ಕಿಚ್ಚ ಸುದೀಪ್ ಹೆಬ್ಬುಲಿ ಚಿತ್ರ ತುಂಬ ವಿಭಿನ್ನ ಯಾಕೆ ?

Published on:  2016-12-13
Posted by:  Basavaraj PM

ಕಿಚ್ಚ ಸುದೀಪ್ ಹೆಬ್ಬುಲಿ ಚಿತ್ರದ ಟೀಸರ್, ಮೇಕಿಂಗ್ ಎಲ್ಲವೂ ದಿನೆ ದಿನೆ ತುಂಬ ಕುತೂಹಲ ಮೂಡಿಸುತ್ತಿದೆ. ಈ ಚಿತ್ರ ಒಂದು ವಿಶೇಷ ರೀತಿಯಲ್ಲಿ ತಯಾರಾಗುತ್ತಿದೆ. ಸುದೀಪ್ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ತಮ್ಮ ವಿಭಿನ್ನ ಹೇರ್ ಸ್ಟೈಲ್ ಮುಖಾಂತರ  ಗಮನ ಸೆಳೆದಿದ್ದಾರೆ.  ಸುದೀಪ್ ಕೋಟಿಗೊಬ್ಬ ಚಿತ್ರ ಸಕ್ಸಸ್ ಆದ ನಂತರ ಹೆಬ್ಬುಲಿ ಚಿತ್ರ ತುಂಬ ಹೈಪ್ ಕ್ರಿಯೇಟ್ ಮಾಡ್ತಿದೆ. ಸುದೀಪ್ ಹೇರ್ ಸ್ಟೈಲ್ ಅಂತೂ ಸುದೀಪ್ ಫ್ಯಾನ್ಸ್ ಗಳಿಗೆ ಒಂಥರಾ ಏನೋ ಬೇರೆ ರೀತಿಯ ಟ್ರೆಂಡ್ಸೆಟ್ ಮಾಡಿದಂತಿದೆ, ಎಲ್ಲರೂ ಅದೇ ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಿರೋದು ವಿಶೇಷ.


ಹೆಬ್ಬುಲಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸುದೀಪ್ ರವರ ಹೊಸ ಸ್ಟೈಲ್ ಎಲ್ಲರಿಗು ಮೆಚ್ಚುಗೆಯಾಗಿದೆ. ಚಿತ್ರದಲ್ಲಿ ಸುದೀಪ್, ವಿ. ರವಿಚಂದ್ರನ್, ಅಮಲಾ ಪೌಲ್, ಪಿ. ರವಿಶಂಕರ್, ರವಿ ಕಿಶನ್, ಕಬೀರ್ ದುಹನ್ ಸಿಂಗ್, ಸಂಪತ್ ರಾಜ್ ಹೀಗೆ ಬಹುತಾರಾಗಣವಿರುವ ಚಿತ್ರಕ್ಕೆ S. ಕೃಷ್ಣ ರವರು ನಿರ್ದೇಶನ ಮಾಡಿದ್ದಾರೆ. ನಿಮಗೆಲ್ಲ ಗೊತ್ತಿರುವ ಹಾಗೆ ಮುಂಗಾರು ಮಳೆ ಚಿತ್ರ ಕನ್ನಡ ಚಿತ್ರರಂಗವನ್ನೇ ಒಂದು ವಿಭಿನ್ನ ರೀತಿಯ ಕಡೆಗೆ ತೆಗೆದುಕೊಂಡು ಹೋಯಿತು. ಈ ಚಿತ್ರಕ್ಕೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದ S. ಕೃಷ್ಣ ರವರು, ಮುಂದೆ ಗಜಕೇಸರಿ ಚಿತ್ರವನ್ನು ತಾವೇ ನಿರ್ದೇಶಿಸಿದರು. ಈಗ ಸುದೀಪ್ ಜೊತೆ ಹೆಬ್ಬುಲಿ ನಿರ್ದೇಶನ ಮಾಡ್ತಿದ್ದಾರೆ.


ಕಿಚ್ಚ ಸುದೀಪ್ ಜೊತೆ ಇದೆ ಮೊದಲ ಬಾರಿಗೆ ಕನ್ನಡದಲ್ಲಿ ಅಮಲಾ ಪೌಲ್ ಜೊತೆಯಾಗಿ ನಟಿಸಿದ್ದಾರೆ. ಇನ್ನು ರವಿಚಂದ್ರನ್ ಮಾಣಿಕ್ಯ ನಂತರ ಎರಡನೇ ಬಾರಿ ಸುದೀಪ್ ಜೊತೆ ಈ ಚಿತ್ರದಲ್ಲಿ ನಟಿಸುತ್ತೀದ್ದಾರೆ. ಚಿತ್ರದಲ್ಲಿ ಪಿ. ರವಿಶಂಕರ್, ರವಿ ಕಿಶನ್, ಕಬೀರ್ ದುಹನ್ ಸಿಂಗ್, ಸಂಪತ್ ರಾಜ್ ಖಳನಾಯಕರ ಪಾತ್ರದಲ್ಲಿ ನಟಿಸುತ್ತಿದ್ದಾರೆ.


SRV ಪ್ರೋಡ್ಯೂಕ್ಷನ್ಸ್ ಮತ್ತು ಉಮಾಪಥಿ ಪ್ರೋಡ್ಯೂಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, A. ಕರುಣಾಕರ್ ರವರ ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕ S. ಕೃಷ್ಣ ರವರು ಮೂಲತಃ ಛಾಯಾಗ್ರಾಹಕರಾಗಿರುವುದರಿಂದ ಜಮ್ಮು ಕಾಶ್ಮೀರ್, ಹೈದರಾಬಾದ್, ಐಲ್ಯಾಂಡ್, ನಿರ್ದೇಶಕ ಮತ್ತು ವಿದೇಶಗಳಲ್ಲಿ ಚಿತ್ರೀಕರಣ ಮಾಡಿ ಒಳ್ಳೆಯ ಮನಮೋಹಕ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.


ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಇದೆ ತಿಂಗಳು 25 ರಂದು ದಾವಣಗೆರೆ ಲಿ ಆಡಿಯೋ ರಿಲೀಸ್ ಆಗಲಿದೆ. ಇನ್ನು ಚಿತ್ರದ ರಿಲೀಸ್ ಬಗ್ಗೆ ಯಾವುದೇ ಅಫೀಷಿಯಲ್ ಆಗಿ ರಿಲೀಸ್ ಡೇಟ್ ಅನೌನ್ಸ್ ಆಗಿರುವುದಿಲ್ಲ. ಕಿಚ್ಚ ಸುದೀಪ್ ರವರ ಹಿಂದಿನ ಎಲ್ಲ ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿ ಎದ್ದು ಕಾಣುತ್ತಿದೆ. ಈ ಚಿತ್ರದ ಕೆಲವು ಫೋಟೋಗಳು ರಿಲೀಸ್ ಆಗಿದ್ದು, ಮೇಕಿಂಗ್, ಹಾಡು ಫ್ಯಾನ್ಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಈಗ ಚಿತ್ರ ಇನ್ನು ಕುತೂಹಲ ಮೂಡಿಸಿದೆ. ಕಿಚ್ಚ ನ ಫ್ಯಾನ್ಸ್ ಗಳಂತೂ ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಹಾಡುಗಳು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿವೆ. ಟೀಸರ್ ಗಾಗಿ ಇಲ್ಲಿ ಕ್ಲಿಕ್ಕಿಸಿ.

loading...