ತಾಮ್ರದ ಪಾತ್ರೆಯ ನೀರನ್ನು ಏಕೆ ಕುಡಿಯಬೇಕು?

Published on:  2016-12-05
Posted by:  Admin

ನೀರು ನಮ್ಮ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಎಲ್ಲ ಜೀವರಾಶಿಗಳು ನೀರನ್ನೇ ಅವಲಂಬಿಸಿವೆ. ಮುಖ್ಯವಾಗಿ ನೀರನ್ನು ಕುಡಿಯಲು ಬಳಸಲಾಗುತ್ತದೆ. ಕುಡಿಯಲು ಎಂದಾಕ್ಷಣ ನಮ್ಮ ಹಿರಿಯರು ಹೇಳುತಿದ್ದ ಮಾತು ನೆನಪಿಗೆ ಬರುತ್ತದೆ. ನೀರನ್ನು ತಾಮ್ರ ದ ಬಿಂದಿಗೆ ತಂಬಿಗೆ ಲೋಟಗಳಲ್ಲಿ ಶೇಖರಿಸಿ ಕುಡಿಯಬೇಕು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಅದು ಅವರಿಗಿದ್ದ ಅರೋಗ್ಯ ಕಾಳಜಿಯನ್ನು ತೋರಿಸುತಿತ್ತು, ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ನಮಗೆ ಕುಡಿ ಎಂದು ಹೇಳಲು  ನಾನಾ ಕಾರಣಗಳು ಇದ್ದವು ಆದರೆ ಆ ಕಾರಣಗಳು ನಾವು ತಿಳಿದುಕೊಳ್ಳದೆ ಅಸಡ್ಡೆ ಮಾಡಿದೆವು. 

ಇಂದು ವಿಜ್ಞಾನ ಹೇಳಿದರೆ ಮಾತ್ರ ನಾವು ಒಪ್ಪಿಕೊಳ್ಳುವ ಮನಸ್ಥಿತಿಗೆ ಬಂದಿದ್ದೇವೆ. ಇಂದು ಹಿರಿಯರ ಮಾತಿನ ಮಹತ್ವ ನಮಗೆ ತಿಳಿಯುತ್ತಿದೆ. ಹಾಗೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಹಿರಿಯರಿಗೆ ಗೊತ್ತಿತ್ತು. ಕಫ, ಪಿತ್ತ ಮತ್ತು ವಾತವನ್ನು ಸಮತೋಲನದಲ್ಲಿಡುವ ಗುಣವನ್ನು ತಾಮ್ರವು ಹೊಂದಿದ್ದು ದೇಹಕ್ಕೆ ಮಾರಕವಾಗಿರುವ ದೋಷಗಳನ್ನು ನಿಯಂತ್ರಣದಲ್ಲಿಡಲು ತಾಮ್ರದ ಪಾತ್ರೆಯಲ್ಲಿರುವ ನೀರನ್ನು ಕುಡಿಯಬೇಕು ಎಂಬುದಾಗಿ ಹಿರಿಯರು ಹೇಳುತ್ತಿದ್ದರು, ಕನಿಷ್ಠ ಎಂಟು ಘಂಟೆಗಳಾದರು ನೀರನ್ನು ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟು ಕುಡಿದರೆ ಲಾಭ ಹೆಚ್ಚು. ಹೀಗೆ ಕುಡಿಯುವುದರಿಂದ ಆಗುವ ಪ್ರಯೋಜನವನ್ನು ತಿಳಿಯೋಣ ಬನ್ನಿ.


ಬ್ಯಾಕ್ಟೀರಿಯಾ ವಿರುದ್ದ ಹೋರಾಡುತ್ತದೆ:
ತಾಮ್ರವು ನೀರನ್ನು ಶುದ್ದೀಕರಿಸುವ ಗುಣವನ್ನು ಹೊಂದಿದೆ ಹಾಗೆ ನೀರಿನಲ್ಲಿ ಯಾವುದೇ ಬ್ಯಾಕ್ಟಿರಿಯಾಗಲು ಬೆಳೆಯದಂತೆ ನೋಡಿಕೊಳುತ್ತದೆ, ನೈಸರ್ಗಿಕವಾಗಿ ತಾಮ್ರವು ನೀರನ್ನು ಶುದ್ದಿಗೊಳಿಸುತ್ತದೆ.


