ಕ್ಯಾಪ್ಸಿಕಂ ಚಾಟ್ ರೆಸಿಪಿ

Published on:  2016-10-30
Posted by:  Admin

ಕ್ಯಾಪ್ಸಿಕಂ(ದೊಡ್ಡ ಮೆಣಸಿನಕಾಯಿ ) ಚಾಟ್ ಮಾಡಲು ಬೇಕಾಗುವ ಪದಾರ್ಥಗಳು:

ಎಣ್ಣೆ                                      :               2 ಚಮಚ

ಹೆಚ್ಚಿದ ಈರುಳ್ಳಿ                       :               1

ಅಚ್ಚ ಖಾರದಪುಡಿ                   :               ½ ಚಮಚ

ಉಪ್ಪು                           :         ರುಚಿಗೆ  

ನಿಂಬೆರಸ                              :               ರುಚಿಗೆ

ಅರಶಿನ                                 :               ¼ ಚಮಚ

ಬೇಯಿಸಿ ಸಿಪ್ಪೆ ತೆಗೆದು ಪುಡಿಮಾಡಿದ ಆಲೂಗಡ್ಡೆ  :               2

ಇವುಗಳನ್ನು ಬಾಣಲೆಗೆ ಒಂದಾದ ಮೇಲೆ ಒಂದರಂತೆ ಹಾಕುತ್ತ ಬಡಿಸಿ , ಪಲ್ಯ ತಯಾರಿಸಬೇಕು

ಕಡ್ಲೆ ಹಿಟ್ಟು                                :               ½  ಲೋಟ

ಉಪ್ಪು                                      :               ರುಚಿಗೆ

ಅಚ್ಚಖಾರದ ಪುಡಿ                      :               ½ ಚಮಚ

ಮೇಲಿನ ಪದಾರ್ಥಗಳಿಗೆ ನೀರು ಹಾಕಿ ಹಿಟ್ಟು ಕಲಿಸಬೇಕು

ಇತರೆ :-

ದಪ್ಪ ಮೆಣಸಿನ ಕಾಯಿ ಮತ್ತು ಕರಿಯಲು ಎಣ್ಣೆ

ಕ್ಯಾಪ್ಸಿಕಂ ಚಾಟ್ ಮಾಡುವ ವಿಧಾನ :

. ದಪ್ಪ ಮೆಣಸಿನ ಕಾಯಿಯನ್ನು ಸಮನಾಗಿ ಅರ್ಧ ಭಾಗ ಕತ್ತರಿಸಿ , ಬೀಜ ತೆಗೆದು ನಂತರ ಕಲಸಿದ ಹಿಟ್ಟಲ್ಲಿ ಅಡ್ಡಿ ಕಾದ ಎಣ್ಣೆಗೆ ಹಾಕಿ ಕರಿಯಬೇಕು . ಕಲಸಿದ ಹಿಟ್ಟನ್ನು ಕ್ಯಾಪ್ಸಿಕಂ ಕಾಣುವಂತೆ ಸ್ವಲ್ಪ ಸವರಿದರು ಸಹ ಸಾಕು .

. ಕರಿದ ಕ್ಯಾಪ್ಸಿಕಂ ಒಳಗೆ ತಯಾರಾದ ಪಲ್ಯ ತುಂಬಿ ಮೇಲೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ , ತುರಿದ ಕ್ಯಾರಟ್, ಹೆಚ್ಚಿದ ಕೊತ್ತಂಬರಿ ಸೊಪ್ಪು , ಉಪ್ಪು , ನಿಂಬೆರಸ , ಚಾಟ್ ಮಸಾಲಾ ಪುಡಿ ಹಾಗು ಸೇವ್ ಇವುಗಳನ್ನು ಉದುರಿಸಬೇಕು

. ಈವಾಗ ಇದು ನೋಡಲು ತುಂಬಾ ಅಟ್ಟ್ರಕ್ಟಿವ್ ಆಗಿರುತ್ತದೆ . ತರಕಾರಿಗಳಿರುವುದರಿಂದ ಆರೋಗ್ಯಕರವಾಗಿ ಕೂಡ ಇರುತ್ತದೆ , ಕರಿದ ಪದಾರ್ಥ ವಾದ್ದರಿಂದ ರುಚಿಯಾಗಿ ಮಕ್ಕಳಿಗೆ ತುಂಬಾ ಇಷ್ಟ ವಾಗುತ್ತದೆ . ಇಂದರೆ  ಸಾಲಿಡ್ ಫುಡ್ ಸಹ ಆಗಿರುತ್ತದೆ .

loading...