ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ(PMGSY):

Published on:  2016-10-18
Posted by:  Admin

ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ(PMGSY):

ಇದು ಒಂದು ರಾಷ್ಟ್ರ ವ್ಯಾಪಿ ಯೋಜನೆಯಾಗಿದ್ದು ಭಾರತದ ಎಲ್ಲ ಹಳ್ಳಿಗಳಿಗೆ ಉತ್ತಮ ರಸ್ತೆಗಳನ್ನು ಕಲ್ಪಿಸುವ ವ್ಯವಸ್ಥೆಯಾಗಿದೆ.

ಇದು ಒಂದು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು ಇದನ್ನು ಡಿಸೇಂಬರ್ 25, 2೦೦೦ ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದಂತಹ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರು ಜಾರಿಗೆ ತಂದರು . ಇದು ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿಯಲ್ಲಿ ಕೆಲಸ ಮಾಡುತ್ತದೆ .


ಯೋಜನೆಯ ಮುಖ್ಯ ಉದ್ದೇಶ :

.2೦೦3 ರಲ್ಲಿ 1೦೦೦ ವ್ಯಕ್ತಿಗಳು ಮತ್ತು ಜನಸಂಖ್ಯೆ ಹೊಂದಿರುವ ಎಲ್ಲ ಹಳ್ಳಿಗಳಲ್ಲಿ ಉತ್ತಮ ರಸ್ತೆಗಳನ್ನು ಕಲ್ಪಿಸುವುದು.

. 2೦7ರ ಮೇಲೆ 5೦೦ ಮತ್ತು ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮಗಳು

. ಪರ್ವತ ರಾಜ್ಯಗಳ ಬುಡಕಟ್ಟು ಮತ್ತು ಮರಭೂಮಿ ಪ್ರದೇಶದ ಹಳ್ಳಿಗಳಲ್ಲಿ 5೦೦ ವ್ಯಕ್ತಿಗಳ ಮತ್ತು

. ಪರ್ವತ ರಾಜ್ಯಗಳ 2೦೦7 ಮೇಲೆ 25೦ ವ್ಯಕ್ತಿಗಳು ಮತ್ತು ಜನಸಂಖ್ಯೆ ಹೊಂದಿರುವ ಬುಡಕಟ್ಟು ಮತ್ತು ಮರಭೂಮಿ ಪ್ರದೇಶದ ಹಳ್ಳಿಗಳಲ್ಲಿ ಉತ್ತಮ ರಸ್ತೆಗಳನ್ನು ಕಲ್ಪಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ.

ಯೋಜನೆಯನ್ನು ಹೆಚ್ಚು ಸಮರ್ಪಕವಾಗಿ ಕಾರ್ಯಗತಗೊಳಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಯನ್ನು ಅಕ್ಟೋಬರ್ 2೦೦5 ರಲ್ಲಿ ರಚಿಸಲಾಗಿದೆ

 Source : ಸ್ಪರ್ಧಾತ್ಮಕ ಪುಸ್ತಕಗಳು

loading...