ಹೊಸಕೋಟೆ ತಾಲ್ಲೂಕು ಸಹಾಯಕ ನಿರ್ದೇಶಕರು
* ದೇವನಹಳ್ಳಿ ತಾಲ್ಲೂಕು ಸಹಾಯಕ ನಿರ್ದೇಶಕರು

ಸಂಶೋದನಾ ಕೇಂದ್ರ
* ಕೃಷಿ ವಿಜ್ಞಾನ ಕೇಂದ್ರ. ಹಾಡೋನಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ದೊಡ್ಡಬಳ್ಳಾಪುರ
* ನೆಲಮಂಗಲ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
* ದೇವನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
* ತೂಬಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
* ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
* ಹೊಸಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ

loading...