ಧರ್ಮದ ನೆಲೆಯಾಗಿರುವ ಧರ್ಮಸ್ಥಳದ ಕಿರು ನೋಟ

Published on:  2016-12-06
Posted by:  Admin

ಪುಣ್ಯಶೀಲತೆ ಮತ್ತು ಧರ್ಮನಿಷ್ಠೆ ಗೆ ಹೆಸರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಧರ್ಮಕ್ಷೇತ್ರ. ಧರ್ಮಸ್ಥಳದ ಮೂಲ ಹೆಸರು ಕುಡುಮ, ಸುಮಾರು ಏಳುನೂರು ವರ್ಷ ಇತಿಹಾಸವಿರುವ ಧರ್ಮಸ್ಥಳ, ನೇತ್ರಾವತಿ ನದಿಯ ತೀರದಲ್ಲಿ ಧಾರ್ಮಿಕ ತಾಣ. ಸುಮಾರು ವರ್ಷಗಳಿಂದಲೂ ಪೂಜೆ ಪುನಸ್ಕಾರ, ದಾನ ಧರ್ಮ, ವಿದ್ಯೆ, ಸಾಮೂಹಿಕ ವಿವಾಹ ಹೀಗೆ ಇನ್ನು ಮುಂತಾದ ಸಾಮಾಜಿಕ ಕಾರ್ಯಗಳನ್ನು ನಡೆಸುಕೊಂಡು ಬರಲಾಗುತ್ತಿದೆ.


ಧರ್ಮಸ್ಥಳದ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ - ಸಾಂಸ್ಕೃತಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ.


ಮಂಜುನಾಥ ಸ್ವಾಮಿಯ ಕ್ಷೇತ್ರದಲ್ಲಿ ಅಣ್ಣಪ್ಪ ಸ್ವಾಮಿಯ ದೇವಸ್ಥಾನ ಹಾಗೂ ಬಾಹುಬಲಿ ಮೂರ್ತಿಯು ಕೂಡ ಇದೆ. ಧರ್ಮಸ್ಥಳದಲ್ಲಿ 365 ದಿನಗಳೂ ಜನರಿಂದ ತುಂಬಿರುತ್ತದೆ. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯು ಯಾವಾಗಲೂ ಇರುತ್ತದೆ. ಬಂದ ಭಕ್ತಾದಿಗಳು ತಮ್ಮ ಹರಕೆಯನ್ನು ಕಟ್ಟಿ, ತಲೆ ಮೂಡಿ ಕೊಟ್ಟು ಮಂಜುನಾಥನಿಗೆ ಅರ್ಪಿಸುತ್ತಾರೆ.


ಇತ್ತೀಚೆ ಧರ್ಮಸ್ಥಳ ಕ್ಷೇತ್ರ ಹಲವು ಪ್ರಶಂಸೆಗಳಿಗೆ ಪಾತ್ರವಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಚೊಕ್ಕಟ್ಟಾಗಿರುವ ಕ್ಷೇತ್ರ. ಭಕ್ತಾದಿಗಳಿಗೆ ರೂಮಿನ ವ್ಯವಸ್ಥೆ, ಊಟದ ವ್ಯವಸ್ಥೆ, ಹೀಗೆ ಎಲ್ಲದಕ್ಕೂ ಅನುಕೂಲವಿದೆ. ಆಡಳಿತ ಮಂಡಳಿಯು ಭಕ್ತರಿಗೆ ಆನ್ಲೈನ್ ರೂಮ್ ಬುಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ.


ಕಾರ್ತಿಕ ಮಾಸದ ಕೊನೆಯ ಶ್ರಾವಣ ಸೋಮವಾರ ನಡೆದ ಲಕ್ಷದೀಪೋತ್ಸವದಲ್ಲಿ ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಸ್ವಾಮಿಯ ಉತ್ಸವವವನ್ನು ಕಣ್ಣುತುಂಬಿಕೊಂಡರು. ಧರ್ಮಸ್ಥಳದ ಧರ್ಮಾದಿಕಾರಿಗಳಾದಂತಹ ಶ್ರೀ ವೀರೇಂದ್ರ ಹೆಗಡೆ ರವರು ಈ ಕ್ಷೇತ್ರವನ್ನು ಇನ್ನು ಹೆಚ್ಚಿನ ಸ್ಥಾನದಲ್ಲಿ ಮತ್ತು ಎಲ್ಲ ಜನರಿಗೆ ಎಲ್ಲ ರೀತಿಯಲ್ಲೂ ಅನುಕೂಲವಾಗುವಂತಹ ಎಲ್ಲ ಸೌಕರ್ಯವನ್ನು ಒದಗಿಸಲು ಆಡಳಿತ ಮಂಡಳಿಯ ಯೋಚನೆ ನಡೆಸಿದೆ.


ಧರ್ಮಸ್ಥಳ ಶ್ರೀ ಮಂಜುನಾಥನ ಹೆಸರಿನಲ್ಲಿ ಕರ್ನಾಟಕ ಮತ್ತು ದೇಶದೆಡೆಗೆಲ್ಲ ಆಸ್ಪತ್ರೆಗಳು, ಶಾಲೆ, ಕಾಲೇಜುಗಳು, ಔಷದಿಯ ಮಳಿಗೆಗಳು ಹೀಗೆ ಇನ್ನು ಹಲವಾರು ಸಾಮಾಜಿಕ ಕಾರ್ಯವನ್ನು ಆಡಳಿತ ಮಂಡಳಿಯು ನಡೆಸುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ಲಕ್ಷದೀಪೋತ್ಸವದಲ್ಲಿ ಪಾಲ್ಗೊಳ್ಳುವುದು ಒಂದು ಅಭೂತಪೂರ್ವ ಅನುಭವ. ಧರ್ಮಸ್ಥಳ ಸಾಕ್ಷಾತ್ ಆ ಶಿವನ ಸನ್ನಿಧಿ ಮತ್ತು ಭೂಮಿ ಮೇಲಿಯ ಸ್ವರ್ಗ ಎಂದರೆ ತಪ್ಪಾಗಲಾರದು.

loading...