Lover Boy ಆದ ಪ್ರಥಮ್ - ಸಂಜನಾ ನು ಸೈ, ಸುಕೃತಾ ನು ಸೈ

Published on:  2016-12-07
Posted by:  Basavaraj PM

ಬಿಗ್ ಬಾಸ್ ಮನೆಯಲ್ಲಿ ಸರ್ವಾಧಿಕಾರಿ ಆಗಿದ್ದ ಪ್ರಥಮ್ ಈಗ Lover Boy ಆಗಿದ್ದಾನೆ. ಸಂಜನಾ ಮತ್ತು ಭುವನ್ ಇಬ್ಬರು ಒಂದು ದಿನ bathroom ನಲ್ಲಿ ಟಾಯ್ಲೆಟ್ ತೊಳೆಯುವಾಗ ಅದೇನ್ ಮಾಡಿದರೋ ಗೊತ್ತಿಲ್ಲ, ಅದೇ ಸಮಯಕ್ಕೆ ಪ್ರಥಮ್ ಅಲ್ಲಿ ಅದೇನ್ ನೋಡಿದಾನೋ ಗೊತ್ತಿಲ್ಲ, ಆ ದಿನದಿಂದ ಸಂಜನಾ ಹಿಂದೆ ಬಿದ್ದಿದ್ದಾನೆ. ಸಂಜನಾ ಮತ್ತು ಭುವನ್ ನಡುವೆ ಬಾತ್ರೂಮ್ ಲಿ ಎನ್ ನಡೆದಿತ್ತು ಅನ್ನೋದು ಯಾರಿಗೂ ಗೊತ್ತಿಲ್ಲ, ಆ ವಿಷಯ ಇನ್ನೂ ನಿಗೂಢವಾಗಿಯೇ ಉಳಿದಿದೆ.ಸುಕೃತಾ ವಾಗ್ಳೆ, ಮಸ್ತಾನ್ ಚಂದ್ರ ಹಾಗೂ ಕಾರುಣ್ಯ ರಾಮ್ ಈ ಮೂವರು wildcard ಸ್ಪರ್ದಿಗಳು. ಪ್ರಥಮ್ dictatorship ಟಾಸ್ಕ್ ಲಿ ಕೊನೆಯ ದಿನ ಈ ಮೂವರು ಬಿಗ್ ಬಾಸ್ ಮನೆಗೆ ಕಾಲಿಟ್ಟರು. ಆ ವಾರದ ಟಾಸ್ಕ್ ತುಂಬ ಚೆನ್ನಾಗಿ ಮೂಡಿ ಬಂತು, ಹಾಗೂ ಮನೆಯ ಎಲ್ಲ ಸದಸ್ಯರು ಚೆನ್ನಾಗಿ ಭಾಗವಹಿಸಿ ಒಳ್ಳೆಯ ಆಟ ಆಡಿ ರಂಜಿಸಿದರು.


ಪ್ರಥಮ್ ಸಂಜನಾಗು ಮತ್ತು ಸುಕೃತಾಗು ಪ್ರೇಮ ಪ್ರಸ್ತಾಪವನ್ನು ಮುಂದಿಟ್ಟಿದ್ದಾನೆ. ಸಂಜನಾ, ಪ್ರಥಮ್ ಮಾತಿಗೆ ಕ್ಯಾರೇ ಅಂತಿಲ್ಲ, ಇದರ ಅರ್ಥ ಸಂಜನಾ ಗೆ ಪ್ರಥಮ್ ಇಷ್ಟಾನ ಅಥವಾ ಸುಮ್ಮನೆ ಏನೋ ಹೇಳ್ತಿದಾನೆ ಅಂತ ಅವನ ಮಾತನ್ನ ತಳ್ಳಿ ಹಾಕ್ತಿದ್ದಾಳೋ ಗೊತ್ತಿಲ್ಲ. ಇನ್ನು ಸುಕೃತಾ ಗೆ ಎಲ್ಲ ರೀತಿಯಿಂದ ಪ್ರೊಪೋಸ್ ಮಾಡ್ತಿದಾನೆ, ಆದರೆ ಸುಕೃತಾ ನು ಪ್ರಥಮ್ ಮಾತಿಗೆ ಕಿವಿಗೊಡುತ್ತಿಲ್ಲ. ಪ್ರಥಮ್ ಇಬ್ಬರಿಗೂ ಐ ಲವ್ ಯು ಅಂತ ಹೇಳ್ತಾ ಮನೆತುಂಬ ಅವರು ಇದ್ದ ಕಡೆ ಓಡಾಡ್ತಾ ಇದ್ದಾನೆ.


58 ದಿನ ಕಳೆದ ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಇಷ್ಟು ದಿನ ಬರೀ ಖಂಡಿಸೋದು, ಜಗಳ ಮಾಡೋದು, ಸುಮ್ಮನೆ ಎಲ್ಲರ ಜೊತೆ ಮನಸ್ತಾಪ ಮಾಡಿಕೊಂಡು 8 ವಾರ ತಪ್ಪದೆ nominate ಆಗಿದ್ದ. ಆದರೆ ಈ ವಾರ dictatorship ಟಾಸ್ಕ್ ತುಂಬ ಚನ್ನಾಗಿ ನಿಭಾಯಿಸಿದ್ದಕ್ಕೆ ಇಮ್ಮ್ಯೂನಿಟಿ ಸಿಕ್ಕಿರೋದು ಖುಷಿಯಾಗಿದೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿಗಾಗಿ ಸಂಜನಾ ಮತ್ತು ಸುಕೃತಾ ಜೊತೆ ಅಲೆದಾಡ್ತಿದ್ದಾನೆ. ಈ ಇಬ್ಬರಲ್ಲಿ ಪ್ರಥಮ್ ಪ್ರೀತಿ ಯಾರಿಗೆ ಸಿಗುತ್ತೆ ಮತ್ತು ಪ್ರಥಮ್ ಬಿಗ್ ಬಾಸ್ ಮನೆಯಿಂದ ಜೋಡಿಯಾಗಿ ಹೊರಗೆ ಬರುತ್ತಾರೊ ಕಾದು ನೋಡಬೇಕು.

">

loading...