ವಿದ್ಯಾ ಸಿರಿ ಯೋಜನೆ :

Published on:  2016-10-19
Posted by:  Admin

ವಿದ್ಯಾ ಸಿರಿ ಯೋಜನೆ :

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಊಟ ಹಾಗು ವಸತಿಗಾಗಿ ಅನುಕೂಲ ಕಲ್ಪಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಯೋಜನೆ ಜಾರಿಗೊಳಿಸಲಾಗಿದೆ

 

ವಿದ್ಯಾಸಿರಿ ಯೋಜನೆ 2013 ಅಕ್ಟೋಬರ್ 1 ರಿಂದ ರಾಜ್ಯದಾದ್ಯಂತ ಜಾರಿಗೊಂಡಿದೆ.

 

ಯೋಜನೆಯ ಮೂಲಕ 32 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿದೆ

 

ವಿದ್ಯಾಸಿರಿ ಯೋಜನೆಯಡಿ ಮಾಸಿಕ 15೦೦ ರೂಪಾಯಿಗಳಂತೆ ಹತ್ತು ತಿಂಗಳು ಸಹಾಯ ಧನ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ

 

ಪ್ರಸ್ತುತ ಯೋಜನೆಗೆ 75 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ

 

ಯೋಜನೆಯ ವಿಶೇಷತೆಗಳು :

 

) ಕುಟುಂಬದ ಇಬ್ಬರು ಗಂಡು ಮಕ್ಕಳಿಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.

 

) ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆ ನಿರ್ಬಂಧ ಇಲ್ಲ .

 

) 2014 - 2015 ಸಾಲಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಸಹ ಯೋಜನೆ ವಿಸ್ತರಿಸಲಾಗಿದೆ.

 

) ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ಹಾಗು ಪಿ.ಹೆಚ್.ಡಿ ಮಾಡುತ್ತಿರುವ 50 ಸಾವಿರ ವಿದ್ಯಾರ್ಥಿಗಳಿಗೂ ಯೋಜನೆ ವಿಸ್ತರಿಸಲಾಗಿದೆ

 

) ವಾರ್ಷಿಕ ವರಮಾನ ಪ್ರವರ್ಗ - 1 ವಿದ್ಯಾರ್ಥಿಗಳು 2.5 ಲಕ್ಷ ರೂಪಾಯಿಗಳು , ಪ್ರವರ್ಗ - 2 , 3ಬಿ  ವಿದ್ಯಾರ್ಥಿಗಳಿಗೆ 1 ಲಕ್ಷ  ರೂಪಾಯಿ , ಜೊತೆಗೆ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಾಗಿರಬೇಕು

 

ಸೊರ್ಸ್ : ಸ್ಪರ್ಧಾತ್ಮಕ ಪುಸ್ತಕಗಳು   

loading...