ಗ್ರಾಮ ಸಭೆಯ ವಿವರಣೆ

Published on:  2016-10-15
Posted by:  Admin

ಗ್ರಾಮ ಸಭೆ ವಿವರಣೆ:

* ಗ್ರಾಮ ಸಭೆಯು ಕೊನೆಯ ಪಕ್ಷ ಆರು ತಿಂಗಳಿಗೊಮ್ಮೆ ಸಭೆ ಸೇರತಕ್ಕದ್ದು.

* ಗ್ರಾಮ ಸಭೆಯ ಸದಸ್ಯರ ಶೇಕಡಾ ೧೦ ಕ್ಕಿಂತ ಕಡಿಮೆಯಲ್ಲದ ಸದಸ್ಯರು ಕೋರಿಕೆಯನ್ನು ಸಲ್ಲಿಸಿ , ಅಂತಹ ಕೋರಿಕೆಯಲ್ಲಿ ಕಲಾಪಗಳ ವಿಷಯಗಳನ್ನು ನಿರ್ದಿಷ್ಟಪಡಿಸಿದ್ದರೆ ವಿಶೇಷ ಸಭೆಯನ್ನು ಕರೆಯತಕ್ಕದು. ಹಾಗು ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೂ ಕನಿಷ್ಠ ೩ ತಿಂಗಳ ಅಂತರ ಇರತಕ್ಕದ್ದು.

* ಗ್ರಾಮ ಸಭೆಯ ಸಭೆ ಸೇರುವಾಗ ಗ್ರಾಮ ಸಭೆಯ ಸದಸ್ಯರ ಒಟ್ಟು ಸಂಖ್ಯೆಯ ಹತ್ತನೇ ಒಂದಕ್ಕೆ ಕಡಿಮೆಯಲ್ಲದಸ್ಟು ಅಥವಾ ನೂರು ಸದಸ್ಯರು , ಇವುಗಳಲ್ಲಿ ಯಾವುದು ಕಡಿಮೆಯೋ ಅದು ಸಭೆಯ ಕೋರಂ ಆಗಿರತಕ್ಕದು.

* ಪಂಚಾಯತ್ ಪ್ರದೇಶದಲ್ಲಿಯ ಪ್ರತಿಯೊಂದು ವಾರ್ಡ್ ಸಭೆಯಿಂದ ಕನಿಷ್ಟ ೧೦ ಸದಸ್ಯರು ಸಭೆಗೆ ಹಾಜರಾಗತಕ್ಕದು.

* ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳು, ಗ್ರಾಮ ಸಭೆಯಲ್ಲಿ ತಮ್ಮ ಜನಸಂಖ್ಯೆಯ ಅನುಪಾತಕ್ಕನುಸಾರವಾಗಿ ಪ್ರತಿನಿಧಿಸತಕ್ಕದು.

* ಗ್ರಾಮ ಸಭೆಯು ತನ್ನ ಸಾಮಾನ್ಯ ಸಭೆಯಲ್ಲಿ ಅಥವಾ ಒಂದು ಉದ್ದೇಶಕ್ಕಾಗಿ ಕರೆಯಲಾದ ವಿಶೇಷ ಸಭೆಯಲ್ಲಿ , ಬಜೆಟ್ಟಿನಲ್ಲಿ ಮಡಿದ ಏರ್ಪಾಡುಗಳನ್ನು , ಯೋಜನಾ ವೆಚ್ಚದ ವಿವರಗಳನ್ನು ಮತ್ತು ನಿಧಿಯ ವಿಷಯವರು ಹಂಚಿಕೆಯನ್ನು ಮತ್ತು ಪಂಚಾಯಿತಿ ಪ್ರದೇಶದಲ್ಲಿ ನಿರ್ವಹಿಸಲಾದ ಅಥವಾ ನಿರ್ವಹಿಸಬೇಕಾದ ಕಾಮಗಾರಿಗಳ ಅಂದಾಜಿನ ಮತ್ತು ಸಾಮಗ್ರಿಗಳ ವೆಚ್ಚದ ಅಂದಾಜುಗಳ ಬಗ್ಗೆ ಸಹ ಚರ್ಚಿಸತಕ್ಕದು.

* ಹಿಂದಿನ ಹಣಕಾಸು ವರ್ಷದ ಲೆಕ್ಕಪತ್ರಗಳ ವಾರ್ಷಿಕ ವಿವರಣಾ ಪತ್ರ, ಹಿಂದಿನ ವರ್ಷದ ಲೆಕ್ಕದ ಪರಿಶೋಧನಾ ಟಿಪ್ಪಣಿ ಮತ್ತು ಅದರ ಮೇಲಿನ ಉತ್ತರಗಳು ಮತ್ತು ಪಂಚಾಯಿತಿ ಜಮಾಬಂದಿ ವರದಿ ಮತ್ತು ಅದರ ಸಂಬಂಧದಲ್ಲಿ ಕೈಗೊಂಡ ಕ್ರಮ , ಇವುಗಳನ್ನು ಗ್ರಾಮ ಪಂಚಾಯಿತಿಯು , ಗ್ರಾಮ ಸಭೆಯ ಸಭೆಯಲ್ಲಿ ಅದರ ಪರಿಗಣನೆಗಾಗಿ ಮಂಡಿಸತಕ್ಕದು.

