ಪ್ರಧಾನಮಂತ್ರಿ ಜನ - ಧನ ಯೋಜನೆ(PMJDY) ಕರ್ನಾಟಕದಲ್ಲಿ – 2014

Published on:  2016-10-18
Posted by:  Admin

ಪ್ರಧಾನಮಂತ್ರಿ ಜನ - ಧನ ಯೋಜನೆ(PMJDY) ಕರ್ನಾಟಕದಲ್ಲಿ – 2014

ಯೋಜನೆಯು 28 ಆಗಸ್ಟ್ 2014 ರಂದು ಆರಂಭವಾಯಿತು.

ಯೋಜನೆಯ ದ್ಯೇಯ ವಾಕ್ಯ : ಮೇರುಖಾತಾ - ಭಾಗ್ಯ ವಿಧಾತ ಎಂಬುದಾಗಿದೆ.


ಯೋಜನೆ ಮತ್ತು ವೈಶಿಷ್ಟ್ಯತೆಗಳು :

* ಯಾವುದೇ ಕನಿಷ್ಟ ಮೊತ್ತವಿಲ್ಲದೆ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಬಹುದು . ಖಾತೆ ತೆರೆಯಲು ಯಾವುದೇ ಶುಲ್ಕವೂ ಇರುವುದಿಲ್ಲ. ಪ್ರತಿಯೊಬ್ಬರೂ ಉಳಿತಾಯದ ಮಾರ್ಗೋಪಾಯ ಕಂಡುಕೊಳ್ಳಬಹುದು. ಬಡವರು ಲೇವಾದೇವಿಗಾರರಿಂದ ಸಾಲ ಪಡೆದು ಹೆಚ್ಚು ಬಡ್ಡಿ ನೀಡಿ ಬಡತನದಲ್ಲೇ ಬಳಲುವುದರಿಂದ , ಅಧಿಕ ಬಡ್ಡಿ ಸಾಲದ ಕೂಪದಿಂದ ಸುಲಭದಲ್ಲಿ ಬಿಡುಗಡೆ ಪಡೆಯಬಹುದು. ಮನೆಯಲ್ಲಿ ಅಸುರಕ್ಷಿತವಾಗಿ ಹಣ ಇಟ್ಟುಕೊಳ್ಳುವುದರ ಬದಲಾಗಿ ಸುರಕ್ಷಿತವಾಗಿ ಬ್ಯಾಂಕಿನಲ್ಲಿ ಇಟ್ಟುಕೊಳ್ಳಬಹುದು. ಹಾಗೆ ಇಟ್ಟ ಹಣಕ್ಕೆ ಬಡ್ಡಿ ಕೂಡ ಪಡೆಯಬಹುದು.


* ಅನಕ್ಷರಸ್ಥರಿಗೆ ರೂಪೇ ಡೆಬಿಟ್ ಕಾರ್ಡ್ ವ್ಯವಹಾರ ಕಠಿಣವಾಗಿರುವುದರಿಂದ ಅದನ್ನು ನೀಡುವಾಗ ಅದರ ಸುರಕ್ಷತೆ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು ಮಾರ್ಗದರ್ಶನ ನೀಡುತ್ತಾರೆ. ಜನಧನ ಯೋಜನೆಯಲ್ಲಿ ಜಂಟಿ ಖಾತೆ ಸಹ ತೆರೆಯಬಹುದು . ಯಾವುದೇ ಶಾಖೆಯಲ್ಲಾದರೂ ಖಾತೆ ತೆರೆಯಬಹುದು . ಬ್ಯಾಂಕನ ಒಂದು ಶಾಖೆಯಿಂದ ಬೇರೊಂದು ಶಾಖೆಗೆ ವರ್ಗಾವಣೆ ಮಾಡಬಹುದು 10 ವರ್ಷ ಮೇಲ್ಪಟ್ಟ ವಯಸ್ಸಿನವರು ಜನಧನ ಯೋಜನೆ ಖಾತೆ ತೆರೆಯಬಹುದು.


* ಈಗಾಗಲೇ ಯಾವುದೇ ಬ್ಯಾಂಕಿನಲ್ಲಿ ಖಾತೆ ಇರುವವರು ಹೊಸದಾಗಿ ಜನಧನ ಖಾತೆ ತೆರೆಯುವ ಅವಶ್ಯಕತೆ ಇರುವುದಿಲ್ಲ . ಇರುವ ಖಾತೆಗೆ ರೂಪೇ ಕಾರ್ಡ್ , ವಿಮ ಸೌಲಭ್ಯ ವಿಸ್ತರಿಸಲಾಗುತ್ತದೆ. ಅವರ ಬ್ಯಾಂಕ್ ವ್ಯವಹಾರ ತೃಪ್ತಿಕರವಾಗಿದ್ದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ .


