ಇದನ್ನೊಮ್ಮೆ ಓದಿದರೆ ಚೇಪೆಹಣ್ಣನ್ನು ತಿನ್ನದೇ ಇರಲಾರಿರಿ

Published on:  2016-11-21
Posted by:  Admin

ಚೇಪೆಹಣ್ಣು ಹಾಗು ಒಂದಿಷ್ಟು ಉಪ್ಪುಖಾರ ಬೆರೆಸಿ ತಿನ್ನೋ ಮಜವೇ ಬೇರೆ, ಅದು ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ, ಶಾಲೆಯ ಮುಂದೆ ಬಂಡಿ ಗಾಡಿಯಲ್ಲಿ ಮಾರುತಿದ್ದ ಚೇಪೆಹಣ್ಣು, ಅಮ್ಮನಿಗೆ ಗೊತ್ತಾಗದ ಹಾಗೆ ಅದನ್ನು ತಿನ್ನುತ್ತಿದದ್ದು, ಆ ಹಣ್ಣಿಗಾಗಿ ಗೆಳೆಯರೊಂದಿಗೆ ಜಗಳವಾಡುತಿದದ್ದು, ಬಚ್ಚಿಟ್ಟು ಕೊಂಡು ತರಗತಿಯಲ್ಲಿ ತಿನ್ನುತ್ತಿದದ್ದು ಈ ರೀತಿಯ ಎಷ್ಟೋ ಸವಿನೆನಪುಗಳು ಚೇಪೆಹಣ್ಣು ಎಂದಾಕ್ಷಣ ನೆನಪಿಗೆ ಬರುತ್ತವೆ. 


ನಿಮಗೆ ಗೊತ್ತೇ ಈ ಹಣ್ಣು ನಮ್ಮ ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿಯೆಂದು? ಸುಮ್ಮನೆ ನಾಲಿಗೆಯ ರುಚಿಗೆ ತಿನ್ನುತಿದ್ದ ಸಮಯ ಆ ಬಾಲ್ಯ, ಆದರೆ ಈವಾಗ ವಿಜ್ಞಾನ ಬೆಳೆದಿದೆ ಎಷ್ಟೊಂದು ಹಣ್ಣು ತರಕಾರಿಗಳ ಮೇಲೆ ಸಂಶೋದನೆಗಳು ನಡೆಯುತ್ತಿವೆ,ಈ ಹಣ್ಣು ಮೂಲತಃ ಮದ್ಯ ಅಮೆರಿಕದಿಂದ ಬಂದಿದೆ ಎಂದು ಹೇಳುತ್ತಾರೆ.  ಹಾಗೆಯೆ ಈ ಹಣ್ಣಿನ ಮಹತ್ವವನ್ನು ನೀವು ತಿಳಿದರೆ ಪ್ರತಿದಿನ ತಿನ್ನದೇ ಇರಲಾರಿರಿ. ಬನ್ನಿ ಈ ಹಣ್ಣಿನ ಮಹತ್ವವನ್ನು ತಿಳಿಯೋಣ.


ಕ್ಯಾನ್ಸರ್ ನಿರೋಧಕ: 
ಈ ಹಣ್ಣಿನಲ್ಲಿರುವ Lycopene, quercetin, vitamin ಸಿ ಹಾಗು ಇತರೆ polyphenols  ಇರುವುದರಿಂದ ಪ್ರಬಲವಾದ ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿ ಒಂದು ರೀತಿಯ ಕ್ಯಾನ್ಸರ್ ಉತ್ಪತ್ತಿ ಮಾಡುವ radicals ಜೀವಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ.


ಮಧುಮೇಹವನ್ನು ತಡೆಗಟ್ಟುತ್ತದೆ:
ಹಣ್ಣಿನಲ್ಲಿರುವ ನಾರಿನಾಂಶ ಮಧುಮೇಹವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಸಕ್ಕರೆಯ ಅಂಶವನ್ನು ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.


ಆರೋಗ್ಯವಾದ ಹೃದಯ:
ಹೃದಯ ಸಂಬಂಧಿ ರೋಗಿಗಳಿಗೆ ಈ ಹಣ್ಣು ಬಹಳ ಉಪಯುಕ್ತವಾದ ಹಣ್ಣು, ಒಂದು ರೀತಿ ಔಷಧಿಯ ಹಾಗೆ ಕೆಲಸ ಮಾಡುತ್ತದೆ. ಈ ಹಣ್ಣು ನಮ್ಮ ದೇಹಲ್ಲಿರುವ ಸೋಡಿಯಂ ಹಾಗು ಪೊಟ್ಯಾಸಿಯಂ ಅನ್ನು ಸಮ ಪ್ರಮಾಣದಲ್ಲಿ ಇರುವಂತೆ ಮಾಡಿ ಹೃದಯ ಕಾಯಿಲೆಯನ್ನು ಉಂಟು ಮಾಡುವಂತಹ ಟ್ರೈಗ್ಲಿಸರೈಡ್ಗಳು ಹಾಗು ಕೆಟ್ಟ ಕೊಲೆಸ್ಟರಾಲ್ ನ ಬೆಳವಣಿಗೆಯನ್ನು ತಗ್ಗಿಸುತ್ತದೆ.