ಥೈರಾಯ್ಡ್ ಕಾಯಿಲೆ ನಿಯಂತ್ರಣ:
ಥೈರಾಯ್ಡ್ ಕಾಯಿಲೆಯು ಉಲ್ಬಣಿಸಲು ಪ್ರಮುಖ ಕಾರಣ ದೇಹದಲ್ಲಿ ತಾಮ್ರದ ಮಟ್ಟ ತುಂಬಾ ಕಡಿಮೆ ಇರುವುದರಿಂದ, ತಾಮ್ರದ ಕೊರತೆಯಿಂದಾಗಿ ಗ್ರಂಥಿಗಳ ಕಾರ್ಯಕ್ಕೆ ತೊಂದರೆಯಾಗಬಹುದು.ಪಾತ್ರೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಕುಡಿದರೆ ಈ ಸಮಸ್ಯೆ ನಿವಾರಣೆಯಾಗಿ, ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.


ಸಂಧಿವಾತ ಮತ್ತು  ಕೀಲುಗಳ ಊತ ಶಮನಕ್ಕಾಗಿ :
ತಾಮ್ರದಲ್ಲಿ ವಿಶೇಷವಾಗಿ ಉರಿಯೂತ ಕಡಿಮೆ ಮಾಡುವ ಗುಣಗಳು ಹೆಚ್ಚಾಗಿವೆ.ಈ ವಿಶೇಷ ಗುಣದಿಂದ ಗಂಟುಗಳಲ್ಲಿ ಸಂಧಿವಾತ ಮತ್ತು ಕೀಲುಗಳ ಊತ ನೋವನ್ನು ಕಡಿಮೆ ಮಾಡುತ್ತದೆ.


ಚರ್ಮದ ಹೊಳಪಿಗಾಗಿ:
ಆಯುರ್ವೇದದಲ್ಲಿ ಉಲ್ಲೇಖಿಸಿದಂತೆ ಪ್ರತಿ ದಿನ ನಾವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತಾಮ್ರದ ಪಾತ್ರೆಯಲ್ಲಿ ಹಾಕಿಟ್ಟ ನೀರನ್ನು ಕುಡಿಯುವುದರಿಂದ ಮೊಡವೆಗಳು ಕಡಿಮೆಯಾಗಿ ತ್ವಚೆಯು ಕಾಂತಿಯನ್ನು ಪಡೆಯುತ್ತದೆ.


ವಯಸ್ಸಾಗುವುದನ್ನು ನಿಧಾನವಾಗಿಸುತ್ತದೆ:
ಸಹಜವಾಗಿ ನಮಗೆ ವಯಸ್ಸಾದಂತೆ ನಮ್ಮ ಮುಖದಲ್ಲಿ ನೆರಿಗೆಗಳು ಕಾಣಿಸಿ ಕೊಳ್ಳುತ್ತವೆ. ಅದನ್ನು ಹತೋಟಿಯಲ್ಲಿಡಲು ತಾಮ್ರವು ನೈಸರ್ಗಿಕ ಪರಿಹಾರವಾಗಿದೆ. ಆ್ಯಂಟಿ ಆಕ್ಸಿಡೆಂಟ್ ಗುಣ ಮತ್ತು ಜೀವಕೋಶ ಬೆಳೆಸುವ ಗುಣದಿಂದಾಗಿ ಫ್ರೀ  ರಾಡಿಕಲ್ ವಿರುದ್ಧ ತಾಮ್ರವು ಹೋರಾಡುತ್ತದೆ. ನೆರಿಗೆ ಉಂಟಾಗುವುದನ್ನು ತಡೆದು ಹೊಸ ಹಾಗೂ ಆರೋಗ್ಯಕರ ತ್ವಚೆ ನಿರ್ಮಿಸಿ, ಹಳೆಯ ಮತ್ತು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ.


ತೂಕ ಇಳಿಸಲು:
ನಾವು ತಾಮ್ರದ ಪಾತ್ರೆಯಲ್ಲಿ ಶೇಖರಿಟ್ಟಿಸಿರುವ ನೀರನ್ನು ನಿಯಮಿತವಾಗಿ ಕುಡಿಯಲು ಪ್ರಯತ್ನಿಸಿದಾಗ . ನಮ್ಮ ಜೀರ್ಣಕ್ರಿಯೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಲ್ಲದೆ ತಾಮ್ರವು ನಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಿ ಅದು ತುಂಬಾ ಪರಿಣಾಮಕಾರಿಯಾಗಿ ಹೊರಹಾಕುತ್ತದೆ.