* ಗ್ರಾಮ ಸಭೆಯ ಅಭಿಪ್ರಾಯಗಳು , ಶಿಫಾರಸ್ಸುಗಳು , ಅಥವಾ ಸಲಹೆಗಳನ್ನು ಗ್ರಾಮ ಪಂಚಾಯಿತಿಗೆ ತಿಳಿಸತಕ್ಕದು. ಗ್ರಾಮ ಪಂಚಾಯಿತಿಯು ಗ್ರಾಮ ಸಭೆಯ ಅಭಿಪ್ರಾಯಗಳು , ಶಿಫಾರಸ್ಸುಗಳು ಮತ್ತು ಸಲಹೆಗಳಿಗೆ ಸೂಕ್ತ ಪರಿಗಣನೆ ನೀಡತಕ್ಕದು.

* ಗ್ರಾಮ ಸಭೆಯ ಸಭೆಯನ್ನು ಕರೆಯುವ ಮಾತು ನಡೆಸುವ ಕಾರ್ಯವಿಧಾನವು, ನಿಯಮಿಸಬಹುದಾದಂತದ್ದಾಗಿರತಕ್ಕದು.

* ಗ್ರಾಮ ಸಭೆಯ ಪ್ರತಿಯೊಂದು ಸಭೆಯ ಅಧ್ಯಕ್ಷತೆಯನ್ನು ಸಂಬಂಧಪಟ್ಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷನು ಮತ್ತು ಅವನ ಗೈರುಹಾಜರಿಯಲ್ಲಿ ಉಪಾಧ್ಯಕ್ಷನು ಮತ್ತು ಅಧ್ಯಕ್ಷ ಹಾಗು ಉಪಾಧ್ಯಕ್ಷ ಇವರಿಬ್ಬರ ಗೈರುಹಾಜರಿನಲ್ಲಿ ಗ್ರಾಮ ಪಂಚಾಯಿತಿಯ ನಮ ನಿರ್ದೇಶನ ಮಡಿದ ಅದರ ಯಾವೊಬ್ಬ ಸದಸ್ಯನು ವಹಿಸತಕ್ಕದು.

* ಗ್ರಾಮ ಪಂಚಾಯತಿಯ ಅಧಿಕಾರಿಗಳು , ಅಧ್ಯಕ್ಷನು ಅಗತ್ಯಪಡಿಸ ಬಹುದಾದಂತೆ ಗ್ರಾಮ ಸಭೆಯ ಸಭೆಗಳಿಗೆ ಹಾಜರಾಗತಕ್ಕದು ಮತ್ತು ಗ್ರಾಮ ಸಭೆಯ , ಸಭೆಯ ಸಂಚಾಲಕನಾಗಿ ಗ್ರಾಮ ಪಂಚಾಯಿತಿಯವು ವಿಶೇಷವಾಗಿ ನಾಮನಿರ್ದೇಶಿಸಬಹುದಾದ ಒಬ್ಬ ಅಧಿಕಾರಿಯು , ಸಭೆಗಳನ್ನು ಕರೆಯುವಲ್ಲಿ ಮತ್ತು ನಡೆಸುವಲ್ಲಿ ಮತ್ತು ಅದರ ತೀರ್ಮಾನಗಳನ್ನು ಸಭಾ ನಡುವಳಿ ಪುಸ್ತಕದಲ್ಲಿ ದಾಖಲು ಮಾಡುವಲ್ಲಿ ಮತ್ತು ಅದರ ಮೇಲೆ ಅನುಸರಣಾ ಕ್ರಮ ಕೈಗೊಳ್ಳುವಲ್ಲಿ ನೆರವು ನೀಡತಕ್ಕದು.

* ಗ್ರಾಮ ಸಭೆಯು , ಗ್ರಾಮ ಸಭೆಯ ತೀರ್ಮಾನಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದಕ್ಕಾಗಿ ಮತ್ತು ಗ್ರಾಮ ಸಭೆಯ ಅಧಿಕಾರಿಗಳ ಚಲಾವಣೆ ಮತ್ತು ಪ್ರಕಾರ್ಯಗಳ ನಿರ್ವಹಣೆಯ ಮುನ್ನಡೆಗಾಗಿನ ವಿಷಯಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಗಹನವಾಗಿ ಚರ್ಚಿಸಲು ಹತ್ತಕ್ಕೆ ಕಡಿಮೆಟಿಲ್ಲದ ಸಾಸ್ಯರನ್ನು ಒಳಗೊಂಡಂತೆ , ಅವರ ಪೈಕಿ ಅರ್ಧಕ್ಕೆ ಕಡಿಮೆಯಲ್ಲದಷ್ಟು ಸಂಖ್ಯೆಯ ಮಹಿಳೆಯರು ಇರತಕ್ಕ ಉಪಸಮಿತಿಗಳನ್ನು ರಚಿಸಬಹುದು .

* ಗ್ರಾಮ ಸಭೆಯ ಸಭೆಯಲ್ಲಿ ಯಾವುದೇ ವಿಷಯದ ಸಂಬಂಧದಲ್ಲಿಯ ಎಲ್ಲ ನಿರ್ಣಯಗಳು , ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಬಹುಮತದಿಂದ ಅಂಗೀಕೃತವಾಗತಕ್ಕದ್ದು.

loading...