ಶ್ರೀಮುರಳಿಯ ಮಫ್ತಿ ಟೀಸರ್ ನೋಡಿದಿರಾ?

Published on:  2016-12-20
Posted by:  Raksha

ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಮುರಳಿ, ಕನ್ನಡ ಚಿತ್ರರಂಗ ಮರೆಯಲಾರದಂತಹ ಸಿನಿಮಾ ಚಂದ್ರ ಚಕೋರಿ ಯಶಸ್ಸಿನ ನಂತರ ಹಲವಾರು ಚಿತ್ರಗಳನ್ನ ಮಾಡಿ ಚಿತ್ರರಂಗದಲ್ಲಿ ಒಬ್ಬ ಉತ್ತಮ ನಟ ಎನಿಸಿಕೊಂಡರು. ನಂತರ ಸುಮಾರು ಚಿತ್ರಗಳು ಅವರ ಕೈ ಹಿಡಿಯಲಿಲ್ಲ. ೨೦೧೪ ರಲ್ಲಿ ಬಂದ ಉಗ್ರಂ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಬೇರೆ ರೀತಿಯ ಟ್ರೆಂಡ್ಸೆಟ್ ಮಾಡಿತು.

ಶ್ರೀಮುರಳಿಗೆ ಉಗ್ರಂ ಚಿತ್ರದಿಂದ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಯ್ತು. ಅವರಿಗೆ ಒಳ್ಳೆಯ ಅವಕಾಶಗಳು ಒದಗಿ ಬಂದವು. ಉಗ್ರಂ ಚಿತ್ರದ ಯಶಸ್ಸಿನ ನಂತರ ಮತ್ತೆ ಬೇರೆ ರೀತಿಯ ಕಥೆಗಳನ್ನೇ ಹುಡುಕುತ್ತ ಒಳ್ಳೆಯ ಸಿನಿಮಾಗಳನ್ನ ಕೊಟ್ಟರು. 

ರಥಾವರದ ಯಶಸ್ಸಿನ ನಂತರ ಶ್ರೀಮುರಳಿ ಮಫ್ತಿ ಚಿತ್ರಕ್ಕೆ ಚಾಲನೆ ನೀಡಿದರು. ಶ್ರೀಮುರಳಿ ಹುಟ್ಟು ಹಬ್ಬದಂದು ಬಿಡುಗಡೆಯಾದ ಮಫ್ತಿ ಚಿತ್ರದ ಟೀಸರ್ ಬಹಳ ಚೆನ್ನಾಗಿ ಮೂಡಿಬಂದಿದೆ. ಡಾ. ಶಿವರಾಜಕುಮಾರ್ ಜೊತೆ ಶ್ರೀಮುರಳಿ ತೆರೆಯನ್ನು ಹಂಚಿಕೊಂಡಿದ್ದು, ಇವರಿಬ್ಬರ ಆ ಜೋಡಿ ಹೇಗೆ ಇರುತ್ತೆ ಏನುವ ಕುತೂಹಲ.

ಶ್ರೀಮುರಳಿ, ಡಾ. ಶಿವರಾಜಕುಮಾರ್, ಶಾನ್ವಿ ಶ್ರೀವತ್ಸವ, ವಸಿಷ್ಠ ಸಿಂಹ, ದೇವರಾಜ್, ಚಿಕ್ಕಣ್ಣ ಹೀಗೆ ಬಹು ತಾರಾಗಣವಿರುವ ಚಿತ್ರ. ರವಿ ಬಸ್ರುರ್ ರವರ ಸಂಗೀತವಿರುವ ಈ ಚಿತ್ರಕ್ಕೆ ನಾಥನ್ ರವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವೂ ಕೂಡ ಶ್ರೀಮುರಳಿಗೆ ಒಳ್ಳೆಯ ಹೆಸರು ತಂದು ಕೊಡಲಿ ಎನ್ನುವುದು ನಮ್ಮೆಲ್ಲರ ಆಶಯ.  ಟೀಸರ್ ಗಾಗಿ ಇಲ್ಲಿ ಕ್ಲಿಕ್ಕಿಸಿ.

loading...