ರಕ್ತಹೀನತೆ ತಡೆಯುತ್ತದೆ:
ನಮ್ಮ ದೇಹದಲ್ಲಿ ಹೆಚ್ಚಿನ ಕಾರ್ಯಗಳಿಗೆ ತಾಮ್ರವು ಬೇಕಾಗುತ್ತದೆ, ಜೀವಕೋಶ ನಿರ್ಮಾಣ ಹಾಗು ಕಬ್ಬಿಣದ ಅಂಶವನ್ನು ಹೀರುವಿಕೆಯಲ್ಲಿ ತಾಮ್ರವು ಬೇಕಾಗಿರುತ್ತದೆ. ಇದರೊಟ್ಟಿಗೆ ರಕ್ತಹೀನತೆಯನ್ನು ತಡೆಗಟ್ಟುತ್ತದೆ.


ಕ್ಯಾನ್ಸರ್ ವಿರುದ್ಧ ರಕ್ಷಣೆ:
ತಾಮ್ರದಲ್ಲಿ ಅದ್ಬುತವಾದ ಆಂಟಿ ಆಕ್ಸಿಡೆಂಟ್‍ ಗುಣಗಳು ಇವೆ. ಇದು ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗುವುದನ್ನು ಕುಂಠಿತಗೊಳಿಸುತ್ತದೆ.


ಗರ್ಭಿಣಿಯಾ ರೋಗ ನಿರೋಧಕ ಶಕ್ತಿಗಾಗಿ:
 ಗರ್ಭಿಣಿಯಾಗಿರುವಾಗ ರೋಗನಿರೋಧಕ ಶಕ್ತಿಯು ಕಡಿಮೆಯಾಗುವ ಸಂಭವವಿರುತ್ತದೆ, ಆ ಸಂದರ್ಭದಲ್ಲಿ ಗರ್ಭಿಣಿಯು ಹಲವಾರು  ರೋಗಗಳಿಗೆ ತುತ್ತಾಗಬಹುದು. ಅದಕ್ಕಾಗಿ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದರಿಂದ ಗರ್ಭಿಣಿಯ ರೋಗನಿರೋಧಕ ಶಕ್ತಿಯು ಹೆಚ್ಚಾಗಿ ಗರ್ಭಿಣಿಯನ್ನು ಹಾಗು ಮಗುವನ್ನು ಕಾಪಾಡುತ್ತದೆ.


ಅನಿಮಿಯಾವನ್ನು ನಿವಾರಿಸುತ್ತದೆ:
ತಾಮ್ರವು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಕರಿಸುತ್ತದೆ. ರಕ್ತದ ಕೊರತೆ ಉಂಟಾದಾಗ ಅನಿಮಿಯಾ ಕಾಯಿಲೆ ಉಂಟಾಗುತ್ತದೆ. ಇದನ್ನು ತಡೆಗಟ್ಟಲು ಕಬ್ಬಿಣದ ಅಂಶವನ್ನು ಸಮ ಪ್ರಮಾಣದಲ್ಲಿ ಇಡಲು ತಾಮ್ರವು ಸ್ವಲ್ಪ ಪ್ರಮಾಣದಲ್ಲಿ ಬೇಕಾಗುತ್ತದೆ.


ಮೆದುಳನ್ನು ಉತ್ತೇಜಿಸುತ್ತದೆ:
ಮೆದುಳು ಆದೇಶಗಳನ್ನು ಒಂದು ನರಕೋಶದಿಂದ ಇನ್ನೊಂದು ನರಕೋಶಗಳಿಗೆ ರವಾನಿಸುತ್ತದೆ. ಈ ನರಕೋಶಗಳು myelin  ಎಂಬ ಕವಚವನ್ನು ಹೊಂದಿವೆ. ಈ myelin  ಉತ್ತಮವಾದ  ವಾಹಕವಾಗಿದೆ ಹಾಗು ಆದೇಶಗಳನ್ನು ರವಾನಿಸುವುದರಲ್ಲಿ ಸಹಕಾರಿಯಾಗಿದೆ. ತಾಮ್ರವು ಫಾಸ್ಫೋಲಿಪಿಡ್ ಗಳ ಸಂಶ್ಲೇಷಣೆಗೆ ಅಗತ್ಯವಾಗಿದೆ. ಫಾಸ್ಫೋಲಿಪಿಡ್ ಗಳು  myelin  ರಚನೆಗೆ ಅಗತ್ಯವಾಗಿದೆ. ಹೀಗೆ ತಾಮ್ರವು ಮೆದುಳಿಗೆ ಅತ್ಯಾವಶಕವಾಗಿದೆ.

loading...