ಸಿದ್ಧಾಸನ ಮಾಡುವ ವಿಧಾನ ಹಾಗು ಅದರ ಉಪಯೋಗಗಳು

Published on:  2016-11-13
Posted by:  Admin

ಮಾಡುವ ವಿಧಾನ:

ದಂಡಾಸನದಲ್ಲಿ ಕುಳಿತು ಎಡಗಾಲನ್ನು ಮಡಿಚಿ ಹಿಮ್ಮಡಿಯನ್ನು ಗುದ ಹಾಗು ಉಪಾಸ್ತೇನ್ದ್ರಿಯದ ಮಧ್ಯಭಾಗದಲ್ಲಿ ಇರಿಸಿ. ಬಲಗಾಲಿನ ಹಿಮ್ಮಡಿಯನ್ನು ಉಪಸ್ಥೆನ್ದ್ರಿಯಾದ ಮೇಲಿನ ಭಾಗದಲ್ಲಿ ಸ್ಥಿರಗೊಳಿಸಿ. ಎಡಗಾಲಿನ ಗಂಟಿನ ಮೇಲೆ ಬಲಗಾಲಿನ ಗಂಟು ಬರಬೇಕು. ಪಾದಗಳು, ತೊಡೆ ಹಾಗು ಮೀನಖಂಡಗಳನ್ನು ಮದ್ಯದಲ್ಲಿರುವಂತೆ ಇರಿಸಿ .

ಮಂಡಿಗಳು ನೆಲದ ಮೇಲೆ ನೆಲೆಗೊಂಡಿರಲಿ. ಎರಡೂ ಕೈಗಳು ಜ್ಞಾನಮುದ್ರೆ (ಹೆಬ್ಬೆರಳು ಮತ್ತು ತರ್ಜನಿ - ತೋರು ಬೆರಳುಗಳ ಅಗ್ರಭಾಗಗಳು ಸ್ಪರ್ಶಿಸುತ್ತವೆ, ಉಳಿದ ಮೂರೂ ಬೆರಳು ನೇರವಾಗಿ ಇರುವಂತೆ) ಸ್ಥಿತಿಯಲ್ಲಿ ಮಂಡಿಗಳ ಮೇಲಿರಲಿ. ಬೆನ್ನುಮೂಳೆ(ಮೇರುದಂಡಂ) ನೇರವಾಗಿರಲಿ, ಕಣ್ಣುಗಳನ್ನು ಮುಚ್ಚಿ ಭೂಮಧ್ಯದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ.


ಕೃಪೆ Pinterest

ಆಸನದಿಂದ ಆಗುವ ಲಾಭಗಳು :

. ಸಿದ್ದರಿಂದ ಸೇವಿತವಾದುದರಿಂದ ಇದು ಸಿದ್ಧಾಸನವಾಗಿದೆ. ಬ್ರಹ್ಮಚರ್ಯ ರಕ್ಷಣೆ ಮಾಡಿ ಊರ್ದ್ವರೇತನ್ನಾಗಿಸುತ್ತದೆ.

. ಕಾಮದ ವೇಗವನ್ನು ಶಾಂತಗೊಳಿಸಿ ಮನಸ್ಸಿನ ಚಂಚಲತೆಯನ್ನು ದೂರ ಮಾಡುತ್ತದೆ. ಕುಂಡಲಿನಿ ಜಾಗರಣಕ್ಕಾಗಿ ಇದು ಉತ್ತಮ ಆಸನ.

. ಮೂಲವ್ಯಾಧಿ ಹಾಗು ಯೌನ ರೋಗಗಲ್ಲಿ ಲಾಭಪ್ರದ.

loading...