* ಜನಧನ ಖಾತೆಗೆ ಚೆಕ್ ಸೌಲಭ್ಯ ಪಡೆಯಬಹುದು . ಆದರೆ ಖಾತೆಯಲ್ಲಿ ಕನಿಷ್ಟ ಮೊತ್ತ ಇರುವಂತೆ ನೋಡಿಕೊಳ್ಳಬೇಕು . ಉಳಿತಾಯ ಖಾತೆಯಲ್ಲಿ ಇಡುವ ಹಣಕ್ಕೆ ವಾರ್ಷಿಕ ಶೇ 4 ಬಡ್ಡಿ ನೀಡಲಾಗುತ್ತದೆ. ಓವೆರ್ ಡ್ರಾಫ್ಟ್ ಸೌಲಭ್ಯಕ್ಕೆ ಶೇ 12 ರಷ್ಟು ಬಡ್ಡಿ ವಿಧಿಸಲಾಗುತ್ತದೆ

   

* ಜನಧನ ಖಾತೆ ತೆಗೆಯಲು ಆಧಾರ ಕಾರ್ಡ್ ಇದ್ದಾರೆ ಸಾಕು . ಬೇರಾವ ದಾಖಲೆಗಳ ಅವಶ್ಯಕತೆ ಇಲ್ಲ . ವಿಳಾಸ ಬದಲಾಗಿದ್ದಲ್ಲಿ ಸ್ವದ್ರಢೀಕರಣ ಸಾಕು. ಆಧಾರ್ ಕಾರ್ಡ್ ಇಲ್ಲದಿದ್ದರೆ , ಮತದಾರರ ಗುರುತಿನ ಚೀಟಿ , ಡ್ರೈವಿಂಗ್ ಲೈಸೆನ್ಸ್ , ಪ್ಯಾನ್ ಕಾರ್ಡ್ , ಪಾಸ್ಪೋರ್ಟ್ ಆಗಬಹುದು. ಇವ್ಯಾವುವೂ ಇಲ್ಲದಿದ್ದರೆ ಸರ್ಕಾರ / ಸರ್ಕಾರೀ ಸಂಸ್ಥೆ ವಿತರಿಸಿದ ಚೀಟಿ / ಫೋಟೋ ಸಹಿತ ಪಾತ್ರಕ್ಕಾದರೆ ಗೆಜೆಟೆಡ್ ಅಧಿಕಾರಿ ದ್ರಢೀಕರಣ ಇರಬೇಕು.


ರೂಪೇ ಡೆಬಿಟ್ ಕಾರ್ಡ್ :

* ರೂಪೇ ಡೆಬಿಟ್ ಕಾರ್ಡ್ ಸೌಲಭ್ಯ ಪಡೆಯಬಹುದು , ವೀಸಾ ಮಾಸ್ಟರ್ ಕಾರ್ಡಗಳಿಗೆ ಪರ್ಯಾಯವಾಗಿ ಆರಂಭಿಸಿರುವ ಭಾರತೀಯ ಡೆಬಿಟ್ ಕಾರ್ಡ್ ಇದಾಗಿದೆ . ಆದರೆ 45 ದಿನಗಳಲ್ಲಿ ಒಮ್ಮೆಯಾದರೂ ಇದನ್ನು ಬಳಸಬೇಕಾಗಿರುತ್ತದೆ.


* ಎಲ್ಲ ಖಾತೆದಾರರಿಗೂ ಒಂದು ಲಕ್ಷದವರೆಗೆ ಅಪಘಾತ ವಿಮೆ ಮತ್ತು ಮೂವತ್ತು ಸಾವಿರದವರೆಗೆ ಜೀವ ವಿಮೆ ಅವಕಾಶ ಕಲ್ಪಿಸಲಾಗಿದೆ . ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ನೀರ ಸೌಲಭ್ಯ ವರ್ಗಾವಣೆಗೆ ಇದು ಸಹಕಾರಿಯಾಗಿರುತ್ತದೆ. ಪಿಂಚಣಿ ಮತ್ತು ವಿಮಾ ಸೌಲಭ್ಯ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗುತ್ತದೆ.


 ಸಾಲ ಸೌಲಭ್ಯ (ಓವರ್ ಡ್ರಾಫ್ಟ್ ):-

* ಖಾತೆಯಲ್ಲಿ ಹಣವಿಲ್ಲದಿದ್ದರೂ ಅಗತ್ಯವಿದ್ದಾಗ ರು 5೦೦೦ ವರೆಗೆ ಹಣ ಪಡೆಯಬಹುದು (ಓವರ್ ಡ್ರಾಫ್ಟ್ ) ಆದರೆ ಪ್ರತಿ ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಅವಕಾಶ . ಕುಟುಂಬದ ಮಹಿಳಾ ಸದಸ್ಯರಿಗೆ ಆದ್ಯತೆ. ಸರಿಯಾದ ಸಮಯಕ್ಕೆ ಬಡ್ಡಿ ಸಮೇತ ಮರುಪಾವತಿ ಮಾಡಿದರೆ ರು 5 ಸಾವಿರದ ಮಿತಿ ಹೆಚ್ಚಿಸಿಕೊಳ್ಳಬಹುದು. ಆದರೆ ಸೌಲಭ್ಯ ಖಾತೆ ನಿರ್ವಹಣೆ ತೃಪ್ತಿಕರವಾಗಿದ್ದರೆ ಮಾತ್ರ ಖಾತೆ ತೆರೆದ ಆರು ತಿಂಗಳ ನಂತರ ದೊರೆಯುತ್ತದೆ.

Source : ಕನ್ನಡ ವಿಕಿಪೀಡಿಯ

loading...