ರಾಮ ಭಕ್ತ ಹನುಮ ಜಯಂತಿಯ ಮಹತ್ವ

Published on:  2016-12-12
Posted by:  Admin

ಚೈತ್ರ ಮಾಸ ಶುಕ್ಲ ಪಕ್ಷದ 15 ನೇ ದಿನ ಎಲ್ಲ ಭಾರತೀಯರು ಹನುಮ ಜಯಂತಿಯನ್ನು ಆಚರಿಸುತ್ತಾರೆ. ರಾಮನ ಪರಮ ಭಕ್ತ, ವಾಯು ಪುತ್ರ ಶ್ರೀ ಆಂಜನೇಯ, ಸಕಲ ಕಷ್ಟಗಳನ್ನು ಪರಿಹರಿಸುವ ದೇವರು. ಹನುಮ ಜಯಂತಿ ಹಿಂದುಗಳಿಗೆ ಪ್ರಮುಖವಾದ ಹಬ್ಬ. ಭಕ್ತಿಗೆ ಇನ್ನೊಂದು ಹೆಸರು ಆಂಜನೇಯ, ರಾಮಾಯಣದಲ್ಲಿ ಶ್ರೀ ರಾಮನ ಪರಮ ಭಕ್ತ, ಅವನ ಜೊತೆಯಲ್ಲೇ ಸದಾ ಕಾಲ ಇರುವ ಹನುಮ ಶ್ರೀ ರಾಮ ಹೇಳಿದ ಹಾಗೆ ನಡೆದುಕೊಳ್ಳುವವ.


ಭಗವಾನ್ ಹನುಮಾನ ವಾನರಲ್ಲೇ ಅತೀ ಶ್ರೇಷ್ಠ, ಭಕ್ತಿ, ಯುಕ್ತಿ, ಬಲಶಾಲಿ ಉಳ್ಳವನು. ಶ್ರೀ ರಾಮನ ಆಶೀರ್ವಾದ ಒಂದಿದ್ದರೆ ಈ ಜಗತ್ತನ್ನೇ ಗೆಲ್ಲುತ್ತೇನೆ ಅನ್ನುವ ಅದ್ಭುತ ಮತ್ತು ಪರಾಕ್ರಮಶಾಲಿ ಭಗವಾನ್ ಶ್ರೀ ಆಂಜನೇಯ. ಅವನ ವೇಗವು ಎಷ್ಟಿತ್ತೆಂದರೆ ಸಂಜೀವಿನಿ ಶಿಖರವನ್ನೇ ಅಂಗೈಯಲ್ಲಿ ತಂದಂಥ ಪರಾಕ್ರಮಶಾಲಿ. ಹನುಮ ಜಯಂತಿಯಂದು ಪ್ರತಿಯೊಬ್ಬರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ, ಪೂಜೆ ಸಲ್ಲಿಸಿ, ಕುಂಕುಮ, ವಸ್ತ್ರ ಅರ್ಪಿಸಿ, ಎಲ್ಲ ದುಷ್ಟ ಶಕ್ತಿಗಳಿಂದ ಕಾಪಾಡು ಎಂದು ಬೇಡಿಕೊಳ್ಳುತ್ತಾರೆ. ಪುರಾಣಗಳಲ್ಲಿ ಹೇಳುವ ಪ್ರಕಾರ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಶಕ್ತಿ ಶ್ರೀ ಆಂಜನೇಯನಿಗೆ ಇದೆ. ಅವನ ಕೃಪಾಕಟಾಷ್ಕ ಒಂದಿದ್ದರೆ ಈ ಜಗತ್ತಿನಲ್ಲಿ ಯಾವುದೇ ಕೆಟ್ಟ ಶಕ್ತಿಗಳು ಅವನ ಭಕ್ತರಿಗೆ ಏನು ಮಾಡಲಾರವು.


ಹನುಮಾನ್ ಚಾಲೀಸಾ: 16 ನೇ ಶತಮಾನದಲ್ಲಿ ತುಳಸಿದಾಸರು ಬರೆದ ಹನುಮಾನ್ ಚಾಲೀಸಾ 40 ಪದ್ಯಗಳನ್ನು ಹೊಂದಿದ್ದು, ಅವಧಿ ಎಂಬ ಭಾಷೆಯಲ್ಲಿ ಬರೆಯಲಾಗಿದೆ. ಪ್ರತಿಯೊಬ್ಬರೂ ಹನುಮಾನ್ ಚಾಲೀಸಾ ಪಠಣ ಮಾಡುವುದು ಸಾಮಾನ್ಯ ಧಾರ್ಮಿಕ ಆಚರಣೆಯಾಗಿದೆ, ಬಹಳ ಜನಪ್ರೀಯ ಶ್ಲೋಕಗಳಲ್ಲಿ ಹನುಮಾನ್ ಚಾಲೀಸಾ ಕೂಡ ಒಂದು.

loading...