ಮಲಬದ್ಧತೆಯ ನಿವಾರಣೆ:
ಎಲ್ಲ ಹಣ್ಣಿಗಳಿಗಿಂತ ಈ ಹಣ್ಣಿನಲ್ಲಿ ಹೆಚ್ಚು ನಾರಿನಾಶ್ಮ ಇದೆ.  ನಮ್ಮ ದಿನನಿತ್ಯದ ೧೨% ನಾರಿನಂಶವನ್ನು ಒಂದು ಚೇಪೆಹಣ್ಣು ಒದಗಿಸಿ ನಮ್ಮ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ, ಇದರ ಬೀಜದಿಂದ ಅಜೀರ್ಣವು ನಿವಾರಣೆ ಆಗುತ್ತದೆ.


ದೃಷ್ಟಿ ದೋಷ ನಿವಾರಣೆ:
ವಿಟಮಿನ್ A  ಹೆಚ್ಚಾಗಿರುವುದರಿಂದ ಕಣ್ಣಿನ ದೋಷವನ್ನು ನಿವಾರಿಸುತ್ತದೆ, ಕಣ್ಣಿನ ಪೊರೆ ಬರದಂತೆ ತಡೆಯುವುದರ ಜೊತೆ ಕಣ್ಣಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾರಟ್ ಗೆ ಹೋಲಿಸಿದರೆ ಈ ಹಣ್ಣಿನಲ್ಲಿ ಕಡಿಮೆ ವಿಟಮಿನ್ A  ಇದೆ ಆದರೂ ಕಣ್ಣಿಗೆ ಹೆಚ್ಚು ಉಪಕಾರಿಯಾದ ಹಣ್ಣಾಗಿದೆ.


ಗರ್ಭಿಣಿಯರಿಗೆ ಉಪಕಾರಿ:
ಈ ಹಣ್ಣಿನಲ್ಲಿ folic acid  ಅಥವಾ ವಿಟಮಿನ್ B9 ಯೆಥೇಚ್ಛವಾಗಿದೆ ಇವು ಗರ್ಭಿಣಿಯರ ಆರೋಗ್ಯಕ್ಕೆ ಬೇಕಾದ ವಿಟಮಿನ್ಸ್ ಗಳು, ಇಂತಹ ವಿಟಮಿನ್ಸ್ ಗಳನ್ನೂ ಗರ್ಭಿಣಿಯರಿಗೆ ಹೆಚ್ಚಾಗಿ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ,  ಯಾಕಂದರೆ ಇವು ಮಗುವಿನ ನರಮಂಡಲದ ಬೆಳವಣಿಗೆಗೆ ಸಹಾಯಕವಾಗಿವೆ ಹಾಗು ಮಗುವಿನಲ್ಲಿ ಯಾವುದೇ ರೀತಿಯ ನರವೈಜ್ಞಾನಿಕ ಅಸ್ವಸ್ಥತೆಗಳು ಉಂಟಾಗದಂತೆ ರಕ್ಷಣೆ ನೀಡುತ್ತವೆ. ಈ ವಿಟಮಿನ್ಸ್ ಗಳು ಚೇಪೆ ಹಣ್ಣಿನಲ್ಲಿ ಇರುವುದರಿಂದ ಈ ಹಣ್ಣನ್ನು ಸೇವಿಸಿದರೆ ವಿಟಮಿನ್ಸ್ ಗಳು ನೇರವಾಗಿ ದೇಹವನ್ನು ಸೇರಿ ಮಗುವಿನ  ಬೆಳವಣಿಗೆಗೆ ಉಪಕಾರಿಯಾಗಿದೆ.


ಒಸಡುಗಳ ರಕ್ಷಣೆಗೆ:
ಈ ಹಣ್ಣಿನ ಎಲೆಗಳು ಕೂಡ ಆರೋಗ್ಯಕ್ಕೆ ಉಪಕಾರಿ ಹೇಗೆಂದರೆ ಎಲೆಗಳಲ್ಲಿ ಒಸಡಿನ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿ ಇದೆ ಹಾಗು ಹಲ್ಲು ಹುಳ ಬೀಳುವುದನ್ನು ತಡೆಗಟ್ಟುತ್ತದೆ. ಎಲೆಗಳನ್ನು ಅಗಿದು ತಿನ್ನುವುದರಿಂದ ಹಲ್ಲುನೋವು ಕಡಿಮೆ ಆಗುತ್ತದೆ, ಜೊತೆಗೆ ದವಡೆಗಳ ಸಡಿಲಿಕೆಯನ್ನು ಸದೃಢ ಮಾಡಿ ಬಾಯಿಯಲ್ಲಿ ಆಗುವ ಹುಣ್ಣುಗಳನ್ನು ಕಡಿಮೆ ಮಾಡುತ್ತದೆ.

loading...