ಸಂಕ್ರಾಂತಿಗೆ ಚಕ್ರವರ್ತಿ ಹಾಡುಗಳ ಅಬ್ಬರ !

Published on:  2016-12-24
Posted by:  Raksha

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಚಕ್ರವರ್ತಿ ಸಿನಿಮಾ ತುಂಬ ವಿಶೇಷವಾದದು, ಕಾರಣ ದರ್ಶನ್ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಡಿದ್ದು, ಅವರ  ಲುಕ್ ಗೆ ಎಲ್ಲರು ಫಿದಾ ಆಗೋದು ಗ್ಯಾರಂಟಿ. ಇನ್ನು ತಾರಾಗಣದಲ್ಲಿ ದರ್ಶನ್ ಜೊತೆ ದೀಪಾ ಸನ್ನಿಧಿ, ಆದಿತ್ಯ, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ಇಶಿತಾ ವ್ಯಾಸ ಮುಂತಾದವರು ತೆರೆಯನ್ನು ಹಂಚಿಕೊಂಡಿದ್ದಾರೆ. ಇದೆ ಮೊದಲ ಬಾರಿಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಈ ಚಿತ್ರಕ್ಕೆ ಬಣ್ಣ  ಹಚ್ಚಿದ್ದಾರೆ. ಇನ್ನು ಈ ಸಹೋದರರ ಕಾಂಬಿನೇಶನ್ ಹೇಗಿರುತ್ತೆ ಅಂತ ಎಲ್ಲರಿಗು ಕುತೂಹಲ.


ಚಕ್ರವರ್ತಿ ಸಿನಿಮಾದ ಆಡಿಯೋ ಲಾಂಚ್ ಮತ್ತು ಟೀಸರ್ ಜನೆವರಿ ೨೦೧೭, ಸಂಕ್ರಾಂತಿಗೆ ರಿಲೀಸ್ ಆಗಲಿದ್ದು ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಗಳಿಗೆ ಹಬ್ಬದ ದಿನ. ಇದೆ ಮೊದಲ ಬಾರಿಗೆ ಅರ್ಜುನ್ ಜನ್ಯ ರವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿಂತನ್ ರವರು ಈ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಕಾಲಿಡಲಿದ್ದಾರೆ. ಅಣಜಿ ನಾಗರಾಜ್ ರವರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇತ್ತೀಚಿಗೆ  ಕನ್ನಡ ಚಿತ್ರರಂಗದಲ್ಲಿ ಹೊಸಬರ ನಿರ್ದೇಶನದಲ್ಲಿ ಒಳ್ಳೆಯ ಸಿನೆಮಾಗಳು ಬಂದಿವೆ, ಚಿಂತನ್ ರವರ ಈ ಚೊಚ್ಚಲ ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕಾದು ನೋಡಬೇಕಾಗಿದೆ.


ಚಕ್ರವರ್ತಿ ಸಿನಿಮಾದಲ್ಲಿ ದರ್ಶನ್ ರವರ ಹೊಸ ಲುಕ್ ಚಿತ್ರದ ಹೈಲೈಟ್ ಆಗಿದ್ದು, ದರ್ಶನ್ ರವರು ಸಖತ್ತಾಗೆ ಕಾಣಿಸುತ್ತಿದ್ದಾರೆ. ಚಿತ್ರ ತಂಡ ಮಲೇಷ್ಯಾ, ಬ್ಯಾಂಕಾಕ್, ಮೈಸೂರು ಹೀಗೆ ಎಲ್ಲ ಕಡೆ ಚಿತ್ರೀಕರಣ` ಮುಗಿಸಿದ್ದು, ಇನ್ನು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿದ್ದು ಚಿತ್ರದ ಟೀಸರ್ ಮತ್ತು ಹಾಡುಗಳನ್ನ ಜನೆವರಿ ೧೫ ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆ.

loading...