ಕರ್ನಾಟಕದ ಅನ್ನಭಾಗ್ಯ ಯೋಜನೆ

Published on:  2016-10-18
Posted by:  Admin

ಕರ್ನಾಟಕದ ಅನ್ನಭಾಗ್ಯ ಯೋಜನೆ:

ಕರ್ನಾಟಕದ ಮುಖ್ಯಮಂತ್ರಿ ಶ್ರೀಯುತ ಸಿದ್ದರಾಮಯ್ಯ ಅವರ ಕನಸಿನ ಒಂದು ರೂ. ಗೆ ಒಂದು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯು ಜುಲೈ 1೦ , 2೦13 ರಂದು ರಾಜ್ಯದಲ್ಲಿ ಅಧಿಕೃತವಾಗಿ ಪ್ರಾರಂಭವಾಯಿತು. ಬೆಂಗಳೂರಿನಲ್ಲಿ ಯೋಜನೆಗೆ ಶ್ರೀಯುತ ಸಿಎಂ ಸಿದ್ದರಾಮಯ್ಯ ರವರು  ಚಾಲನೆ ನೀಡಿದ್ದರು .


  ಯೋಜನೆಯ ಅಡಿಯಲ್ಲಿ ಬಿ . ಪಿ . ಎಲ್ ಕುಟುಂಬಗಳಿಗೆ ಪ್ರತಿ ತಿಂಗಳಿಗೆ 3೦ ಕೆ. ಜಿ . ಅಕ್ಕಿಯನ್ನು ಕೆ.ಜಿಗೆ 1 ರೂ. ಬೆಲೆಯಲ್ಲಿ ವಿತರಿಸಲಾಗುತ್ತಿದೆ.


 ಎಷ್ಟು ಅಕ್ಕಿ : ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಯ ಮನೆಯಲ್ಲಿ ಒಬ್ಬರೇ ಇದ್ದರೆ ತಿಂಗಳಿಗೆ 1೦ ಕೆ.ಜಿ.ಅಕ್ಕಿ ನೀಡಲಾಗುವುದು . ಮನೆಯಲ್ಲಿ ಇಬ್ಬರು ಸದಸ್ಯರಿದ್ದರೆ, 2೦ ಕೆ.ಜಿ.ಅಕ್ಕಿ , 3 ಅಥವ ಅದಕ್ಕಿಂತ ಹೆಚ್ಚಿನ ಜನರಿದ್ದರೆ 3೦ ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತದೆ.


 ಕೇಂದ್ರ ಸರ್ಕಾರದಿಂದ 1.78 ಲಕ್ಷ ಟನ್ ಅಕ್ಕಿಯನ್ನು ಅನ್ನ ಭಾಗ್ಯ ಯೋಜನೆಗಾಗಿ ರಾಜ್ಯ ಸರ್ಕಾರ ಪಡೆಯುತ್ತಿದೆ. ರಾಜ್ಯ ಸರ್ಕಾರ 1.೦7 ಲಕ್ಷ ಟನ್ ಸಂಹ್ರಹಣೆ ಮಾಡಿ ಕಡು ಬಡವರಿಗೆ ವಿತರಣೆ ಮಾಡಲಾಗುತ್ತಿದೆ. ಯೋಜನೆಯಿಂದಾಗಿ ಸರ್ಕಾರಕ್ಕೆ 4,5೦೦ ಕೋಟಿ ಹೊರೆ ಉಂಟಾಗಲಿದೆ.


 11 ಲಕ್ಷ ಅಂತ್ಯೋದಯ ಮತ್ತು 87 ಲಕ್ಷ ಬಿಪಿಎಲ್ ಕುಟುಂಬಗಳು ಒಂದು ರೂ. ಗೆ ಒಂದು ಕೆಜೆ ಅಕ್ಕಿಯಂತೆ ಮೂವತ್ತು ಕೆಜಿ ಅಕ್ಕಿ ಪಡೆಯಬಹುದಾಗಿದೆ. ಅಂದ್ರ ಪ್ರದೇಶ ಮತ್ತು ತಮಿಳುನಾಡು ಇಂತಹ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿವೆ. ಕರ್ನಾಟಕ ಯೋಜನೆ ಜಾರಿಗೊಳಿಸುತ್ತಿರುವ ಮುರನೇ ರಾಜ್ಯವಾಗಿದೆ.

  

Source : ಸ್ಪರ್ಧಾತ್ಮಕ ಪುಸ್ತಕಗಳು

 


loading...